For Quick Alerts
  ALLOW NOTIFICATIONS  
  For Daily Alerts

  ರಂಗಭೂಮಿ ಕಲಾವಿದರ ಧೈರ್ಯ ಮತ್ತು ಕಥೆಯೇ 'ಗಿಣಿ'ಯ ಶಕ್ತಿ

  |

  'ಗಿಣಿ ಹೇಳಿದ ಕಥೆ' ಸಿನಿಮಾ ಇದೇ ವಾರ ಅಂದ್ರೆ ಜನವರಿ 11 ರಂದು ರಾಜ್ಯಾದ್ಯಂತೆ ತೆರೆಕಾಣುತ್ತಿದೆ. ಯಾವುದೇ ದೊಡ್ಡ ಸ್ಟಾರ್ ನಟ, ನಿರ್ದೇಶಕ, ನಟಿ ಎನ್ನವ ಸೂತ್ರವಿಲ್ಲದೇ ಎಲ್ಲ ಹೊಸ ಕಲಾವಿದರೇ ಸೇರಿ ಮಾಡಿರುವುದು ಚಿತ್ರ ಎನ್ನುವುದೇ ಇದರ ಹೈಲೈಟ್.

  ಹೊಸಬರ ಸಿನಿಮಾ ಅಂದಾಕ್ಷಣ ಏನ್ ಸ್ಪೆಷಲ್ ಎಂಬ ಪ್ರಶ್ನೆ ಬರೋದು ಸಹಜ. ಇತರೆ ಸಿನಿಮಾಗಳಿಂತ ಇದು ಡಿಫ್ರೆಂಟ್, ಆಗಿದೆ, ಹೀಗಿದೆ, ಸೂಪರ್, ಅದ್ಭುತ ಎಂಬ ಬಿಲ್ಡಪ್ ಈ ಚಿತ್ರಕ್ಕೆ ಬೇಡ. ಯಾಕಂದ್ರೆ, ಈ ಚಿತ್ರದಲ್ಲೊಂದು ಕಥೆಯಿದೆ. ಈ ಕಥೆ ಪ್ರೇಕ್ಷಕರಿಗೆ ಇಷ್ಟವಾಗುತ್ತೆ. ಕಥೆಯೇ ಚಿತ್ರದ ಶಕ್ತಿ. ನೋಡುಗರಿಗೆ ಖುಷಿ ಕೊಡುತ್ತೆ ಎಂಬುದೇ ಚಿತ್ರತಂಡದ ಧೈರ್ಯ.

  'ಗಿಣಿ ಹೇಳಿದ ಕಥೆ'ಯನ್ನ ನೀವು ಈ ವಾರ ನೋಡಬಹುದು

  ಈ ಧೈರ್ಯಕ್ಕೆ ತಕ್ಕಂತೆ ಸಿನಿಮಾ ಮಾಡಿದ್ದಾರೆ ನಟ-ನಿರ್ಮಾಪಕ ದೇವ್ ರಂಗಭೂಮಿ. ನಟನೆ, ನಿರ್ಮಾಣದ ಜೊತೆಗೆ ಕಥೆ-ಚಿತ್ರಕಥೆ-ಸಂಭಾಷಣೆ ಕೂಡ ಅವರದ್ದೇ. ನಾಯಕಿ ಮತ್ತು ಇನ್ನೆರಡು ಪಾತ್ರವನ್ನ ಬಿಟ್ಟು ಇಡೀ ಸಿನಿಮಾದಲ್ಲಿ ಶೇಕಡಾ 99 ರಷ್ಟು ಕಲಾವಿದರು ರಂಗಭೂಮಿ ಹಿನ್ನಲೆ ಉಳ್ಳವರು. ಇದು ಈ ಚಿತ್ರದ ವಿಶೇಷತೆಗಳಲ್ಲಿ ಒಂದು ಹಾಗೂ ಅವರ ಧೈರ್ಯವಾಗಿದೆ.

  ಬೆಂಗಳೂರಿನಿಂದ ಮಡಿಕೇರಿಗೆ ಕಾರಿನಲ್ಲಿ ಪ್ರಯಾಣಿಸುವಾಗ ಚಾಲಕ ಮತ್ತು ಪ್ಯಾಸೆಂಜರ್ ನಡುವೆ ನಡೆಯುವ ಕಥೆ. ಈ ಕಥೆಯಲ್ಲಿ ಲವ್ ಇದೆ, ಆಕ್ಷನ್ ಇದೆ, ಸೆಂಟಿ ಮೆಂಟ್ ಇದೆ, ಕಾಮಿಡಿ ಇದೆ, ಭರ್ಜರಿ ಡೈಲಾಗ್ಸ್ ಇದೆ. ಒಂದು ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಎಲ್ಲ ಎಲಿಮೆಂಟ್ಸ್ ಇಟ್ಟು ಗಿಣಿ ಹೇಳಿದ ಕಥೆಯಾಗಿದೆ.

  ಗೀತಾಂಜಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಶಿಕ್ಷಕಿ ಪಾತ್ರದಲ್ಲಿ ಪಡ್ಡೆ ಹೈಕ್ಳ ದಿಲ್ ಕದಿಯಲು ಸಜ್ಜಾಗಿದ್ದಾರೆ. ಮಾಲತೇಶ್, ನೀತುರಾಯ್, ಹಾವೇರಿ ಶ್ರೀಧರ್, ಮಹಂತೇಶ್, ಮುಂತಾದವರಿದ್ದಾರೆ. ಅಂದ್ಹಾಗೆ, ಈ ಚಿತ್ರವನ್ನ ನಿರ್ದೇಶನ ಮಾಡಿರೋದು ನಾಗರಾಜ್ ಉಪ್ಪುಂದ. ನಿರ್ದೇಶನದ ಜೊತೆಗೆ ಛಾಯಾಗ್ರಹಣದ ಜವಾಬ್ದಾರಿಯೂ ಇವರದ್ದೇ. ಹಿತನ್ ಹಾಸನ್ ಅವರು ಸಂಗೀತ ನೀಡಿದ್ದಾರೆ.

  English summary
  Dev Rangabhoomi and githanajli starrer gini helida kathe will release on january 11th. the movie directed by nagaraju.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X