'ಅಟ್ಲಾಂಟಾ'ಕ್ಕೆ ಹಾರಿದ ನಾಗತಿಹಳ್ಳಿಯವರ ಸುಂದರ 'ಇಷ್ಟಕಾಮ್ಯ'
ಕನ್ನಡದ ಮೇಷ್ಟ್ರು ಅಂತಾನೇ ಖ್ಯಾತಿ ಪಡೆದಿರುವ ಬರಹಗಾರ ಕಮ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದಲ್ಲಿ ಮೂಡಿಬಂದಿದ್ದ 'ಇಷ್ಟಕಾಮ್ಯ' ಎಂಬ ಸುಂದರ ಪ್ರೇಮಕಾವ್ಯ ಕರ್ನಾಟಕದಲ್ಲಿ ಕೌಟುಂಬಿಕ ಪ್ರೇಕ್ಷಕರ ಮನಗೆದ್ದು ಇದೀಗ ವಿದೇಶದಲ್ಲಿ ಮೋಡಿ ಮಾಡಲು ಸಜ್ಜಾಗಿದೆ.
ಹೌದು ಜೂನ್ 25 ಮತ್ತು 26 ರಂದು ನಾಗತಿಹಳ್ಳಿ ಚಂದ್ರಶೇಖರ್ ಅವರ 'ಇಷ್ಟಕಾಮ್ಯ' ವಿದೇಶಿಗನ್ನಡಿಗರನ್ನು ಮೋಡಿ ಮಾಡಲು 'ಯುಎಸ್ ನ ಅಟ್ಲಾಂಟಾ'ಕ್ಕೆ ಜಿಗಿದಿದೆ. ಇದೇ ಶನಿವಾರ ಮತ್ತು ಭಾನುವಾರ ಅಪ್ಪಟ ಮಲೆನಾಡು ಸೊಗಡಿನ 'ಇಷ್ಟಕಾಮ್ಯ' [ವಿಮರ್ಶೆ: 'ಇಷ್ಟಕಾಮ್ಯ', ಕನ್ನಡ ಮಣ್ಣಿನ ರಮ್ಯ ಪ್ರೇಮಕಾವ್ಯ] ಭರ್ಜರಿ ಪ್ರದರ್ಶನ ಕಾಣಲಿದೆ.

ಅಟ್ಲಾಂಟಾ ನಗರದ ಡಿಜಿಮ್ಯಾಕ್ಸ್ ಚಿತ್ರಮಂದಿರ (ಹಳೇ ನವರಂಗ್ ಚಿತ್ರಮಂದಿರ) ದಲ್ಲಿ ಜೂನ್ 25 ರಂದು ಸಂಜೆ 4.40 ಕ್ಕೆ ಹಾಗೂ ಜೂನ್ 26 ರಂದು ಮಧ್ಯಾಹ್ನ 2 ಘಂಟೆಗೆ ನಾಗತಿಹಳ್ಳಿ ಚಂದ್ರಶೇಖರ್ ಅವರ ಬ್ಲಾಕ್ ಬಸ್ಟರ್ ಚಿತ್ರ 'ಇಷ್ಟಕಾಮ್ಯ' ಪ್ರದರ್ಶನಗೊಳ್ಳಲಿದೆ.

'ಅಟ್ಲಾಂಟಾ'ದಲ್ಲಿ ನೆಲೆಸಿರುವ ವಿದೇಶಿಗನ್ನಡಿಗರು ಈ ಸುಂದರ ಫ್ಯಾಮಿಲಿ ಮನರಂಜನಾತ್ಮಕ ಚಿತ್ರವನ್ನು ನೋಡಿ ಮಲೆನಾಡಿನ ರಮ್ಯ ಪರಿಸರವನ್ನು ಆಸ್ವಾದಿಸಿ. ಹೆಚ್ಚಿನ ಮಾಹಿತಿಗಾಗಿ www.kasturimedia.com ಈ ವೆಬ್ ಸೈಟ್ ಗೆ ಲಾಗ್ ಇನ್ ಆಗಿ.[ಅಮೆರಿಕದಲ್ಲೂ 'ಕಿಲ್ಲಿಂಗ್ ವೀರಪ್ಪನ್' ಆರ್ಭಟ]

'ಅಗ್ನಿಸಾಕ್ಷಿ' ಚಿತ್ರದ ಖ್ಯಾತಿಯ ನಟ ವಿಜಯ್ ಸೂರ್ಯ, 'ಅಶ್ವಿನಿ ನಕ್ಷತ್ರ' ಖ್ಯಾತಿಯ ನಟಿ ಮಯೂರಿ, ಚಿಕ್ಕಣ್ಣ, ನಟಿ ಕಾವ್ಯ ಶೆಟ್ಟಿ, ಸುಮನ್ ನಗರ್ಕರ್, ರಂಗಾಯಣ ರಘು ಕಾಣಿಸಿಕೊಂಡಿದ್ದ 'ಇಷ್ಟಕಾಮ್ಯ' ಮೇ 13 ರಂದು ಎಲ್ಲಾ ಕಡೆ ಅದ್ದೂರಿಯಾಗಿ ತೆರೆ ಕಂಡಿತ್ತು.


Click it and Unblock the Notifications











