»   » ರಾಷ್ಟ್ರಪ್ರಶಸ್ತಿ ಪಡೆದ 'ಹರಿವು' ಚಿತ್ರ ನೋಡೋಣ ಬನ್ನಿ!

ರಾಷ್ಟ್ರಪ್ರಶಸ್ತಿ ಪಡೆದ 'ಹರಿವು' ಚಿತ್ರ ನೋಡೋಣ ಬನ್ನಿ!

Posted By:
Subscribe to Filmibeat Kannada

ಈ ಬಾರಿಯ 62ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ 'ಅತ್ಯುತ್ತಮ ಚಿತ್ರ' ಪ್ರಶಸ್ತಿ ಪಾತ್ರವಾಗಿರುವ 'ಹರಿವು' ಚಿತ್ರವನ್ನು ವೀಕ್ಷಿಸುವ ಅಪರೂಪದ ಅವಕಾಶ ಇದು. ಡೋಂಟ್ ಮಿಸ್. ಚಿತ್ರವನ್ನು ವೀಕ್ಷಿಸುವುದರ ಜೊತೆಗೆ ಚಿತ್ರತಂಡದೊಂದಿಗೆ ಚರ್ಚಿಸಿ ಇನ್ನಷ್ಟು ವಿಷಯಗಳನ್ನು ತಿಳಿದುಕೊಳ್ಳುವ ಅವಕಾಶವನ್ನು ಕಲ್ಪಿಸುತ್ತಿದೆ ಸಂವಾದ.ಕಾಮ್.

ಇದೇ ಮೇ.23ರಂದು ಆಧುನಿಕ ಕಲಾ ಸಂಗ್ರಹಾಲಯ (NGMA)ದಲ್ಲಿ ಪ್ರದರ್ಶನ, ಚಿತ್ರತಂಡ ಜೊತೆಗಿರುತ್ತದೆ. ಇಲ್ಲಿಯವರೆಗೂ ಯಾರಿಗೆಲ್ಲಾ ಸಿನಿಮಾ ವೀಕ್ಷಿಸಲು ಸಾದ್ಯವಾಗಿಲ್ಲವೋ ಅವರೊಂದಿಗೆ, ಮತ್ತೊಮ್ಮೆ ಸಿನಿಮಾ ನೋಡಲು ಇಚ್ಚಿಸುವವರೂ ಹೋಗಬಹುದು. [ಸಂಚಾರಿ ವಿಜಯ್ ಸಂದರ್ಶನ]

Kannada Movie 'Harivu' screening and discussion

ಮಳೆಗಾಲ ಆರಂಭವಾಗುತ್ತಿರುವ ಈ ಹೊತ್ತಲ್ಲಿ ಬೆಚ್ಚನೆಯ ಕಾಫಿಯೊಂದಿಗೆ ನಿಮ್ಮ ನಿರೀಕ್ಷೆಯಲ್ಲಿ ಚಿತ್ರತಂಡ ಇರುತ್ತದೆ. ಸಂವಾದ ಡಾಟ್ ಕಾಂ ಪ್ರಸ್ತುತ ಪಡಿಸುತ್ತಿದೆ ರಾಷ್ಟ್ರ ಪ್ರಶಸ್ತಿ ವಿಜೇತ "ಹರಿವು" ಚಲನಚಿತ್ರದ ಪ್ರದರ್ಶನ ಹಾಗೂ ಚಿತ್ರ ನಿರ್ದೇಶಕ, ನಟರು ಮತ್ತು ತಂತ್ರಜ್ಞರೊಂದಿಗೆ ಸಂವಾದ.

ದಿನಾಂಕ: 23 ಮೇ ಶನಿವಾರ ಸಂಜೆ 3:30 ರಿಂದ, ಸ್ಥಳ: ಆಧುನಿಕ ಕಲಾ ಸಂಗ್ರಹಾಲಯ (ನ್ಯಾಶನಲ್ ಗ್ಯಾಲರೀ ಆಫ್ ಮಾಡರ್ನ್ ಆರ್ಟ್ NGMA) ನಂ. 49 ಪ್ಯಾಲೇಸ್ ರೋಡ್, ಮಾಣಿಕ್ಯವೇಲು ಮ್ಯಾನ್ಶನ್, ವಸಂತನಗರ, ಬೆಂಗಳೂರು - 560052. (ಮೌಂಟ್ ಕಾರ್ಮೆಲ್ ಕಾಲೇಜ್ ಹತ್ತಿರ). ಪ್ರವೇಶ ಉಚಿತವಿರುತ್ತದೆ. ಆದರೆ, ಮೊದಲು ಬಂದವರಿಗೆ ಆದ್ಯತೆ ಇರುತ್ತದೆ.

ಬೆಂಗಳೂರಿನ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ನಡೆದ, ನೈಜ ಘಟನೆಯೊಂದರ ಪ್ರೇರಣೆಯಿಂದ ದೃಶ್ಯರೂಪ ಪಡೆದುಕೊಂಡಂತಹ ಪ್ರಯೋಗಾತ್ಮಕ ಸಿನೆಮಾ 'ಹರಿವು'. ಇದು ತಂದೆ ಮತ್ತು ಮಗನ ನಡುವಿನ ಸಂಭಂದದ ಸುತ್ತ ಹೆಣೆಯಲಾದ ಕಥೆ. ತಂದೆ ಮತ್ತು ಮಗನ ಸಂಬಂಧದ ಎಳೆಯೊಂದಿಗೆ ಸಾಗುವ ಈ ಕಥೆಯಲ್ಲಿ ಪ್ರಸ್ತುತ ಸಮಾಜದ ವಿವಿದ ಸಮಸ್ಯೆಗಳಿಗೆ ದೃಶ್ಯದ ಚೌಕಟ್ಟನ್ನು ಕಟ್ಟಿಕೊಡಲು ಪ್ರಯತ್ನಿಸಲಾಗಿದೆ. (ಫಿಲ್ಮಿಬೀಟ್ ಕನ್ನಡ)

English summary
Samvaada.com presents, National Award winner best Kannada Movie "Harivu" screening and discussion with the Director, cast and technicians of the movie. Movie will be screened with English subtitles. Date: 23rd May Saturday 2015, at 3:30 PM, Place: National Gallery of Modern Art (NGMA), No. 49 Palace Road, Manikyavelu Mansion, Vasanth Nagar Bengaluru, Karnataka 560052.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada