For Quick Alerts
  ALLOW NOTIFICATIONS  
  For Daily Alerts

  ರಕ್ಷಿತ್ ಶೆಟ್ಟಿ ಅಭಿಮಾನಿಗಳಿಗೊಂದು ಬ್ಯಾಡ್ ನ್ಯೂಸ್

  By Suneetha
  |

  ನಿರ್ದೇಶಕ ಹೇಮಂತ್ ರಾವ್ ನಿರ್ದೇಶನ ಮಾಡಿರುವ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರ ಮುಂದಿನ ವಾರ ತೆರೆ ಕಾಣುತ್ತಿದೆ ಅಂತ ಆಸೆಯಿಂದ ಕಾದು ಕುಳಿತಿದ್ದವರಿಗೆ ಒಂದು ಬ್ಯಾಡ್ ನ್ಯೂಸ್ ಕಾದಿದೆ.

  ಹೌದು ಮುಂದಿನ ಶುಕ್ರವಾರ (ಮೇ 27) ರಂದು ತೆರೆ ಕಾಣುತ್ತಿದೆ ಎಂದಾಗಿದ್ದ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದೆ. ಮೇ 27ಕ್ಕೆ ತೆರೆ ಕಾಣಬೇಕಿದ್ದ ಈ ಸಿನಿಮಾ ಇದೀಗ ಜೂನ್ ಮೊದಲ ವಾರ ಅಂದರೆ 3ನೇ ತಾರೀಖಿನಂದು ತೆರೆ ಕಾಣಲಿದೆ.[ಕ್ರೈಮ್-ಹುಡುಕಾಟಗಳ ನಡುವೆ ಕಳೆದು ಹೋಗುವ ಕಥೆ "GBSM"]

  ಮುಂದಿನ ಶುಕ್ರವಾರ, ಮೇ 27 ರಂದು ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಬಹುನಿರೀಕ್ಷಿತ ಸಿನಿಮಾ 'ಅಪೂರ್ವ' ತೆರೆ ಕಾಣುತ್ತಿದೆ. ಜೊತೆಗೆ 'ತಿಥಿ' ಹಾಗೂ 'ಇಷ್ಟಕಾಮ್ಯ' ಸಿನಿಮಾಗಳು ಎಲ್ಲಾ ಕಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಒಟ್ನಲ್ಲಿ ಥಿಯೇಟರ್ ಸಮಸ್ಯೆ ಇರುವುದರಿಂದ ಯಾರಿಗೂ ತೊಂದರೆ ಉಂಟು ಮಾಡಲು ಇಷ್ಟಪಡದ ನಿರ್ಮಾಪಕ ಪುಷ್ಕರ್ ಅವರು ಜೂನ್ 3ನೇ ತಾರೀಖಿಗೆ ಚಿತ್ರ ಬಿಡುಗಡೆಯನ್ನು ಮುಂದೂಡಿದ್ದಾರೆ.['ಗೋಧಿ ಬಣ್ಣ' ಇರುವವರು ಕಳೆದು ಹೋಗಿದ್ದಾರೆ ಹುಡುಕಿ ಕೊಡಿ ಪ್ಲೀಸ್...]

  ಟ್ರೈಲರ್ ಮೂಲಕ ಭಾರಿ ಕುತೂಹಲ ಹುಟ್ಟಿಸಿದ್ದ ಈ ಸಿನಿಮಾದಲ್ಲಿ ಕಳೆದು ಹೋದವರ ಬಗ್ಗೆ ಮತ್ತು ಕೊಲೆಯ ಸುತ್ತ ನಡೆಯುವ ಘಟನೆಗಳ ಬಗ್ಗೆ ವಿವರಿಸಲಾಗಿದೆ. ಚಿತ್ರದಲ್ಲಿ ನಟ ರಕ್ಷಿತ್ ಶೆಟ್ಟಿ ಅವರು ಉದ್ಯಮಿ ಪಾತ್ರ ವಹಿಸಿದ್ದು, ಮರೆವಿನ ಖಾಯಿಲೆ ಇರುವ ತಮ್ಮ ತಂದೆ ವೆಂಕೋಬ್ ರಾವ್ ಕಳೆದು ಹೋಗಿದ್ದು ಅವರನ್ನು ಹುಡುಕುವ ಭರಾಟೆಯಲ್ಲಿ ತಾವೇ ಕಳೆದುಹೋಗುತ್ತಾರೆ.['ಗೋಧಿ ಬಣ್ಣ ಸಾಧರಣ ಮೈ ಕಟ್ಟು' ಪತ್ತೆ ಹಚ್ಚಲಾದ ಪಾತ್ರಗಳು]

  ಚಿತ್ರದಲ್ಲಿ ನಟ ರಕ್ಷಿತ್ ಶೆಟ್ಟಿ ಅವರ ಜೊತೆ ನಟಿ ಶ್ರುತಿ ಹರಿಹರನ್, ಅನಂತ್ ನಾಗ್, ಅಚ್ಯುತ್ ಕುಮಾರ್ ಮತ್ತು ವಸಿಷ್ಟ ಎನ್ ಸಿಂಹ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

  English summary
  Kannada actor Rakshit shetty, Kannada actor Ananth Nag starrer 'Godhi Banna Sadharana Maikattu' which is directed by Hemanth Rao is all set to release on the 03rd of June. Earlier, the film was scheduled for a May 27th release. However, the film has been postponed due to various reasons.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X