ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಕಾಣುತ್ತಿದೆ 'ಹೀಗೊಂದು ದಿನ'
ಮಾರ್ಚ್ 30....ಈ ದಿನವನ್ನ ಈಗಲೇ ನೋಟ್ ಮಾಡಿಕೊಳ್ಳಿ. ಕುಟುಂಬ ಸದಸ್ಯರು, ಸ್ನೇಹಿತರು, ಗರ್ಲ್ ಫ್ರೆಂಡ್ಸ್, ಬಾಯ್ ಫ್ರೆಂಡ್ಸ್ ಜೊತೆ ಸಿನಿಮಾ ನೋಡಲು ಟಿಕೆಟ್ ಬುಕ್ ಮಾಡ್ಕೊಳ್ಳಿ. ಮೊದಲ ದಿನದ ಮೊದಲ ಶೋ, ಅಥವಾ ಮಧ್ಯಾಹ್ನದ ಶೋ ಅಥವಾ ಕೆಲಸ ಮುಗಿಸಿಕೊಂಡು ನೈಟ್ ಶೋ....ಒಟ್ನಲ್ಲಿ ರಿಲೀಸ್ ಆದ ದಿನವೇ ಈ ಸಿನಿಮಾ ನೋಡೋದು ಉತ್ತಮ. ಹೌದು, ನಾವ್ ಹೇಳ್ತಿರೋದು ನಟಿ ಸಿಂಧು ಲೋಕನಾಥ್ ಅಭಿನಯದ 'ಹೀಗೊಂದು ದಿನ' ಸಿನಿಮಾ.
ಮಾರ್ಚ್ 30 ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಕಾಣತ್ತಿರುವ ಈ ಸಿನಿಮಾ ಹಲವು ವಿಷ್ಯಗಳಿಗೆ ಕುತೂಹಲ ಕೆರಳಿಸಿದೆ. ಕನ್ನಡದ ಮೊದಲ ಅನ್ ಕಟ್ ಸಿನಿಮಾ ಎಂಬ ಸ್ಪೆಷಾಲಿಟಿ ಹೊಂದಿರುವ 'ಹೀಗೊಂದು ದಿನ' ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿದೆ.
ಈಗಾಗಲೇ 'ಹೀಗೊಂದು ದಿನ' ಚಿತ್ರದ ಥಿಯೇಟರ್ ಲಿಸ್ಟ್ ಬಿಡುಗಡೆಯಾಗಿದ್ದು, ಬೆಂಗಳೂರಿನ ಕೆ.ಜಿ ರಸ್ತೆಯ ಮುಖ್ಯ ಚಿತ್ರಮಂದಿರದಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಅದರ ಜೊತೆಗೆ ಜೆಪಿ ನಗರದ 'ಸಿದ್ದೇಶ್ವರ', ತಾವರೆಕೆರೆಯ 'ಬಾಲಾಜಿ', ಕತ್ರಿಗುಪ್ಪೆಯ 'ಕಾಮಾಕ್ಯ', ರಾಜಾಜಿನಗರದ 'ನವರಂಗ್' ಕೆಂಗೇರಿಯ ರಾಬೀನ್, ಪಿವಿಆರ್, ಐನಾಕ್ಸ್, ಸಿನಿಪೊಲೀಸ್, ಗೋಪಾಲನ್ ಮಾಲ್ ಸೇರಿದಂತೆ ರಾಜ್ಯದ ಎಲ್ಲ ಕಡೆಯೂ ಸಿನಿಮಾ ತೆರೆಕಾಣುತ್ತಿದೆ.

ಈ ಚಿತ್ರಕ್ಕೆ ವಿಕ್ರಮ್ ಯೋಗಾನಂದ್ ಆಕ್ಷನ್ ಕಟ್ ಹೇಳಿದ್ದು, ವಿಕಾಸ್ ಕಥೆಯನ್ನು ಹೆಣೆದಿದ್ದಾರೆ. ನಿರ್ಮಾಪಕ ಚಂದ್ರಶೇಖರ್ ಬಂಡವಾಳ ಹೂಡಿದ್ದು, ಅಭಿಲಾಷ್ ಗುಪ್ತಾ ಸಂಗೀತ ಸಂಯೋಜನೆ ಮಾಡಿದ್ದಾರೆ.

ಅಂದ್ಹಾಗೆ, 'ಹೀಗೊಂದು ದಿನ' ಮಹಿಳಾ ಪ್ರಧಾನ ಸಿನಿಮಾ ಇದಾಗಿದ್ದು, ಸಿಂಧು ಲೋಕನಾಥ್ ಮುಖ್ಯ ಪಾತ್ರ ನಿರ್ವಹಿಸಿದ್ದರೇ, 'ಸಿಂಪಲ್ಲಾಗ್ ಇನ್ನೊಂದು ಲವ್ ಸ್ಟೋರಿ'ಯ ಪ್ರವೀಣ್, ಹಿರಿಯ ನಟಿ ಗಿರಿಜಾ ಲೋಕೇಶ್, ಪದ್ಮಜಾ ರಾವ್, ಗುರುಪ್ರಸಾದ್, ಶೋಭರಾಜ್, ಮಿತ್ರ, ಗಿರಿ, ಬಾಲಾಜಿ ಮನೋಹರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











