twitter
    For Quick Alerts
    ALLOW NOTIFICATIONS  
    For Daily Alerts

    ನಿಮಗೆ ಮನರಂಜನೆ, ನಮಗೆ ಜೀವನ: ಸರ್ಕಾರದ ವಿರುದ್ಧ ಚಿತ್ರರಂಗ ಅಸಮಾಧಾನ

    |

    ಚಿತ್ರಮಂದಿರಗಳ ಮೇಲೆ ಮತ್ತೆ ನಿರ್ಬಂಧ ಹೇರಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಚಿತ್ರರಂಗದ ಹಲವರು ದನಿ ಎತ್ತಿದ್ದಾರೆ. ಚಿತ್ರಮಂದಿರಗಳ ಪೂರ್ಣ ಭರ್ತಿಗೆ ನೀಡಿದ್ದ ಅವಕಾಶವನ್ನು ಹಿಂಪಡೆದು ಒಟ್ಟು ಸೀಟು ಸಾಮರ್ಥ್ಯದ ಅರ್ಧದಷ್ಟು ಮಾತ್ರವೇ ಪ್ರೇಕ್ಷಕರಿಗೆ ಅವಕಾಶ ನೀಡಬೇಕೆಂದು ಸರ್ಕಾರ ಹಠಾತ್ತನೆ ನಿನ್ನೆ ಆದೇಶ ಹೊರಡಿಸಿದೆ.

    ಪುನೀತ್ ರಾಜ್‌ಕುಮಾರ್ ನಟನೆಯ 'ಯುವರತ್ನ' ಸಿನಿಮಾ ಗುರುವಾರವಷ್ಟೆ ಬಿಡುಗಡೆ ಆಗಿತ್ತು. ಸಿನಿಮಾ ಬಿಡುಗಡೆ ಆದ ಕೇವಲ ಒಂದೇ ದಿನಕ್ಕೆ ಚಿತ್ರಮಂದಿರಗಳನ್ನು ಅರ್ಧ ಮಾತ್ರವೇ ಭರ್ತಿ ಮಾಡುವ ಆದೇಶ ಸರ್ಕಾರ ಹೊರಡಿಸಿದೆ. ಇದು 'ಯುವರತ್ನ' ಸಿನಿಮಾಕ್ಕೆ ಬಹುದೊಡ್ಡ ಪೆಟ್ಟು ನೀಡಿದೆ.

    ಪುನೀತ್ ಅವರು ನಿನ್ನೆಯೇ ಹೇಳಿರುವಂತೆ, ಸಿನಿಮಾ ಬಿಡುಗಡೆಗೆ ಮುನ್ನಾ ಸಿಎಂ ಯಡಿಯೂರಪ್ಪ ಅವರೇ ಟ್ವೀಟ್‌ ಮಾಡಿ 'ಚಿತ್ರಮಂದಿರಗಳ ಮೇಲೆ ನಿರ್ಬಂಧ ಹೇರುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ' ಎಂದಿದ್ದರು. ಅವರ ಹೇಳಿಕೆ ನಂಬಿ ನಾವು ಸಿನಿಮಾ ಬಿಡುಗಡೆ ಮಾಡಿದೆವು ಈಗ ಹಠಾತ್ತನೆ ನಿರ್ಬಂಧ ಹೇರಿದ್ದಾರೆ. ಒಂದು ವೇಳೆ ಅವರು ನಮಗೆ ಸಣ್ಣ ಸೂಚನೆ ಕೊಟ್ಟಿದ್ದರೂ ಸಾಕಾಗಿತ್ತು ಸಿನಿಮಾ ಬಿಡುಗಡೆ ಮಾಡುತ್ತಿರಲಿಲ್ಲ' ಎಂದಿದ್ದಾರೆ.

