'ಹುಚ್ಚುಡುಗ್ರು' ಟ್ರೇಲರ್ ರಿಲೀಸ್ ಇನ್ನೂ ನೋಡಿಲ್ವಾ
ರೇಡಿಯೋ ಜಾಕಿ ಪ್ರದೀಪ ನಿರ್ದೇಶನದ ಚೊಚ್ಚಲ ಚಿತ್ರ ಹುಚ್ಚುಡುಗ್ರು ಟ್ರೇಲರ್ ಲೋಕಾರ್ಪಣೆಯಾಗಿದೆ. ರಾಜಾಜಿನಗರದ ಓರಿಯನ್ ಮಾಲ್ ನಲ್ಲಿ ಫೆಬ್ರವರಿ 5ರಂದು ಟ್ರೇಲರನ್ನು ಬಿಡುಗಡೆ ಮಾಡಲಾಯಿತು. ಒಟ್ಟು 3 ನಿಮಿಷ 23 ಸೆಕೆಂಡ್ ಗಳ ಕಾಲಾವಧಿಯ ಟ್ರೇಲರ್ 'ಹುಚ್ಚುಡುಗ್ರ' ಇಂಟ್ರಡಕ್ಷನ್ ಮೂಲಕ ಆರಂಭವಾಗುತ್ತದೆ.
ಹಳ್ಳಿಯ ಹಿನ್ನೆಲೆ ಸಾಗುವ ಕಥೆ ಮೈಸೂರಿನಿಂದ ಆರಂಭವಾಗಿ ಬೆಂಗಳೂರಿನಲ್ಲಿ ಅಂತ್ಯವಾಗುತ್ತದೆ. ನಾಲ್ಕು ಬೇಜಾವಾಬ್ದಾರಿ ಯುವಕರ ಸುತ್ತ ಸುತ್ತುವ ಕಥೆ ಇದು. 'ಭಗವತಿ ಪಿಕ್ಚರ್ಸ್' ಲಾಂಛನದಲ್ಲಿ ವೇದಮೂರ್ತಿ ಹಾಗೂ ರೋಹಿಣಿ ಅವರು ನಿರ್ಮಿಸಿರುವ ಚಿತ್ರವಿದು.

ಈ ಚಿತ್ರದಲ್ಲಿ ನಾಲ್ಕು ನಾಯಕರುಗಳಿಗೆ ಶಿವನ ಪರ್ಯಾಯ ಹೆಸರುಗಳಿಂದ ಸಂಭೋದಿಸಲಾಗುವುದು. ಚಿತ್ರಿಕರಣವೂ ಸಹ ಮೈಸೂರು ಹಾಗೂ ನಂಜನಗೂಡು ಆಸುಪಾಸಿನಲ್ಲೆ ಮಾಡಲಾಗಿರುವುದು ವಿಶೇಷ. ರೇಡಿಯೋ ಜಾಕಿ ಆರ್ ವಿ ಪ್ರದೀಪ ಈ 'ಹುಚ್ಚುಡುಗರು' ಮೂಲಕ ನಿರ್ದೇಶನಕ್ಕೆ ಹೆಜ್ಜೆ ಇಡುತ್ತಿದ್ದಾರೆ. ಯಂಗ್ ಹುಡುಗರು ಹೆಂಗ್ ಹೆಂಗೋ ಆಡುವುದು ಈ ಚಿತ್ರದ ತಮಾಷೆ ವಿಚಾರ.
ನಿರ್ದೇಶಕ ಪ್ರೇಮ್ ಅವರ ಬಳಿ 'ಕರಿಯ' ಸಿನಿಮಾದಿಂದ 'ರಾಜ್ ದಿ ಶೋಮನ್' ವರೆಗೆ ಸಹಾಯಕರಾಗಿ ದುಡಿದ ರಘು ಹಾಸನ್ ಅವರು ಕಥೆ, ಚಿತ್ರಕಥೆ, ನಿರ್ಮಾಣದ ಕೆಲಸವನ್ನು ನೋಡಿಕೊಳ್ಳುತ್ತಿದ್ದಾರೆ. ಗೀತೆಗಳ ಸಾಹಿತ್ಯ ಆನಂದಪ್ರಿಯ, ಕಲ್ಯಾಣ್ ಹಾಗೂ ಸುದರ್ಶನ್ ಅವರು ನೀಡಿದ್ದಾರೆ. ಸಂಭಾಷಣೆಯನ್ನು ಸುದರ್ಶನ್, ಛಾಯಾಗ್ರಹಣ ಶಮನ್ ಮಿತ್ರ ಅವರು ಚಿತ್ರಕ್ಕೆ ಒದಗಿಸಿದ್ದಾರೆ.
'ಹುಚ್ಚುಡುಗರು' ಚಿತ್ರದ ಶೀರ್ಷಿಕೆ ಗೀತೆ ನಿರ್ದೇಶಕ ಪ್ರೇಮ್ ಹಾಡು ಹೇಳುವುದರೊಂದಿಗೆ ಚಾಲನೆ ಸಿಕ್ಕಿದೆ ? 'ಹರಕಲು ಅಂಗಿ, ತ್ಯಾಪೆ ಚಡ್ಡಿ, ಕುರುಚಲು ಗಡ್ಡ, ಲೂಸು ತಲೆ ಹುಚ್ಚುಡುಗರು...ಎಂಬುವ ಹಾಡನ್ನು ಸಂಗೀತ ನಿರ್ದೇಶಕ ಜೋಶ್ವಾ ಶ್ರೀಧರ್ ಅವರು ಧ್ವನಿ ಮುದ್ರಿಸಿ ಕೊಂಡಿದ್ದಾರೆ. ಈ ಚಿತ್ರದ ತಾರಾಗಣದಲ್ಲಿ ಚೇತನ್ ಚಂದ್ರ, ಅಮಿತ್, ಪ್ರತಾಪ್, ದೇವ, ಅದಿತಿ ರಾವು, ರವಿಶಂಕರ್ ಹಾಗೂ ಇತರರು ಇದ್ದಾರೆ. ಜೋಶ್ವ ಶ್ರೀಧರ್ ಸಂಗೀತ ಒದಗಿಸಿದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











