ವಿಶ್ವ ಮಹಿಳಾ ದಿನದಂದು ನೋಡಲೇಬೇಕಾದ ಚಿತ್ರ 'ಹೀಗೊಂದು ದಿನ'.!

By Bharath Kumar

'ಹೀಗೊಂದು ದಿನ'.....ಇದು ನಟಿ ಸಿಂಧು ಲೋಕನಾಥ್ ಬದುಕಿನ ಕಥೆಯಲ್ಲ. ತೆರೆಮೇಲೆ ಸಿಂಧು ಲೋಕನಾಥ್ ಅಭಿನಯಿಸಿರುವ ಸಿನಿಮಾದ ಕಥೆ. 'ಹೀಗೊಂದು ದಿನ' ವಿಶ್ವ ಮಹಿಳಾ ದಿನದ ಪ್ರಯುಕ್ತ ಥಿಯೇಟರ್ ಗೆ ಎಂಟ್ರಿ ಕೊಡ್ತಿದೆ.

ಈ ಸಿನಿಮಾ ಪಕ್ಕಾ ಮಹಿಳಾ ಪ್ರಧಾನ ಚಿತ್ರ ಇದಾಗಿದ್ದು, ಮಾರ್ಚ್ 9 ರಂದು ರಾಜ್ಯಾದ್ಯಂತ ತೆರೆಗೆ ಬರ್ತಿದೆ. ಚಿತ್ರಕಥೆ ಒಳಗೊಂಡಂತೆ ಎಲ್ಲದರಲ್ಲೂ ಹೊಸತನವನ್ನ ಹೊತ್ತು ಬರುತ್ತಿರುವ ವಿಶೇಷ ಸಿನಿಮಾ. ಕರ್ನಾಟಕದ ಮೊದಲ ಅನ್ ಕಟ್ ಫೀಚರ್ ಹೊಂದಿರುವ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ವಿಕ್ರಮ್ ಯೋಗಾನಂದ್ ಅವರು ನಿರ್ದೇಶನ ಮಾಡಿರುವ ಈ ಚಿತ್ರವನ್ನ ದಿವ್ಯದೃಷ್ಠಿ ಚಂದ್ರಶೇಖರ್ ಬಂಡವಾಳ ಹಾಕಿದ್ದಾರೆ. ಸುಮಾರು 10 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರೀಯರಾಗಿರುವ ಚಂದ್ರಶೇಖರ್ ಅವರಿಗೆ ಒಂದೊಳ್ಳೆ ಸಿನಿಮಾ ಮಾಡ್ಬೇಕು ಎಂಬ ಆಸೆ ಇತ್ತು. ಬಹುಶಃ ಹೀಗೊಂದು ದಿನ ಚಿತ್ರದ ಮೂಲಕ ಈ ಆಸೆ ನೆರವೇರಿದೆ.

Kannada movie Heegondu Dina releasing on march 9th

ಇನ್ನುಳಿದಂತೆ ಚಿತ್ರದಲ್ಲಿ ಪ್ರವೀಣ್ ತೇಜ, ಗುರು ಪ್ರಸಾದ್, ಪದ್ಮಜಾ ರಾವ್, ಶೋಭ್ ರಾಜ್, ಮಿತ್ರಾ, ನಾಗೇಂದ್ರ ಶಾ, ಗಿರೀಜಾ ಲೋಕೇಶ್, ಗಿರಿ, ಸೇರಿದಂತೆ ಹಲವು ನಟ-ನಟಿಯರ ದಂಡೇ ಚಿತ್ರದಲ್ಲಿದೆ. ಅಭಿಲಾಷ್ ಗುಪ್ತ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು, ಸ್ವತಃ ನಿರ್ದೇಶಕರೇ ಛಾಯಾಗ್ರಹಣ ಮತ್ತು ಸಂಕಲನದ ಜವಾಬ್ದಾರಿ ನಿರ್ವಹಿಸಿದ್ದಾರೆ.

Kannada movie Heegondu Dina releasing on march 9th

ಚಿತ್ರದ ಪ್ರಚಾರ ಕೂಡ ಜೋರಾಗಿ ಸಾಗುತ್ತಿದೆ. ಹೀಗೊಂದು ದಿನ ಚಿತ್ರದ ಬ್ಯಾನರ್ ಹಾಗೂ ಫ್ಲೆಕ್ಸ್ ಗಳು ವಾಹನಗಳ ಮೇಲೆ ಹಾಗೂ ಸಿನಿಮಾ ಮಾಲ್ ಗಳಲ್ಲಿ ರಾರಾಜಿಸುತ್ತಿದೆ.

More from Filmibeat

English summary
Kannada actress sindhu loknath starrer kannada movie Heegondu Dina will releasing on march 9th. the movie directed by vikram yogananda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X