For Quick Alerts
  ALLOW NOTIFICATIONS  
  For Daily Alerts

  1.60 ಕೋಟಿ ರೂಪಾಯಿ ಕಳ್ಳತನ: 'ಕಾಫಿ ಕಟ್ಟೆ' ನಾಯಕ ಆನಂದ್ ರೆಡ್ಡಿ ಅರೆಸ್ಟ್

  |

  ಒಂದು ಕೋಟಿ ಅರವತ್ತು ಲಕ್ಷ ರೂಪಾಯಿ ಕಳ್ಳತನ ಮಾಡಿರುವ ಆರೋಪದ ಮೇಲೆ ಬೆಂಗಳೂರಿನ ಪುಲಕೇಶಿನಗರದ ಪೋಲಿಸರು ಕನ್ನಡದ 'ಕಾಫಿ ಕಟ್ಟೆ' ಸಿನಿಮಾದ ನಾಯಕ ಆನಂದ್ ರೆಡ್ಡಿಯನ್ನ ಬಂಧಿಸಿದ್ದಾರೆ.

  ಲಾಜಿ ಕ್ಯಾಶ್ ಎಂಬ ಸಂಸ್ಥೆಯಿಂದ ಎ.ಟಿ.ಎಂಗೆ ಹಣ ಡಿಸ್ಟ್ರಿಬ್ಯೂಟರ್ ಆಗಿ ಆನಂದ್ ರೆಡ್ಡಿ ಕೆಲಸ ಮಾಡುತ್ತಿದ್ದ. ಈ ನಡುವೆ ಸಿನಿಮಾ ಹುಚ್ಚಿಗೆ ಬಿದ್ದಿದ್ದ ಆನಂದ್ ರೆಡ್ಡಿ, ಎ.ಟಿ.ಎಂ ಗಳಿಗೆ ಪೂರ್ಣ ಹಣ ಹಾಕದೆ ವಂಚಿಸಿದ್ದ.

  ಎ.ಟಿ.ಎಂಗೆ ಹಣ ಹಾಕುವಾಗ ಆಗಾಗ ಅರ್ಧ ಹಣವನ್ನು ಆನಂದ್ ರೆಡ್ಡಿ ಜೇಬಿಗೆ ಇಳಿಸಿಕೊಳ್ಳುತ್ತಿದ್ದ ವಿಚಾರ ಲಾಜಿ ಕ್ಯಾಶ್ ಸಂಸ್ಥೆಯ ಗಮನಕ್ಕೆ ಬಂದಿದೆ. ಪರಿಣಾಮ, ಆನಂದ್ ರೆಡ್ಡಿ ಮೇಲೆ ಪೊಲೀಸರಿಗೆ ಲಾಜಿ ಕ್ಯಾಶ್ ಸಂಸ್ಥೆ ದೂರು ನೀಡಿದೆ. ದೂರು ದಾಖಲಾಗುತ್ತಿದ್ದಂತೆಯೇ, ಆನಂದ್ ರೆಡ್ಡಿಯನ್ನ ಪೊಲೀಸರು ಬಂಧಿಸಿದ್ದಾರೆ.

  1.60 ಕೋಟಿ ಕಳ್ಳತನ: ಸಿನಿಮಾ ಹೀರೋ ಬಂಧನ

  ಅಂದ್ಹಾಗೆ, 'ಕಾಫಿ ಕಟ್ಟೆ' ಎಂಬ ಚಿತ್ರದಲ್ಲಿ ಆನಂದ್ ರೆಡ್ಡಿ ಹೀರೋ ಆಗಿ ನಟಿಸಿದ್ದ. ಮತ್ತೊಂದು ಸಿನಿಮಾ ಮಾಡಲು ಕೈಹಾಕಿದ್ದ ಆನಂದ್ ರೆಡ್ಡಿ ಇದೀಗ ಕಳ್ಳತನದ ಆರೋಪದ ಮೇಲೆ ಜೈಲು ಸೇರಿದ್ದಾನೆ.

  English summary
  Kannada Movie Hero Anand reddy arrested by Pulakeshi Nagar Police.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X