'ಕರ್ನಾಟಕ ಬಂದ್'ಗೆ ಕನ್ನಡ ಚಿತ್ರರಂಗದ ಸಂಪೂರ್ಣ ಬೆಂಬಲ

By Naveen

Recommended Video

'ಕರ್ನಾಟಕ ಬಂದ್'ಗೆ ಕನ್ನಡ ಚಿತ್ರರಂಗದ ಸಂಪೂರ್ಣ ಬೆಂಬಲ | Filmibeat Kannada

ಮಹದಾಯಿ ಹೋರಾಟಕ್ಕಾಗಿ ಇಂದು ಕರ್ನಾಟಕ ಬಂದ್ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಕನ್ನಡ ಚಿತ್ರರಂಗ ಕೂಡ ಸಂಪೂರ್ಣವಾಗಿ ಬಂದ್ ಗೆ ಸಾಥ್ ನೀಡಿದೆ. ಬೆಂಗಳೂರು ಸೇರಿದಂತೆ ಕರ್ನಾಟಕ ಎಲ್ಲ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ರದ್ದಾಗಿದೆ. ಜೊತೆಗೆ ಯಾವುದೇ ಸಿನಿಮಾ ಶೂಟಿಂಗ್ ಇಂದು ನಡೆಯುತ್ತಿಲ್ಲ.

ನಿನ್ನೆಯೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾದ್ಯಕ್ಷ ಉಮೇಶ್ ಬಣಕಾರ್ ಕರ್ನಾಟಕ ಬಂದ್ ಬಗ್ಗೆ ಮಾತನಾಡಿ ಈ ಬಂದ್ ಗೆ ವಾಣಿಜ್ಯ ಮಂಡಳಿಯ ಬೆಂಬಲ ಇದೆ ಎಂದು ಹೇಳಿದ್ದರು. ಅದೇ ರೀತಿ ನಿರ್ಮಾಪಕರ ವಲಯ ಮತ್ತು ಪ್ರದರ್ಶಕ ವಲಯ ಕೂಡ ವಾಣಿಜ್ಯ ಮಂಡಳಿಯ ನಿರ್ಧಾರವನ್ನು ಪಾಲಿಸಿತ್ತು.

ಇಂದು ಬೆಂಗಳೂರಿನ ಕೆ.ಜಿ.ರಸ್ತೆಯ ಪ್ರಮುಖ ಚಿತ್ರಮಂದಿರಗಳಾದ ಸಂತೋಷ್, ನರ್ತಕಿ, ತ್ರಿವೇಣಿ, ಅನುಪಮ, ಭೂಮಿಕಾ, ಅನುಭವ್, ಮೇನಕಾ, ಸ್ವಪ್ನ ಸೇರಿದಂತೆ ಎಲ್ಲ ಚಿತ್ರಗಳು ಖಾಲಿ ಖಾಲಿ ಆಗಿದೆ. ಮಲ್ಟಿಪ್ಲೆಕ್ಸ್ ಗಳು ಚಿತ್ರ ಚಿತ್ರಪ್ರದರ್ಶನವನ್ನು ರದ್ದು ಮಾಡಿದೆ. ಆದರೆ ಮಲ್ಟಿಪ್ಲೆಕ್ಸ್ ನಲ್ಲಿ ಇಂದು ಸಂಜೆ 6ಗಂಟೆಯ ನಂತರ ಎಂದಿನಂತೆ ಚಿತ್ರ ಪ್ರದರ್ಶನವಾಗುತ್ತದೆ.

Kannada movie industry supports Karnataka bandh

ಉಳಿದಂತೆ, ಇಂದು ಕನ್ನಡದ ಯಾವುದೇ ಸಿನಿಮಾಗಳು ಬಂದ್ ಹಿನ್ನಲೆಯಲ್ಲಿ ರಿಲೀಸ್ ಆಗುತ್ತಿಲ್ಲ. ಆದರೆ ದೀಪಿಕಾ ಪಡುಕೋಣೆ ನಟನೆಯ 'ಪದ್ಮಾವತ್' ಚಿತ್ರ ಇಂದು ಅಧಿಕೃತವಾಗಿ ಬಿಡುಗಡೆಯಾಗಬೇಕಿತ್ತು. ಆದರೆ ಬಂದ್ ಇರುವುದರಿಂದ ಚಿತ್ರದ ಪ್ರದರ್ಶನ ಸಂಜೆ ಶುರು ಆಗಲಿದೆ.

ಕನ್ನಡದ ನಟರು, ನಟಿಯರು, ಕಲಾವಿದರು, ನಿರ್ದೇಶಕರು ನೇರವಾಗಿ ರಸ್ತೆಗೆ ಇಳಿದು ಈ ಹೋರಾಟದಲ್ಲಿ ಭಾಗಿಯಾಗದೆ ಇದ್ದರು ಕೂಡ ಇಂದು ಚಿತ್ರರಂಗದ ಎಲ್ಲ ಚಟುವಟಿಕೆಗಳನ್ನು ನಿಲ್ಲಿಸಿ ಬಂದ್ ಗೆ ಬೆಂಬಲ ಸೂಚಿಸಿದ್ದಾರೆ.

More from Filmibeat

English summary
Kannada film industry supports Karnataka bandh. No movie shows and shooting Today. (January 26). ಮಹದಾಯಿ ಹೋರಾಟಕ್ಕಾಗಿ ಇಂದು ಕರ್ನಾಟಕ ಬಂದ್ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಕನ್ನಡ ಚಿತ್ರರಂಗ ಕೂಡ ಸಂಪೂರ್ಣವಾಗಿ ಬಂದ್ ಗೆ ಸಾಥ್ ನೀಡಿದೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X