ನವೆಂಬರ್ 9 ರಂದು 'ಜಗತ್ ಕಿಲಾಡಿ' ಬರ್ತಿದ್ದಾನೆ
ಜಾಲಿ ಡೇಸ್, ಕೇಸ್ ನಂ.18/9, ಪೈಪೋಟಿ, ರಾಜರು ಚಿತ್ರಗಳ ಮೂಲಕ ಸ್ಯಾಂಡಲ್ ವುಡ್ ಅಂಗಳದಲ್ಲಿ ವಿಶಿಷ್ಠ ನಟನಾಗಿ ಗುರುಸಿಕೊಂಡಿರುವ ನಿರಂಜನ್ ಶೆಟ್ಟಿ ಈಗ 'ಜಗತ್ ಕಿಲಾಡಿ'ಯಾಗಿ ಎಂಟ್ರಿ ಕೊಡ್ತಿದ್ದಾರೆ.
ಬರಿ ಪೋಸ್ಟರ್ ನಿಂದಲೇ ಸೆನ್ಸೇಶನ್ ಕ್ರಿಯೇಟ್ ಮಾಡಿದ್ದ 'ಜಗತ್ ಕಿಲಾಡಿ' ಟ್ರೈಲರ್ ರಿಲೀಸ್ ಮೂಲಕ ನಿರೀಕ್ಷೆ ಡಬಲ್ ಮಾಡಿತ್ತು. ಇದೇ ನಿರೀಕ್ಷೆಯಿಂದ ಪ್ರೇಕ್ಷಕರನ್ನ ರಂಜಿಸಲು ನವೆಂಬರ್ 9 ರಂದು ತೆರೆಮೇಲೆ ಬರ್ತಿದೆ.
ಸಿನಿಮಾದಲ್ಲಿ ಪ್ರಪಂಚದಲ್ಲಿ ಜನ ಹೇಗೆ ಮೋಸ ಹೋಗ್ತಾರೆ. ಅಲ್ಲದೆ ಮೋಸ ಮಾಡುವವರು ಯಾವ ರೀತಿ ಹೋಮ್ ವರ್ಕ್ ಮಾಡ್ತಾರೆ ಎಂಬ ಬಗ್ಗೆ 'ಜಗತ್ ಕಿಲಾಡಿ' ಸಿನಿಮಾದಲ್ಲಿ ತೋರಿಸಲಾಗಿದೆ.

ಸಸ್ಪೆನ್ಸ್ ಕಮ್ ಥ್ರಿಲ್ಲರ್ ಕಥೆ ಆಧರಿಸಿರುವ ಜಗತ್ ಕಿಲಾಡಿ ಚಿತ್ರದಲ್ಲಿ ನಿರಂಜನ್ ಶೆಟ್ಟಿ ಗೆ ಅಮಿತಾ ಕುಲಾಳ್ ನಾಯಕಿಯಾಗಿದ್ದು, ರಂಗಾಯಣ ರಘು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಅರವ್.ಬಿ.ಧೀರೇಂದ್ರ ಆಕ್ಷನ್ ಕಟ್ ಹೇಳಿದ್ದು, ಈ ಚಿತ್ರವನ್ನ ಲಯನ್ ಆರ್. ರಮೇಶ್ ಬಾಬು ಕೆ.ಆರ್ ಪುರಂ ಅವರು ನಿರ್ಮಾಣ ಮಾಡಿದ್ದಾರೆ. ಗಿರಿಧರ್ ದಿವಾನ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ಇನ್ನುಳಿದಂತೆ ಮಜಾ ಟಾಕೀಸ್ ಖ್ಯಾತಿಯ ಪವನ್, ರಂಗಾಯಣ ರಘು, ಸುಚೇಂದ್ರ ಪ್ರಸಾದ್, ಜೈ ಜಗದೀಶ್, ರವಿ ಚೇತನ್, ಕಡ್ಡಿ ವಿಶ್ವ ಹೀಗೆ ಇನ್ನು ಹಲವು ಕಲಾವಿದರ ದಂಡೇ ಇದೆ.


Click it and Unblock the Notifications











