»   » ಚಾಲೆಂಜಿಂಗ್ ಸ್ಟಾರ್ 'ಜಗ್ಗುದಾದ'ನ, ಫಸ್ಟ್ ಲುಕ್ ಪೋಸ್ಟರ್ ಔಟ್!

ಚಾಲೆಂಜಿಂಗ್ ಸ್ಟಾರ್ 'ಜಗ್ಗುದಾದ'ನ, ಫಸ್ಟ್ ಲುಕ್ ಪೋಸ್ಟರ್ ಔಟ್!

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೊಚ್ಚ ಹೊಸ ಪ್ರಾಜೆಕ್ಟ್ 'ಜಗ್ಗುದಾದ' ಈಗಾಗಲೇ ಶೂಟಿಂಗ್ ಹಂತದಲ್ಲಿದ್ದು, ಚಿತ್ರತಂಡ ದೀಪಾವಳಿ ಸ್ಪೆಷಲ್ ಅಂತ ಚಿತ್ರದ ಹೊಚ್ಚ ಹೊಸ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಿದೆ.

ಪೋಸ್ಟರ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಖತ್ ಸ್ಟೈಲಿಷ್ ಲುಕ್ ನಲ್ಲಿ ಮಿಂಚಿದ್ದು, ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತಹ ಪೋಸ್ ನೀಡಿದ್ದಾರೆ.[ದರ್ಶನ್ ಕೈಗೆ ಪೆಟ್ಟು; 'ಜಗ್ಗು ದಾದಾ' ಶೂಟಿಂಗ್ ಮುಂದಕ್ಕೆ.! ]

Kannada movie 'Jaggu Dada' first look poster released

ನಿರ್ದೇಶಕ ರಾಘವೇಂದ್ರ ಹೆಗಡೆ ಆಕ್ಷನ್-ಕಟ್ ಹೇಳಿರುವ ಜಗ್ಗುದಾದ' ಚಿತ್ರದ ಶೂಟಿಂಗ್ ಮುಂಬೈನಲ್ಲಿ ಭರದಿಂದ ಸಾಗುತ್ತಿತ್ತು ಆದರೆ ಆಚನಕ್ಕಾಗಿ ದರ್ಶನ್ ಅವರ ಕೈಗೆ ಗಾಯಗೊಂಡು ಅವರು ಸಂಪೂರ್ಣ ರೆಸ್ಟ್ ನಲ್ಲಿರುವುದರಿಂದ ಸದ್ಯಕ್ಕೆ ಚಿತ್ರದ ಶೂಟಿಂಗ್ ಮುಂದೂಡಲಾಗಿದೆ.

ಇನ್ನು ಈ ಚಿತ್ರದಲ್ಲಿ ದರ್ಶನ್ ಅವರು ವಿಶೇಷ ಪಾತ್ರ ವಹಿಸುತ್ತಿದ್ದಾರಂತೆ. ಹಿಂದೆಂದೂ ಕಾಣಿಸಿಕೊಂಡಿರದಂತಹ ವಿಭಿನ್ನ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ಮಿಂಚಿದ್ದಾರೆ. ಆಕ್ಷನ್ ಜೊತೆಗೆ ಪಕ್ಕಾ ಕಾಮಿಡಿ ಚಿತ್ರವಾದ 'ಜಗ್ಗುದಾದ' ಸಿನಿಮಾದಲ್ಲಿ, ದರ್ಶನ್ ಅವರು ದೊಡ್ಡ ಡಾನ್ ಕುಟುಂಬದಿಂದ ಬಂದು ಇಡೀ ಕರ್ನಾಟಕಕ್ಕೆ ಡಾನ್ ಆಗಿರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇಡೀ ಮೈಸೂರಿಗೆ ದರ್ಶನ್ ಅವರ ತಾತ ದೊಡ್ಡ ರೌಡಿಯಾದರೆ, ಇಡೀ ಕರ್ನಾಟಕಕ್ಕೆ ಮೊಮ್ಮಗ ರೌಡಿ. ಇನ್ನು ಮಗನನ್ನು ಇಡೀ ಭಾರತಕ್ಕೆ ದೊಡ್ಡ ಡಾನ್ ಮಾಡಬೇಕೆನ್ನುವ ಕುಟುಂಬದ ಆಸೆ. ಇಂತಹ ಸ್ಟೋರಿ ಲೈನ್ ಅನ್ನು ಹೊಂದಿರುವ 'ಜಗ್ಗುದಾದ' ಪಕ್ಕಾ ಫ್ಯಾಮಿಲಿ ಎಂರ್ಟಟೈನರ್ ಅಂತ ದರ್ಶನ್ ಅವರು ತಿಳಿಸಿದ್ದಾರೆ.[ಚಿತ್ರಗಳು : 'ಜಗ್ಗು ದಾದಾ' ಅಡ್ಡದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್]

Kannada movie 'Jaggu Dada' first look poster released

ಉಳಿದಂತೆ ಬಾಲಿವುಡ್ ನಟ ಶಾರುಖ್ ಖಾನ್ ಅವರ 'ಚೆನ್ನೈ ಎಕ್ಸ್ ಪ್ರೆಸ್' ಚಿತ್ರಕ್ಕೆ ಚಿತ್ರಕಥೆ ಬರೆದಿರುವ ಯೂನಸ್ ಸಾಜಾವಾಲಾ ಅವರು 'ಜಗ್ಗುದಾದ'ನಿಗೆ ಚಿತ್ರಕಥೆ ಬರೆದಿದ್ದಾರೆ. ಹಾಗೂ ತೆಲುಗಿನ 'ಮಿರಪಕಾಯ್' ಬೆಡಗಿ ದೀಕ್ಷಾ ಸೇಠ್ ಅವರು ದರ್ಶನ್ ಅವರ ಜೊತೆ ಡ್ಯುಯೆಟ್ ಹಾಡಲಿದ್ದಾರೆ.

ಸದ್ಯಕ್ಕೆ ಹಬ್ಬಕ್ಕೆ ಬಿಡುಗಡೆಯಾಗಿರುವ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಜೊತೆಗೆ 'ಜಗ್ಗುದಾದ' ಚಿತ್ರದ ಖಾಸ್ ಖಬರ್ ಇಷ್ಟು, ಹೆಚ್ಚಿನ ಅಪ್ ಡೇಟ್ ಗಾಗಿ ಫಿಲ್ಮಿಬೀಟ್ ಕನ್ನಡ ನೋಡುತ್ತಿರಿ.

English summary
Kannada movie 'Jaggu Dada' first look poster released, Kannada Actor Darshan, Actress Deeksha Seth in the lead role. The movie is directed by Raghavendra Hegde.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada