TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ದರ್ಶನ್, ಸುದೀಪ್ ಮರೆತು ಧನುಷ್ ಗೆ ಜೈ ಎಂದ ರಮ್ಯಾ!

ನಟಿ ರಮ್ಯಾಗೆ ಕರ್ನಾಟಕದ ಕನೆಕ್ಷನ್ ದಿನೇ ದಿನೇ ಕಡಿಮೆ ಆಗುತ್ತಿದೆ. ರಾಜಕೀಯ ಆಗಿರಬಹುದು, ಸಿನಿಮಾ ಆಗಿರಬಹುದು ರಮ್ಯಾ ಪಾಲಿಗೆ ಕನ್ನಡ ನಾಡು ದೂರ ಆಗುತ್ತಲೇ ಇದೆ.
ಮತ್ತೊಂದು ಕಡೆ ರಮ್ಯಾಗೆ ಕನ್ನಡದ ಅಭಿಮಾನ ಕೂಡ ಕಡಿಮೆ ಆಗುತ್ತಿದೆಯಾ ಎನ್ನುವ ಪ್ರಶ್ನೆ ಮೂಡುತ್ತದೆ. 'ಎಲ್ಲದರೂ ಇರು ಎಂತಾದರೂ ಇರು ಎಂದೆದಿಗೂ ನೀ ಕನ್ನಡವಾಗಿರು' ಎಂಬ ಮಾತಿದೆ. ಆದರೆ, ಕರ್ನಾಟಕದಲ್ಲಿ ಹುಟ್ಟಿ, ಇಲ್ಲಿಯೇ ಬೆಳೆದ ರಮ್ಯಾ ಮಾತ್ರ ಹತ್ತಿದ ಏಣಿಯನ್ನು ಒದೆಯುವ ಕೆಲಸ ಮಾಡಿದ್ರಾ ಎನ್ನುವ ಭಾವನೆ ಮೂಡುತ್ತದೆ.
ಬರೋಬ್ಬರಿ 100 ಮಿಲಿಯನ್ ಹಿಟ್ಸ್ ಪಡೆದ ರೌಡಿ ಬೇಬಿ ಹಾಡು
ನಟಿ ರಮ್ಯಾ ಬಗ್ಗೆ ಇಷ್ಟೆಲ್ಲ ಹೇಳುವುದಕ್ಕೂ ಒಂದು ಕಾರಣ ಇದೆ. ಅದು ಅವರು ಇಂದು ಮಾಡಿರುವ ಒಂದು ಟ್ವೀಟ್. ನಟ ದರ್ಶನ್, ಸುದೀಪ್, ಯಶ್ ರನ್ನು ಮರೆತಿರುವ ರಮ್ಯಾ ಧನುಷ್ ಗೆ ಜೈ ಎಂದಿದ್ದಾರೆ. ಅಂದಹಾಗೆ, ಈ ಬಗ್ಗೆ ಸಂಪೂರ್ಣ ವಿವರ ಮುಂದಿದೆ ಓದಿ...
ಧನುಷ್ ಗೆ ಜೈ ಎಂದ ಮಂಡ್ಯ ಮೇಡಂ
ತಮಿಳು ನಟ ಧನುಷ್ ಅಭಿನಯದ 'ಮಾರಿ 2' ಸಿನಿಮಾದ 'ರೌಡಿ ಬೇಬಿ..' ಹಾಡು ಇದೀಗ ಯೂ ಟ್ಯೂಬ್ ನಲ್ಲಿ 100 ಮಿಲಿಯನ್ ಹಿಟ್ಸ್ ಪಡೆದುಕೊಂಡಿದೆ. ಈ ಸಿನಿಮಾದ ಹಾಡಿಗೆ ನಟಿ ರಮ್ಯಾ ಟ್ವಿಟ್ಟರ್ ನಲ್ಲಿ ಶುಭ ಕೋರಿದ್ದಾರೆ. ''ಎಂತಹ ಹಾಡು ಡಿ!, ಹಾಡು 100 ಮಿಲಿಯನ್ ಆಗಿದೆ. ಯುವನ್ ಶಂಕರ್ ರಾಜ್ ನಿಮ್ಮ ಬಗ್ಗೆ ಬಹಳ ಖುಷಿ ಆಗುತ್ತಿದೆ.'' ಎಂದು ಟ್ವೀಟ್ ಮಾಡಿದ್ದಾರೆ.
'ಯಜಮಾನ', 'ಪೈಲ್ವಾನ್'ರನ್ನು ಗಮನಿಸಲಿಲ್ಲ
ಕೆಲವೇ ದಿನಗಳ ಹಿಂದೆ ಬಿಡುಗಡೆಯಾದ ದರ್ಶನ್ ಅವರ 'ಯಜಮಾನ' ಸಿನಿಮಾದ ಹಾಡು ಹಾಗೂ ಸುದೀಪ್ ನಟನೆಯ 'ಪೈಲ್ವಾನ್' ಸಿನಿಮಾದ ಟೀಸರ್ ಕೂಡ ಯೂ ಟ್ಯೂಬ್ ನಲ್ಲಿ ದೊಡ್ಡ ಹಿಟ್ ಆಗಿವೆ. ಆ ಚಿತ್ರಗಳ ಬಗ್ಗೆ ಏನು ಮಾತನಾಡದ ರಮ್ಯಾ 'ಮಾರಿ 2' ಚಿತ್ರದ ಹಾಡನ್ನು ಮಾತ್ರ ಹೊಗಳಿದ್ದಾರೆ.
ರಾತ್ರೋರಾತ್ರಿ ಮಂಡ್ಯದ ಬಾಡಿಗೆ ಮನೆ ಖಾಲಿ ಮಾಡಿದ ರಮ್ಯಾ.!
ಕನ್ನಡಭಿಮಾನಿಗಳ ಪ್ರಶ್ನೆ
ರಮ್ಯಾ ಟ್ವೀಟ್ ಗೆ ಕೆಲವು ಕನ್ನಡಿಗರು ಪ್ರತಿಕ್ರಿಯೆ ನೀಡಿದ್ದಾರೆ. ಕನ್ನಡ ಮರೆತು ತಮಿಳು ಸಿನಿಮಾವನ್ನು ಹೊಗಳಿದ ರಮ್ಯಾಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. 'ಕೆಜಿಎಫ್' ಸಿನಿಮಾ ದೊಡ್ಡ ಮಟ್ಟದ ಹಿಟ್ ಆಗಿದೆ. ಇಡೀ ದೇಶವೇ ಆ ಸಿನಿಮಾದ ಬಗ್ಗೆ ಮಾತನಾಡುತ್ತಿದೆ. ಆದರೆ, ಆಗ ಸುಮ್ಮನಿದ್ದ ನೀವು 'ಮಾರಿ 2' ಬಗ್ಗೆ ಟ್ವೀಟ್ ಮಾಡಿದ್ದು ಸರಿಯೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಹೊಗಳಿದ್ದು ತಪ್ಪಲ್ಲ, ಮರೆತಿದ್ದು ತಪ್ಪು
ರಮ್ಯಾ ತಮಿಳು ಸಿನಿಮಾದ ಹಾಡನ್ನು ಹೊಗಳಿದ್ದು, ಖಂಡಿತ ತಪ್ಪಲ್ಲ. ಒಂದು ಒಳ್ಳೆಯ ವಿಷಯ ಯಾವುದೇ ಭಾಷೆಯಲ್ಲಿ ಬರಲಿ, ಅದನ್ನು ಯಾರೇ ಮಾಡಲಿ, ಅಂತವುದನ್ನು ಮೆಚ್ಚಿಕೊಳ್ಳುವುದು ದೊಡ್ಡತನ. ಆದರೆ, ರಮ್ಯಾ ಕನ್ನಡ ಸಿನಿಮಾಗಳನ್ನು ಬಿಟ್ಟು ಬರೀ ತಮಿಳು ಚಿತ್ರವನ್ನು ಹೊಗಳಿದ್ದು, ಎಲ್ಲರಿಗೂ ಅಸಮಾಧಾನ ಉಂಟು ಮಾಡಿದೆ.
ಎಲ್ಲ ನಟರ ಜೊತೆಗೆ ಸಿನಿಮಾ
ರಮ್ಯಾ ನಟ ಧನುಷ್ ಜೊತೆಗೆ ತಮಿಳು ಸಿನಿಮಾ ಮಾಡಿದ್ದಾರೆ ನಿಜ. ಆದರೆ, ಅದೆ ರೀತಿ ಕನ್ನಡದಲ್ಲಿಯೂ ದರ್ಶನ್, ಸುದೀಪ್ ಹಾಗೂ ಯಶ್ ಸಿನಿಮಾಗಳಲ್ಲಿ ನಾಯಕಿಯರಾಗಿದ್ದರು. ಕನ್ನಡದಲ್ಲಿ ಒಂದು ಕಾಲಕ್ಕೆ ಟಾಪ್ ಓನ್ ನಟಿಯಾಗಿದ್ದ ರಮ್ಯಾ ಈಗ ಕನ್ನಡ ಚಿತ್ರವನ್ನ ಮರೆತಿರುವುದು ಬೇಸರದ ಸಂಗತಿ.