    ಟ್ರೆಂಡ್ ಆಗುತ್ತಿವೆ ಹ್ಯಾಷ್‌ಟ್ಯಾಗ್‌ಗಳು

    ಟ್ರೆಂಡ್ ಆಗುತ್ತಿವೆ ಹ್ಯಾಷ್‌ಟ್ಯಾಗ್‌ಗಳು

    ಸರ್ಕಾರದ ಈ ಹಠಾತ್ ನಿರ್ಧಾರದ ವಿರುದ್ಧ ಚಿತ್ರರಂಗದ ಹಲವರು ದನಿ ಎತ್ತಿದ್ದಾರೆ. 'ಸೇವ್ ಸಿನಿಮಾ' (ಚಿತ್ರರಂಗ ಉಳಿಸಿ), 'ವಿ ವಾಂಟ್ 100% ಆಕ್ಯುಪೆನ್ಸಿ' (100% ಸೀಟು ಭರ್ತಿಗೆ ಅವಕಾಶ ಬೇಕು) ಹ್ಯಾಷ್‌ಟ್ಯಾಗ್‌ಗಳು ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗುತ್ತಿದ್ದು, ಹಲವಾರು ನಟ-ನಟಿ, ನಿರ್ದೇಶಕ, ನಿರ್ಮಾಪಕರು ಹ್ಯಾಷ್‌ ಟ್ಯಾಗ್‌ ಬಳಸಿ ಟ್ವೀಟ್ ಮಾಡಿ ಸರ್ಕಾರದ ನಿರ್ಧಾರವನ್ನು ಖಂಡಿಸುತ್ತಿದ್ದಾರೆ.

    ಸರ್ಕಾರದ ನಿರ್ಧಾರ ವಿರೋಧಿಸಿ ಟ್ವೀಟ್ ಮಾಡಿದ್ದಾರೆ

    ಸರ್ಕಾರದ ನಿರ್ಧಾರ ವಿರೋಧಿಸಿ ಟ್ವೀಟ್ ಮಾಡಿದ್ದಾರೆ

    ನಿರ್ದೇಶಕ ಪವನ್ ಒಡೆಯರ್, ನಟ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಸುದೀಪ್, ಸುದೀಪ್ ಅಭಿಮಾನಿಗಳು ನಿರ್ಮಾಪಕ ಕೆ ಮಂಜು, ಭಾ.ಮಾ.ಹರೀಶ್ ಇನ್ನೂ ಹಲವಾರು ಮಂದಿ ಸರ್ಕಾರದ ಈ ಹಠಾತ್ ನಿರ್ಣಯವನ್ನು ಖಂಡಿಸಿದ್ದಾರೆ.

    ನಿಮಗೆ ಮನರಂಜನೆ, ಹಲವರಿಗೆ ಅದು ಜೀವನ: ರಾಜ್‌ ಬಿ ಶೆಟ್ಟಿ

    ನಿಮಗೆ ಮನರಂಜನೆ, ಹಲವರಿಗೆ ಅದು ಜೀವನ: ರಾಜ್‌ ಬಿ ಶೆಟ್ಟಿ

    ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿ, 'ಕನ್ನಡ ಚಿತ್ರರಂಗ ಉಳಿಯುವ ನಿಟ್ಟಿನಲ್ಲಿ ಚಿತ್ರಮಂದಿರಗಳಲ್ಲಿ 100% ಅನುಮತಿಯನ್ನು ಕೊಡಬೇಕು ಎಂದು ರಾಜ್ಯ ಸರ್ಕಾರದಲ್ಲಿ ವಿನಂಬ್ರ ಮನವಿ' ಎಂದಿದ್ದಾರೆ. ನಟ-ನಿರ್ದೇಶಕ ರಾಜ್ ಬಿ ಶೆಟ್ಟಿ ಟ್ವೀಟ್ ಮಾಡಿ, 'ಸಿನಿಮಾ ನಿಮಗೆ ಮನರಂಜನೆ ಆದರೆ ಹಲವರಿಗೆ ಅದು ಜೀವನ' ಎಂದಿದ್ದಾರೆ.

    Recommended Video

    ಪುನೀತ್ ರಾಜ್ ಕುಮಾರ್ ಮನವಿಗೆ ಸಚಿವ ಸುಧಾಕರ್ ಖಡಕ್ ಪ್ರತಿಕ್ರಿಯೆ | Filmibeat Kannada
    ಭಾರಿ ನಿರಾಸೆ ಅನುಭವಿಸಿದ 'ಯುವರತ್ನ' ತಂಡ

    ಭಾರಿ ನಿರಾಸೆ ಅನುಭವಿಸಿದ 'ಯುವರತ್ನ' ತಂಡ

    ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಉಡುಪಿ, ಕಲಬುರ್ಗಿ, ದಕ್ಷಿಣ ಕನ್ನಡ, ಬೀದರ್, ಧಾರವಾಡ ಜಿಲ್ಲೆಗಳಲ್ಲಿ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ವಾರಾಂತ್ಯದಲ್ಲಿ ಒಳ್ಳೆಯ ಕಲೆಕ್ಷನ್ ಆಗುವ ನಿರೀಕ್ಷೆಯಲ್ಲಿದ್ದ 'ಯುವರತ್ನ' ತಂಡಕ್ಕೆ ಇದು ಭಾರಿ ನಿರಾಸೆ ತಂದಿದೆ.

    English summary
    Sandalwood actors, directors and produers upset about government decission to limit theaters seating occupency to 50%.
    Saturday, April 3, 2021, 16:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X