twitter
    For Quick Alerts
    ALLOW NOTIFICATIONS  
    For Daily Alerts

    ಕ್ರೈಮ್-ಹುಡುಕಾಟಗಳ ನಡುವೆ ಕಳೆದು ಹೋಗುವ ಕಥೆ "GBSM"

    By Suneetha
    |

    ರಕ್ಷಿತ್ ಶೆಟ್ಟಿ, ಶ್ರುತಿ ಹರಿಹರನ್ ಮತ್ತು ಅನಂತ್ ನಾಗ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಬಹುನಿರೀಕ್ಷಿತ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರ ಸೆನ್ಸಾರ್ ಮಂಡಳಿಯಿಂದ ಕ್ಲೀನ್ ಚಿಟ್ ಪಡೆದುಕೊಂಡಿದೆ.

    ನಿರ್ದೇಶಕ ಹೇಮಂತ್ ಎಂ ರಾವ್ ಆಕ್ಷನ್-ಕಟ್ ಹೇಳಿರುವ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯಾವುದೇ ಕತ್ತರಿ ಪ್ರಯೋಗ ಮಾಡದೇ ಯು/ಎ ಪ್ರಮಾಣ ಪತ್ರ ನೀಡುವ ಮೂಲಕ ಸಿನಿಮಾ ಬಿಡುಗಡೆ ಹಾದಿ ಸುಗಮಗೊಳಿಸಿದೆ.['ಗೋಧಿ ಬಣ್ಣ' ಇರುವವರು ಕಳೆದು ಹೋಗಿದ್ದಾರೆ ಹುಡುಕಿ ಕೊಡಿ ಪ್ಲೀಸ್...]

    Kannada movie 'Godhi Banna Sadharna Mykattu' gets U/A certificate

    'ಈ ಚಿತ್ರ ಬರೀ ಕಾಣೆಯಾದವರ ಬಗ್ಗೆ ಮಾತ್ರ ವಿವರಿಸುವುದಲ್ಲದೇ, ಇದರಲ್ಲಿ ಕ್ರೈಂ ಕೋನವು ಇದೆ. ಈ ಸಿನಿಮಾದಲ್ಲಿ 5 ಕೊಲೆಯಾಗುತ್ತದೆ. ಒಟ್ಟಿನಲ್ಲಿ ಹುಡುಕಾಟದಲ್ಲಿ ತಮ್ಮನ್ನು ತಾವೇ ಕಳೆದುಕೊಳ್ಳುತ್ತಾರೆ' ಎಂದು ವಿವರಿಸುತ್ತಾರೆ ನಿರ್ದೇಶಕ ಹೇಮಂತ್ ಅವರು.['ಗೋಧಿ ಬಣ್ಣ ಸಾಧರಣ ಮೈ ಕಟ್ಟು' ಪತ್ತೆ ಹಚ್ಚಲಾದ ಪಾತ್ರಗಳು]

    Kannada movie 'Godhi Banna Sadharna Mykattu' gets U/A certificate

    ನಿರ್ಮಾಪಕ ಪುಷ್ಕರ ಮಲ್ಲಿಕಾರ್ಜುನಯ್ಯ ಬಂಡವಾಳ ಹೂಡಿರುವ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನಿಮಾ ಮೇ 27 ರಂದು ಇಡೀ ಕರ್ನಾಟಕದಾದ್ಯಂತ ಭರ್ಜರಿಯಾಗಿ ತೆರೆ ಕಾಣುತ್ತಿದೆ.[ಡಬ್ಬಿಂಗ್ ನಲ್ಲಿ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಬಿಜಿ]

    Kannada movie 'Godhi Banna Sadharna Mykattu' gets U/A certificate

    ರಕ್ಷಿತ್ ಶೆಟ್ಟಿ ಅವರ ತಂದೆ ವೆಂಕೋಬ್ ರಾವ್ ಪಾತ್ರದಲ್ಲಿ ನಟ ಅನಂತ್ ನಾಗ್ ಅವರು ಕಾಣಿಸಿಕೊಂಡಿದ್ದು, ಇಡೀ ಚಿತ್ರದ ಕೇಂದ್ರ ಬಿಂದು ಅವರೇ ಎನ್ನಬಹುದು. ಸಂಗೀತ ನಿರ್ದೇಶಕ ಚರಣ್ ರಾಜ್ ಮ್ಯೂಸಿಕ್ ಕಂಪೋಸ್ ಮಾಡಿರುವ ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿದ್ದು, ಚಿತ್ರದ ಬಗ್ಗೆ ಅಭಿಮಾನಿಗಳು ಕೂಡ ಸಾಕಷ್ಟು ಕುತೂಹಲ ಇಟ್ಟುಕೊಂಡಿದ್ದಾರೆ.

    English summary
    Kannada movie 'Godhi Banna Sadharna Mykattu' gets U/A Certificate from the Censor Board. 'Godhi Banna Sadharna Mykattu' features Kannada actor Rakshit shetty, Kannada actor Ananthnag, Kannada actress Sruthi Hariharan in the lead role. The movie is directed by Hemanth Rao.
    Wednesday, May 18, 2016, 11:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X