ಟ್ರೈಲರ್: ಸ್ಯಾಂಡಲ್ ವುಡ್ ನಲ್ಲಿ ಹಾರಲು ಆರಂಭಿಸಿದ 'ಗರುಡ'

'ಸಿಪಾಯಿ' ನಂತರ ಸಿದ್ಧಾರ್ಥ್ ಮಹೇಶ್ 'ಗರುಡ' ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರೆದುರು ಬರುತ್ತಿದ್ದಾರೆ. ಈಗಷ್ಟೇ ಗರುಡ ಟ್ರೈಲರ್ ಬಿಡುಗಡೆಯಾಗಿದ್ದು, ಸ್ಯಾಂಡಲ್ ವುಡ್ ನಲ್ಲಿ ಸದ್ದು ಆರಂಭಿಸಿದೆ.

ಟೆರರಿಸಂ, ಅಂಡರ್ ವರ್ಲ್ಟ್ ಸುತ್ತ ನಡೆಯುವ ಈ ಕಥೆ ಬಹಳ ರೋಚಕವಾಗಿರಲಿದೆ ಎಂದು ಭರವಸೆ ಟ್ರೈಲರ್ ನೋಡಿದ್ಮೇಲೆ ಹುಟ್ಟಿಕೊಂಡಿದೆ. ಆದರೆ, ಇದಕ್ಕೂ ಮೀರಿ ಚಿತ್ರದಲ್ಲಿ ಬೇರೆ ಏನೋ ಸ್ಪೆಷಲ್ ಅಂಶಗಳು ಇದೆ ಎನ್ನುವುದರಲ್ಲಿ ಕುತೂಹಲವಿದೆ.

ಅದಕ್ಕೆ ತಕ್ಕಂತೆ ಸಿದ್ಧಾರ್ಥ್ ಮತ್ತು ಶ್ರೀನಗರ ಕಿಟ್ಟಿ ಜುಗಲ್ ಬಂಧಿ ಕಾಣುತ್ತಿದೆ. ಹೌದು, ಸಿದ್ಧಾರ್ಥ್ ಜೊತೆಯಲ್ಲಿ ಶ್ರೀನಗರ ಕಿಟ್ಟಿ ಕೂಡ ತೆರೆಹಂಚಿಕೊಂಡಿದ್ದ, ಪೊಲೀಸ್ ಕಾಪ್ ಆಗಿ ಮಿಂಚಿದ್ದಾರೆ.

Kannada Movie Garuda Trailer Released

ಸಿದ್ಧಾರ್ಥ್ ಗೆ ಜೊಡಿಯಾಗಿ ಆಶಿಕಾ ರಂಗನಾಥ್ ಮತ್ತು ಐಂದ್ರಿತಾ ರೇ ಇಬ್ಬರು ನಟಿಸಿದ್ದಾರೆ. ನೃತ್ಯ ಸಂಯೋಜಕ ಧನುಕುಮಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಆರೇಂಜ್ ಫಿಕ್ಸಲ್ ಫಿಲಂ ಫ್ಯಾಕ್ಟರಿ ಬ್ಯಾನರ್ ನಲ್ಲಿ ರಾಜರೆಡ್ಡಿ, ಕಿಶೋರ್ ಎ, ಪ್ರಸಾದ್ ರೆಡ್ಡಿ ನಿರ್ಮಿಸಿದ್ದಾರೆ. ವಿಶೇಷ ಅಂದ್ರೆ ಗರುಡ ಚಿತ್ರಕ್ಕೆ ನಾಯಕನಟ ಸಿದ್ಧಾರ್ಥ್ ಮಹೇಶ್ ಅವರು ಕಥೆ ಮತ್ತು ಚಿತ್ರಕಥೆ ಬರೆದಿದ್ದಾರೆ.

Kannada Movie Garuda Trailer Released

ಇನ್ನುಳಿದಂತೆ ರಾಜೇಶ್ ನಟರಂಗ, ರವಿಶಂಕರ್ ಗೌಡ, ರಘು ದೀಕ್ಷೀತ್, ಆದಿ ಲೋಕೇಶ್, ರಂಗಾಯಣ ರಘು ಸೇರಿದಂತೆ ದೊಡ್ಡ ತಾರಬಳಗ ಹೊಂದಿದೆ. ಜೈ ಆನಂದ್ ಅವರ ಛಾಯಾಗ್ರಹಣ, ರಘುದೀಕ್ಷಿತ್ ಅವರ ಸಂಗೀತವಿದೆ. ಸದ್ಯ ಟ್ರೈಲರ್ ಮೂಲಕ ಗಾಂಧಿನಗರದಲ್ಲಿ ಹಾರಾಡುತ್ತಿರುವ ಗರುಡ ಸದ್ಯದಲ್ಲೇ ಚಿತ್ರಮಂದಿರಲ್ಲಿ ಲ್ಯಾಂಡ್ ಆಗಲಿದೆ.

More from Filmibeat

English summary
Siddharth mahesh, sri nagara kittiy, ashika ranganath, aindrita ray starrer garuda movie trailer released.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X