For Quick Alerts
  ALLOW NOTIFICATIONS  
  For Daily Alerts

  ಕ್ರೇಜ್ ಹುಟ್ಟುಹಾಕಿರುವ 'ಹೈಪರ್' ನಾಳೆ ರಾಜ್ಯಾದ್ಯಂತ ಬಿಡುಗಡೆ

  By Harshitha
  |
  ಕ್ರೇಜ್ ಹುಟ್ಟುಹಾಕಿರುವ 'ಹೈಪರ್' ನಾಳೆ ರಾಜ್ಯಾದ್ಯಂತ ಬಿಡುಗಡೆ

  ಆಡಿಯೋ ಹಾಗೂ ಟ್ರೈಲರ್ ಮಾತ್ರದಿಂದಲೇ ಟಾಕ್ ಆಫ್ ದಿ ಟೌನ್ ಆಗಿರುವ ಸಿನಿಮಾ 'ಹೈಪರ್' ನಾಳೆ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಪ್ರಸನ್ನ ಸೇರಿದಂತೆ ಕರ್ನಾಟಕದಾದ್ಯಂತ 'ಹೈಪರ್' ಸಿನಿಮಾ ತೆರೆಗೆ ಬರಲಿದೆ.

  'ಹೈಪರ್' ಎಂದಾಕ್ಷಣ ಇದು ಔಟ್ ಅಂಡ್ ಔಟ್ ಮಾಸ್ ಸಿನಿಮಾ ಎಂದು ಭಾವಿಸಬೇಡಿ. ಯಾಕಂದ್ರೆ, 'ಹೈಪರ್' ಎಲ್ಲಾ ವರ್ಗದ ಪ್ರೇಕ್ಷಕರು ನೋಡುವಂತಹ ಸಿನಿಮಾ. ಪ್ರೇಕ್ಷಕರ ಊಹೆಗೂ ನಿಲುಕದ ಟ್ವಿಸ್ಟ್, ಝಬರ್ದಸ್ತ್ ಆಕ್ಷನ್, ಸೆಂಟಿಮೆಂಟ್, ಕಾಮಿಡಿ.., ಈ ಎಲ್ಲವೂ 'ಹೈಪರ್' ಸಿನಿಮಾದಲ್ಲಿ ಹದವಾಗಿ ಬೆರೆತಿದೆ ಅಂತಾರೆ ನಿರ್ದೇಶಕ ಗಣೇಶ್ ವಿನಾಯಕ.

  ಅಂದ್ಹಾಗೆ, ತಮಿಳಿನಲ್ಲಿ ಮೂರು ಚಿತ್ರ ನಿರ್ದೇಶನ ಮಾಡಿರುವ ನಿರ್ದೇಶಕ ಗಣೇಶ್ ವಿನಾಯಕ ರವರಿಗೆ 'ಹೈಪರ್' ಸ್ಯಾಂಡಲ್ ವುಡ್ ನಲ್ಲಿ ಚೊಚ್ಚಲ ಪ್ರಯತ್ನ. ಎಂ.ಕಾರ್ತಿಕ್ ಎಂಬುವರು 'ಹೈಪರ್' ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

  ಈ ವಾರ 'ಹೈಪರ್' ಎಂಟ್ರಿ: ಮಿಸ್ ಮಾಡ್ಕೊಬೇಡಿಈ ವಾರ 'ಹೈಪರ್' ಎಂಟ್ರಿ: ಮಿಸ್ ಮಾಡ್ಕೊಬೇಡಿ

  ಇಮ್ಮಾನ್ ಡಿ ಮತ್ತು ಎಲ್ವಿನ್ ಸಂಗೀತ ಸಂಯೋಜಿಸಿರುವ, ಎ.ಪಿ.ಅರ್ಜುನ್, ಬಹದ್ದೂರ್ ಚೇತನ್, ದಿಲ್ ವಾಲ ಅನಿಲ್ ಹಾಗೂ ಗೌಸ್ ಪೀರ್ ಸಾಹಿತ್ಯ ಬರೆದಿರುವ ಹಾಡುಗಳು ಈಗಾಗಲೇ ಗಾಂಧಿನಗರದಲ್ಲಿ ಕ್ರೇಜ್ ಸೃಷ್ಟಿಸಿದೆ. ಶಕ್ತಿವೇಲ್ ಅವರ ಛಾಯಾಗ್ರಹಣ, ರುಬಾನ್ ಸಂಕಲನ, ಥ್ರಿಲ್ಲರ್ ಮಂಜು, ಮಾಸ್ ಮಾದ, ವಿಕ್ರಂ, ಹೈಪರ್ ಸೂರಿ ಸಾಹಸ ನಿರ್ದೇಶನ ಚಿತ್ರಕ್ಕಿದೆ.

  ಅರ್ಜುನ್ ಆರ್ಯ, ಶೀಲಾ, ರಂಗಾಯಣ ರಘು, ಶೋಭರಾಜ್, ಬುಲೆಟ್ ಪ್ರಕಾಶ್, ಅಚ್ಯುತ್ ಕುಮಾರ್ ಸೇರಿದಂತೆ ದೊಡ್ಡ ತಾರಾಬಳಗವೇ 'ಹೈಪರ್' ಚಿತ್ರದಲ್ಲಿದೆ.

  ಹಲವು ವಿಶೇಷತೆಗಳಿಂದ ಸುದ್ದಿ ಆಗಿರುವ 'ಹೈಪರ್' ನಾಳೆ ನಿಮ್ಮ ಮುಂದೆ ಬರಲಿದೆ. ಕನ್ನಡ ಚಿತ್ರಗಳನ್ನ ಥಿಯೇಟರ್ ಗಳಲ್ಲೇ ನೋಡಿ ಪ್ರೋತ್ಸಾಹಿಸಿ..

  English summary
  Kannada Movie Hyper is releasing tomorrow (June 29th). The movie is directed by Ganesh Vinayaka.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X