For Quick Alerts
  ALLOW NOTIFICATIONS  
  For Daily Alerts

  ಸೆನ್ಸಾರ್ ಅಂಗಳದಲ್ಲಿ ಪಾಸ್ ಆದ ಚೇತನ್ ಚಂದ್ರ 'ಜಾತ್ರೆ'

  By Harshitha
  |

  ಸಂಪೂರ್ಣ ಮನರಂಜನೆ ಜೊತೆಗೆ ಸಾಹಸ ಭರಿತ ಸಿನಿಮಾ 'ಜಾತ್ರೆ' ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ 'U' ಸರ್ಟಿಫಿಕೇಟ್ ಸಿಕ್ಕಿದೆ. 'ಜಾತ್ರೆ' ಸಿನಿಮಾದ ಮೂಲಕ ನಟ ರವಿತೇಜ ನಿರ್ದೇಶನಕ್ಕೆ ಪದಾರ್ಪಣೆ ಮಾಡಿದ್ದಾರೆ. ಚಿತ್ರರಂಗದಲ್ಲಿ ಕಳೆದ 14 ವರ್ಷಗಳಿಂದ ಸಕ್ರಿಯರಾಗಿರುವ ರವಿತೇಜ ಈಗ ನಿರ್ದೇಶನ ಮಾಡಿದ ಖುಷಿಯಲ್ಲಿದ್ದಾರೆ.

  ಈ ಸಿನಿಮಾದಲ್ಲಿ ಚೇತನ್ ಚಂದ್ರ ಅವರನ್ನು ವಿಭಿನ್ನ ಪಾತ್ರದಲ್ಲಿ ಕಾಣಬಹುದು. ಐಶ್ವರ್ಯ ನಾಗ್ ಚಿತ್ರದ ಕಥಾನಾಯಕಿ. ದಿನ ನಿತ್ಯದ ಬದುಕೇ ಒಂದು 'ಜಾತ್ರೆ' ಇದ್ದಹಾಗೆ ಎನ್ನುವುದು ಈ ಚಿತ್ರದ ಮುಖ್ಯ ಅಂಶ.[ರಿಕ್ಕಿ ಅಲಿಯಾಸ್ ರಕ್ಷಿತ್ ಶೆಟ್ಟಿ ಕಂಡಂತೆ 'ಜಾತ್ರೆ']

  ಯು.ಆರ್.ಸಿ ಮೂವೀಸ್ ಅಡಿಯಲ್ಲಿ ಶ್ರೀಕಾಂತ್, ಮೋಹನ ಬಾವಲೆ ಹಾಗೂ ಕೆ.ರಾಮಸ್ವಾಮಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶಕ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈ ಚಿತ್ರಕ್ಕೆ ಒಂದು ಹಾಡು ಹಾಡಿದ್ದಾರೆ.

  ಜಗದೀಶ್ ವಾಲಿ ಅವರ ಛಾಯಾಗ್ರಹಣ, ತ್ರಿಭುವನ್ ನೃತ್ಯ ನಿರ್ದೇಶನ, ಕೆ.ಎಂ.ಪ್ರಕಾಶ್ ಸಂಕಲನ ಚಿತ್ರಕ್ಕಿದೆ.

  English summary
  Kannada Actor Chetan Chandra starrer Kannada Movie 'Jaatre' gets U certificate from the censor board. The movie is directed by Raviteja.
  Sunday, October 18, 2015, 13:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X