For Quick Alerts
  ALLOW NOTIFICATIONS  
  For Daily Alerts

  ಈ ವಾರ 'ಹೈಪರ್' ಎಂಟ್ರಿ: ಮಿಸ್ ಮಾಡ್ಕೊಬೇಡಿ

  By Bharath Kumar
  |

  ಪಕ್ಕಾ ಮಾಸ್ ಟೈಟಲ್ ಇಟ್ಕೊಂಡು ಸಿದ್ಧವಾಗಿರುವ 'ಹೈಪರ್' ಸಿನಿಮಾ ಇದೇ ವಾರ (ಜೂನ್ 29) ತೆರೆ ಕಾಣುತ್ತಿದೆ. ಈಗಾಗಲೇ ಚಿತ್ರದ ಟೈಟಲ್, ಟ್ರೈಲರ್ ಮತ್ತು ಹಾಡುಗಳಿಂದ ಹೈಪರ್ ಸಿನಿಮಾ ಅಬ್ಬರಿಸಿದೆ. ಈಗ ಪೂರ್ತಿ ಸಿನಿಮಾ ನೋಡೋ ಟೈಂ ಬಂದಿದೆ.

  ಕಾಲೇಜಿನ ಸುತ್ತಾ ನಡೆಯುವ ಥ್ರಿಲ್ಲರ್ ಕಥಾಹಂದರವನ್ನು ಹೊಂದಿರುವ 'ಹೈಪರ್' ಎಲ್ಲ ವರ್ಗದ ಪ್ರೇಕ್ಷಕರು ನೋಡುವಂತಹ ಸಿನಿಮಾ. ಊಹಿಸಲಾಗದ ಟ್ವಿಸ್ಟ್, ಅಬ್ಬರದ ಸಾಹಸ, ಅಪ್ಪ-ಮಗಳ ಸೆಂಟಿಮೆಂಟು ಸೇರಿದಂತೆ ಹಲವು ಅಂಶಗಳು ಚಿತ್ರದಲ್ಲಿ ಗಮನ ಸೆಳೆಯುತ್ತಿದೆ.

  ಈ ಚಿತ್ರದ ನಾಯಕ ಅರ್ಜುನ್ ಆರ್ಯ ಇಡೀ ಸಿನಿಮಾದ ಮೇನ್ ಅಟ್ರಾಕ್ಷನ್. ಒಳ್ಳೆ ಹೈಟು, ಜಬರ್ದಸ್ತತ್ ಫಿಟ್ನೆಸ್, ಡ್ಯಾನ್ಸ್, ಫೈಟ್ ಹೀಗೆ ಎಲ್ಲದರಲ್ಲಿಯೂ ಕ್ರೇಜ್ ಹುಟ್ಟುಹಾಕಿ, ತಮ್ಮದೇ ಹವಾ ಎಬ್ಬಿಸಲು ಬರ್ತಿದ್ದಾರೆ. ಹೀಗಾಗಿ, ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಮತ್ತೋರ್ವ ಕಟೌಟ್ ಎಂಟ್ರಿ ಕೊಟ್ಟಂತಾಗಿದೆ. ವಿಶೇಷ ಅಂದ್ರೆ, ಈ ಚಿತ್ರದ ಕಥೆಯನ್ನೂ ಕೂಡಾ ಅರ್ಜುನ್ ಆರ್ಯ ಅವರೇ ರಚಿಸಿದ್ದಾರೆ.

  ಎಂ ಕಾರ್ತಿಕ್ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಗಣೇಶ್ ವಿನಾಯಕ ಆಕ್ಷನ್ ಕಟ್ ಹೇಳಿದ್ದಾರೆ. ನಿರ್ದೇಶಕ ಗಣೇಶ್ ವಿನಾಯಕ ಅವರಿಗೆ ಕನ್ನಡದಲ್ಲಿ ಇದು ಮೊದಲ ಚಿತ್ರ. ಆದ್ರೆ, ತಮಿಳಿನಲ್ಲಿ ಈಗಾಗಲೇ ಮೂರು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ.

  Kannada movie hyper releasing on june 29th

  ಇನ್ನು ಈ ಚಿತ್ರದ ಮತ್ತೊಂದು ಹೈಲೈಟ್ ಅಂದ್ರೆ ಸಂಗೀತ ನಿರ್ದೇಶಕರಾದ ಇಮ್ಮಾನ್ ಡಿ ಮತ್ತು ಎಲ್ವಿನ್. ಈ ಚಿತ್ರದಲ್ಲಿ ಒಟ್ಟು ಐದು ಚೆಂದದ ಹಾಡುಗಳಿವೆ. ಶಕ್ತಿವೇಲ್ ಅವರ ಛಾಯಾಗ್ರಹಣ, ರುಬಾನ್ ಸಂಕಲನ, ಥ್ರಿಲ್ಲರ್ ಮಂಜು, ಮಾಸ್ ಮಾದ, ವಿಕ್ರಂ, ಹೈಪರ್ ಸೂರಿ ಸಾಹಸ ನಿರ್ದೇಶನ, ಕಲೈ ನೃತ್ಯ ನಿರ್ದೇಶನ ಹಾಗೂ ಕನಕ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಎ.ಪಿ.ಅರ್ಜುನ್, ಬಹದ್ದೂರ್ ಚೇತನ್, ದಿಲ್ ವಾಲ ಅನಿಲ್ ಹಾಗೂ ಗೌಸ್ ಫೀರ್ ಬರೆದಿದ್ದಾರೆ.

  ಇನ್ನುಳಿದಂತೆ ಅರ್ಜುನ್ ಆರ್ಯ ಜೊತಗೆ, ಶೀಲ, ರಂಗಾಯಣ ರಘು, ಶೋಭ್ ರಾಜ್, ಬುಲೆಟ್ ಪ್ರಕಾಶ್, ಅಚ್ಯುತಕುಮಾರ್, ಶ್ರೀನಿವಾಸಪ್ರಭು, ಬ್ಯಾಂಕ್ ಜನಾರ್ದನ್, ವೀಣಾಸುಂದರ್, ಲಕ್ಷ್ಮೀಸಿದ್ದಯ್ಯ, ಉಮೇಶ್ ಪುಂಗ ಮುಂತಾದವರು ತೆರೆಹಂಚಿಕೊಂಡಿದ್ದಾರೆ.

  English summary
  Kannada movie hyper will releasing on june 29th. the movie directed by ganesh vinayaka and starrer arjun arya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X