'ಮದರ್ಸ್ ಡೇ'ಗೆ ಜೋಗಿ ಪ್ರೇಮ್ ಕೊಟ್ರು ವಿಶೇಷ ಉಡುಗೊರೆ
ಕನ್ನಡ ಸಿನಿಮಾಗಳಲ್ಲಿ ಮದರ್ ಸೆಂಟಿಮೆಂಟ್ ಅಂದ್ರೆ ಮೊದಲು ನೆನಪಾಗುವುದು ನಿರ್ದೇಶಕ ಪ್ರೇಮ್. ಯಾಕಂದ್ರೆ, 'ಜೋಗಿ', 'ಎಕ್ಸ್ ಕ್ಯೂಸ್ ಮಿ', 'ಜೋಗಯ್ಯ' ಹೀಗೆ ತಮ್ಮ ಎಲ್ಲ ಸಿನಿಮಾಗಳಲ್ಲೂ ತಾಯಿಯ ಪ್ರೀತಿ, ಮಮತೆಯನ್ನ ತಮ್ಮದೇ ಸ್ಟೈಲ್ ನಲ್ಲಿ ತೆರೆ ಮೇಲೆ ತಂದಿದ್ದಾರೆ ಪ್ರೇಮ್.[ನಾಯಕಿಯರಿಗಾಗಿ 'ಚೆನ್ನೈ ಟು ಬಾಂಬೆ' ಹುಡುಕುತ್ತಿರುವ 'ದಿ ವಿಲನ್'!]
ಇದೀಗ, ನಿರ್ದೇಶಕ ಪ್ರೇಮ್ ವಿಶ್ವ ಅಮ್ಮಂದಿರ ದಿನಕ್ಕೆ ಒಂದು ವಿಶೇಷವಾದ ಉಡುಗೊರೆ ನೀಡಿದ್ದಾರೆ. ತಮ್ಮ ಮುಂದಿನ ಸಿನಿಮಾ 'ಗಾಂಧಿಗಿರಿ' ಚಿತ್ರದ ಒಂದು ಪೋಸ್ಟರ್ ಬಿಡುಗಡೆ ಮಾಡಿದ್ದು, ಈ ಚಿತ್ರದಲ್ಲೂ ಮದರ್ ಸೆಂಟಿಮೆಂಟ್ ಪ್ರಮುಖವಾಗಿದೆ ಎಂಬುದನ್ನ ಈ ಪೋಸ್ಟರ್ ನಲ್ಲಿ ರಿವಿಲ್ ಮಾಡಿದ್ದಾರೆ.['ದಿ ವಿಲನ್' ಫಸ್ಟ್ ಲುಕ್ ರಿಲೀಸ್: ರಾಮ ಯಾರು? ರಾವಣ ಯಾರು? ]

ಅಂದ್ಹಾಗೆ, 'ಗಾಂಧಿಗಿರಿ' ಚಿತ್ರದಲ್ಲಿ ಪ್ರೇಮ್ ನಾಯಕ. ಇಲ್ಲಿ ಪ್ರೇಮ್ ಗೆ ತಾಯಿಯಾಗಿ ನಟಿ ಅರುಂಧತಿನಾಗ್ ಕಾಣಸಿಕೊಂಡಿದ್ದಾರೆ. ಜೋಗಿ ಸಿನಿಮಾದ ಬಳಿಕ ಮತ್ತೆ ಪ್ರೇಮ್ ಹಾಗೂ ಅರುಂಧತಿ ನಾಗ್ ಕಾಂಬಿನೇಷನ್ ನಲ್ಲಿ ಈ ಸಿನಿಮಾ ಬರುತ್ತಿರುವುದು ಸಾಮಾನ್ಯವಾಗಿ ನಿರೀಕ್ಷೆ ಹೆಚ್ಚಿಸಿದೆ.['ದಿ ವಿಲನ್' ಚಿತ್ರಕ್ಕಾಗಿ ಸುದೀಪ್ 'ಹಿಂದಿನ' ಅವತಾರ.. ನಿಮ್ಮ ಕಣ್ಣಿಗೆ ಕಂಡಿಲ್ಲದ್ದು.! ]
'ಗಾಂಧಿಗಿರಿ' ಸಿನಿಮಾವನ್ನ ಪ್ರೇಮ್ ಶಿಷ್ಯ ರಘು ಹಾಸನ್ ನಿರ್ದೇಶನ ಮಾಡಿದ್ದಾರೆ. ನಟಿ ರಾಗಿಣಿ ದ್ವಿವೇದಿ ನಾಯಕಿಯಾಗಿದ್ದು, ಟೀಚರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ, 'ಗಾಂಧಿಗಿರಿ' ಚಿತ್ರದ ಚಿತ್ರೀಕರಣ ಕೊನೆಯ ಹಂತದಲ್ಲಿದೆ.


Click it and Unblock the Notifications











