»   » 'ಹುಲಿರಾಯ'ನಿಂದ ನಿರ್ಮಾಪಕ ಗಳಿಸಿದ್ದೆಷ್ಟು?

'ಹುಲಿರಾಯ'ನಿಂದ ನಿರ್ಮಾಪಕ ಗಳಿಸಿದ್ದೆಷ್ಟು?

Posted By:
Subscribe to Filmibeat Kannada

ಕನ್ನಡ ಸಿನಿಮಾರಂಗದಲ್ಲಿ ವಿಭಿನ್ನ ಹಾಗೂ ಪ್ರಯೋಗಾತ್ಮಕ ಸಿನಿಮಾಗಳು ರಿಲೀಸ್ ಆಗಬೇಕು. ಅವುಗಳು ಪಕ್ಕದ ಇಂಡಸ್ಟ್ರಿಯಲ್ಲಿ ಸದ್ದು ಮಾಡಬೇಕು ಅನ್ನೋ ಮಾತುಗಳಿವೆ. ಆದರೆ ಕೆಲವೊಮ್ಮೆ ಪ್ರಯೋಗಾತ್ಮಕ ಸಿನಿಮಾಗಳನ್ನ ಜನರಿಗೆ ತಲುಪಿಸುವ ಭರದಲ್ಲಿ ವಿತರಕರು ಕೈಸುಟ್ಟುಕೊಳ್ತಾರೆ ಅನ್ನೋದಕ್ಕೆ ಉತ್ತಮ ಉದಾಹರಣೆ 'ಹುಲಿರಾಯ' ಸಿನಿಮಾ.

kannada-movie-huliraya-turns-flop-loss-for-distributors

'ಹುಲಿರಾಯ' ಸಿನಿಮಾವನ್ನ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನ್ ಹಾಗೂ ನಟ ರಕ್ಷಿತ್ ಶೆಟ್ಟಿ ಸೇರಿ ವಿತರಣೆ ಮಾಡಲು ಮುಂದಾಗಿದ್ರು. ಸಿನಿಮಾ ನೋಡಿದಾಗ ಚೆನ್ನಾಗಿದೆ, ಇಂತಹ ಚಿತ್ರವನ್ನ ಪ್ರೇಕ್ಷಕರಿಗೆ ಮುಟ್ಟಿಸೋಣ ಎನ್ನುವ ನಿಟ್ಟಿನಲ್ಲಿ ವಿತರಣೆಯನ್ನೂ ಮಾಡಿದ್ರು. ಆದ್ರೆ ಸಿನಿಮಾ ನೋಡೋದಕ್ಕೆ ಪ್ರೇಕ್ಷಕ ಮಾತ್ರ ಮನಸ್ಸು ಮಾಡಲೇ ಇಲ್ಲ.

ಚಿತ್ರವನ್ನ 50 ಲಕ್ಷ ಹಣಕೊಟ್ಟು ಖರೀದಿಸಿದ್ರು. ನಂತರ ಪ್ರಚಾರಕ್ಕಾಗಿ 47 ಲಕ್ಷವನ್ನ ಖರ್ಚು ಮಾಡಿದ್ರು. ಆದ್ರೆ, ಸಿನಿಮಾ ರಿಲೀಸ್ ಆಗಿ ಒಂದೇ ವಾರಕ್ಕೆ ಥಿಯೇಟರ್ ನಿಂದ ಎತ್ತಂಗಡಿ ಆಗಲು ಶುರುವಾಯ್ತು. ಇದರಿಂದ ವಿತರಕರಿಗೆ 37 ಲಕ್ಷದಷ್ಟು ಹಣ ಲಾಸ್ ಆಯ್ತು. ಒಂದೊಳ್ಳೆ ಸಿನಿಮಾವನ್ನ ಜನರಿಗೆ ತಲುಪಿಸೋಣ ಅನ್ನೋದು ವಿತರಕ ಹಾಗೂ ನಟನ ಉದ್ದೇಶ ಆಗಿತ್ತು. ಜನ ಮಾತ್ರ ಇಂತಹ ಸಿನಿಮಾಗಳನ್ನ ನಾವು ನೋಡೋದಿಲ್ಲ ಅಂತ ನೇರವಾಗಿ ಹೇಳಿಯೇ ಬಿಟ್ಟರು.

English summary
Kannada Movie Huliraya turns flop: Loss for Distributors. ಅರವಿಂದ್ ಕೌಶಿಕ್ ನಿರ್ದೆಶನದ ಹುಲಿರಾಯ ಸಿನಿಮಾದಿಂದ ವಿತರಕರಿಗೆ ನಷ್ಟವಾಗಿದೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada