For Quick Alerts
  ALLOW NOTIFICATIONS  
  For Daily Alerts

  ಚಿತ್ರೀಕರಣ ಮುಗಿಸಿದ ಸಸ್ಪೆನ್ಸ್ ಥ್ರಿಲ್ಲರ್ 'ಐ-1'

  |

  ಕನ್ನಡದಲ್ಲೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ತಯಾರಾಗ್ತಿದ್ದು, ಈಗಾಗಲೇ ಚಿತ್ರೀಕರಣ ಮುಗಿಸಿದೆ. ಚಿತ್ರದ ಟೈಟಲ್ ನಿಂದಲೇ ವಿಭಿನ್ನವೆನಿಸಿಕೊಂಡಿರುವ ಈ ಸಿನಿಮಾ ಪೋಸ್ಟರ್ ಕೂಡ ಅಷ್ಟೇ ಗಮನ ಸೆಳೆಯುತ್ತಿದೆ.

  ಹೌದು, ಎಸ್.ಪಿ.ಪಿಕ್ಚರ್ಸ್ ನ ಅಡಿಯಲ್ಲಿ ನಿರ್ಮಾಣವಾಗುತ್ತಿರುವ 'ಐ1' ಸಿನಿಮಾ ಚಿತ್ರೀಕರಣ ಮುಗಿದು, ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಕೊಂಡಿದೆ.

  ಇದು ಕಂಪ್ಲೀಟ್ ಹೊಸಬರ ಸಿನಿಮವಾಗಿದ್ದು, ಸಸ್ಪೆನ್ಸ್ ಥ್ರಿಲ್ಲರ್ ಕಥೆಯಾಗಿದೆಯಂತೆ. ಕಿಶೋರ್, ಧೀರಜ್ ಪ್ರಸಾದ್ ಮತ್ತು ರಂಜನ್ ಎಂ.ಎಸ್.ಬಿ ಅಭಿನಯದ ಈ ಚಿತ್ರವನ್ನ ಶೈಲಜಾ ಪ್ರಕಾಶ್ ನಿರ್ಮಿಸಿದ್ದಾರೆ. ಆರ್.ಎಸ್.ರಾಜ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ.

  ಇನ್ನುಳಿದಂತೆ ಚಿತ್ರಕ್ಕೆ ಷಿನೂಬ್ ಟಿ ಚಾಕೋ ಛಾಯಾಗ್ರಹಣ, ವಿಶಾಖ್ ರಾಜೇಂದ್ರನ್ ಸಂಕಲನ, ವಿಬಿನ್.ಆರ್ ಅವರ ಸಂಗೀತವಿದ್ದು, ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ, ತುಳಸಿರಾಮ್ ರಾಜು ಪೋಸ್ಟರ್ ಡಿಸೈನಿಂಗ್, ಹಾಗೂ ಶಿವು ವಲಕೆ ಸಿ.ಜಿ ಮಾಡಿದ್ದಾರೆ.

  English summary
  Kannada movie 'I-1' completes shooting. the movie starring kishore, dhiraj prasad and directed by rs rajkumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X