»   » ಬಿಡುಗಡೆಗೂ ಮುಂಚೆಯೇ 'ಗೂಗಲ್' ಚಿತ್ರಕ್ಕೆ ಭಾರಿ ಡಿಮ್ಯಾಂಡ್

ಬಿಡುಗಡೆಗೂ ಮುಂಚೆಯೇ 'ಗೂಗಲ್' ಚಿತ್ರಕ್ಕೆ ಭಾರಿ ಡಿಮ್ಯಾಂಡ್

Posted By:
Subscribe to Filmibeat Kannada

ಕಳೆದ ವರ್ಷದಲ್ಲಿ ಚಿತ್ರ ಸಾಹಿತಿ ಡಾ.ವಿ ನಾಗೇಂದ್ರ ಪ್ರಸಾದ್ ಮತ್ತು ನಟಿ ಶುಭ ಪೂಂಜಾ ಇಬ್ಬರು ಮದುವೆ ಆಗಿರುವ ರೀತಿಯಲ್ಲಿ ಒಂದು ಫೋಟೋ ಬಹಿರಂಗವಾಗಿತ್ತು. ಈ ಫೋಟೋ ನೋಡಿ ಇವರಿಬ್ಬರು ನಿಜವಾಗಲೂ ಮದುವೆಯಾಗಿದ್ದಾರೆ ಎಂದು ಮಾಧ್ಯಮಗಳಲ್ಲೂ ಕೂಡ ಸುದ್ದಿಯಾಗಿತ್ತು. ಆದ್ರೆ, ಅದು ನಿಜ ಅಲ್ಲ, ಸಿನಿಮಾ ಎಂದು ಆಮೇಲೆ ಗೊತ್ತಾಯಿತು.

ಹೀಗೆ, ಆರಂಭದಲ್ಲೇ ದೊಡ್ಡ ಸುದ್ದಿ ಮಾಡಿದ್ದ 'ಗೂಗಲ್' ಸಿನಿಮಾ ಈಗ ತೆರೆಗೆ ಬರಲು ಸಜ್ಜಾಗಿದೆ. ಫೆಬ್ರವರಿ 16 ರಂದು ರಾಜ್ಯಾದ್ಯಂತ 'ಗೂಗಲ್' ಸಿನಿಮಾ ರಿಲೀಸ್ ಆಗ್ತಿದೆ. ಟ್ರೈಲರ್ ಮತ್ತು ಹಾಡುಗಳ ಮೂಲಕ ಸದ್ದು ಮಾಡ್ತಿರೋ ಈ ಚಿತ್ರದ ರೀಮೇಕ್ ಹಕ್ಕಿಗೆ ಭಾರಿ ಡಿಮ್ಯಾಂಡ್ ಬಂದಿದೆ.

ಫೋಟೋ: ನಟಿ ಶುಭ ಪುಂಜ ಜೊತೆ ವಿ.ನಾಗೇಂದ್ರ ಪ್ರಸಾದ್ ಮದುವೆ?

ಬಿಡುಗಡೆಯಾಗದ 'ಗೂಗಲ್' ಚಿತ್ರದ ಟ್ರೈಲರ್ ನೋಡಿ ತಮಿಳು ನಿರ್ಮಾಪಕರೊಬ್ಬರು ರೀಮೇಕ್ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಗೂಗಲ್ ಚಿತ್ರತಂಡದ ಜೊತೆ ಮಾತುಕತೆ ಮಾಡಿದ್ದು, ಎಲ್ಲ ಅಂದುಕೊಂಡಂತೆ ಆದ್ರೆ ಪರಭಾಷೆಯಲ್ಲೂ 'ಗೂಗಲ್' ಮಿಂಚಲಿದೆ. ಇನ್ನು ರಾಜ್ಯಾದ್ಯಂತ ತೆರೆಕಾಣುತ್ತಿರುವ 'ಗೂಗಲ್' ಚಿತ್ರದ ಟ್ರೈಲರ್ ನೋಡಿ ಯು.ಎಸ್ ಕನ್ನಡಿಗರೊಬ್ಬರು ಚಿತ್ರವನ್ನ ವಿಶ್ವಾದ್ಯಂತ ಬಿಡುಗಡೆ ಮಾಡಲು ಮುಂದಾಗಿದ್ದಾರಂತೆ.

Kannada movie google will releasing february 16th

ಅಂದ್ಹಾಗೆ, 'ಗೂಗಲ್' ಸಿನಿಮಾ ನಾಯಕ ಮತ್ತು ನಾಯಕಿಯರ ಸುತ್ತ ಹೆಣೆದಿರುವ ಕಥೆಯಲ್ಲ. ಇದು 17ವರ್ಷದ ಹಿಂದೆ ನಡೆದ ನೈಜ ಘಟನೆ ಆಧರಿತ ಚಿತ್ರ. ಇಲ್ಲಿ 8 ಪಾತ್ರಗಳು ಬಂದು ಹೋಗುತ್ತವೆ. ಈ ಪಾತ್ರಗಳೇ ಚಿತ್ರದ ಜೀವಾಳ.

'ಗೂಗಲ್' ಟೀಸರ್ ಅನಾವರಣಗೊಳಿಸಿದ ಡಾ.ರಾಜ್-ವಿಷ್ಣು-ಶಂಕ್ರಣ್ಣ

Kannada movie google will releasing february 16th

ಉತ್ಸವ್ ಮೂವೀಸ್ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ಸಿನಿಮಾವನ್ನು ವಿ. ನಾಗೇಂದ್ರ ಪ್ರಸಾದ್‌ ನಿರ್ಮಿಸಿ, ನಿರ್ದೇಶಿಸಿದ್ದಾರೆ. ಅಲ್ಲದೆ ಚಿತ್ರದ ಪ್ರಮುಖ ಪಾತ್ರದಲ್ಲೂ ನಟಿಸಿದ್ದಾರೆ. ಚಿತ್ರದ ಹಾಡುಗಳ ಸಾಹಿತ್ಯ ಹಾಗೂ ಸಂಗೀತ ಕೂಡಾ ನಾಗೇಂದ್ರ ಪ್ರಸಾದ್‌ ಅವರದೇ.

Kannada movie google will releasing february 16th

ನಾಯಕಿ ಶುಭಾ ಪೂಂಜಾ ಇದೇ ಮೊದಲ ಬಾರಿಗೆ ಕೌಟುಂಬಿಕ ಹೊಣೆ ಹೊತ್ತ ಗೃಹಿಣಿಯಾಗಿ ಚಿತ್ರದಲ್ಲಿ ನಟಿಸಿದ್ದಾರೆ. ದೀಪಕ್ ಹಾಗೂ ಅಮೃತಾ ರಾವ್ ಎಂಬ ಹೊಸ ಪ್ರತಿಭೆಗಳು ಚಿತ್ರದಲ್ಲಿ ನಟಿಸಿದ್ದಾರೆ.

English summary
Kannada actress shubha poonja and nagendra prasad starrer Kannada movie google will releasing on february 16th. the movie directed by dr. v nagendra prasad.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada