James UAE Box Office Collections: ವಿದೇಶದಲ್ಲಿ ಹಾಲಿವುಡ್, ಬಾಲಿವುಡ್‌ಗಳ ಮುಂದೆ 'ಜೇಮ್ಸ್'ನದ್ದೇ ಹವಾ

ಪುನೀತ್ ರಾಜ್‌ಕುಮಾರ್ ನಟನೆಯ 'ಜೇಮ್ಸ್' ಕರ್ನಾಟಕದಲ್ಲಿ ಈಗಾಗಲೇ ದೂಳೆಬ್ಬಿಸುತ್ತಿದೆ. ಮೊದಲ ದಿನವೇ ದಾಖಲೆ ಮೊತ್ತದ ಕಲೆಕ್ಷನ್ ಮಾಡಿ ಸೂಪರ್-ಡೂಪರ್ ಹಿಟ್ ಎನಿಸಿಕೊಳ್ಳುವತ್ತ ಮುಂದಡಿ ಇಟ್ಟಿದೆ.

'ಜೇಮ್ಸ್' ಸಿನಿಮಾ ಕರ್ನಾಟಕದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿಯೂ ಸದ್ದು ಮಾಡುತ್ತಿದೆ. ಸಿನಿಮಾ ಬಾಕ್ಸ್‌ ಆಫೀಸ್ ವಿಶ್ಲೇಷಕ ರಮೇಶ್ ಬಾಲಾ ನೀಡಿರುವ ಮಾಹಿತಿಯಂತೆ, ಕನ್ನಡ ಸಿನಿಮಾ 'ಜೇಮ್ಸ್' ಅರಬ್ ದೇಶಗಳಲ್ಲಿ ಹಾಲಿವುಡ್ ಸಿನಿಮಾಗಳನ್ನೂ ಹಿಂದಿಕ್ಕಿ ಹೆಚ್ಚು ಗಳಿಕೆ ಮಾಡುತ್ತಿದೆ.

ರಮೇಶ್ ಬಾಲಾ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಯುನೈಟೆಡ್ ಸ್ಟೇಟ್ಸ್ ಆಫ್ ಅರಬ್‌ನಲ್ಲಿ ಬಿಡುಗಡೆ ಆಗಿರುವ ಸಿನಿಮಾಗಳ ಪೈಕಿ ಕನ್ನಡದ 'ಜೇಮ್ಸ್' ಸಿನಿಮಾ ಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಜನಪ್ರಿಯ 'ದಿ ಬ್ಯಾಟ್‌ಮ್ಯಾನ್' ಸಿನಿಮಾ ಇದೆ.

Recommended Video

James 100 Crore Club | ಜೇಮ್ಸ್ ಕಲೆಕ್ಷನ್ ಬಗ್ಗೆ ಅಚ್ಚರಿಯ ಮಾಹಿತಿ ಬಿಚ್ಚಿಟ್ಟ ನಿರ್ಮಾಪಕ ಕಿಶೋರ್

'ಜೇಮ್ಸ್' ಸಿನಿಮಾದ ಬಳಿಕ ಮೂರನೇ ಸ್ಥಾನದಲ್ಲಿ ಹಾಲಿವುಡ್ ಸಿನಿಮಾ 'ಆಂಬುಲೆನ್ಸ್' ಇದೆ, ನಾಲ್ಕನೇ ಸ್ಥಾನದಲ್ಲಿ ಹಿಂದಿಯ 'ಬಚ್ಚನ್ ಪಾಂಡೆ', ಐದನೇ ಸ್ಥಾನದಲ್ಲಿ ಇಂಗ್ಲೀಷ್‌ನ 'ಟರ್ನಿಂಗ್ ರೆಡ್', ಆರನೇ ಸ್ಥಾನದಲ್ಲಿ ಹಾಲಿವುಡ್‌ನ 'ದಿ ಬ್ಯಾಡ್ ಗೈಸ್' ಏಳನೇ ಸ್ಥಾನದಲ್ಲಿ ಮಲಯಾಳಂ ಸಿನಿಮಾ 'ಭೀಷ್ಮ ಪರ್ವಂ', ಎಂಟನೇ ಸ್ಥಾನದಲ್ಲಿ ಹಾಲಿವುಡ್‌ನ 'ಅನ್‌ಕಾರ್ಟೆಡ್' ಒಂಬತ್ತನೇ ಸ್ಥಾನದಲ್ಲಿ ಆಲಿಯಾ ಭಟ್ ನಟನೆಯ 'ಗಂಗೂಬಾಯಿ ಕಾಠಿಯಾವಾಡಿ', ಹತ್ತನೇ ಸ್ಥಾನದಲ್ಲಿ ಮಲಯಾಳಂನ 'ದಿ ನೈಟ್ ಡ್ರೈವ್' ಸಿನಿಮಾ ಇದೆ.

Kannada Movie James Dominating In UAE Box Office

ದುಬೈ ಹಾಗೂ ಒಟ್ಟಾರೆ ಅರಬ್ ದೇಶಗಳಲ್ಲಿ ಭಾರತದ ಅದರಲ್ಲಿಯೂ ದಕ್ಷಿಣ ಭಾರತದ ಸಿನಿಮಾಗಳಿಗೆ ಒಳ್ಳೆಯ ಬೇಡಿಕೆ ಇದೆ. ಆದರೆ ಇತರ ದಕ್ಷಿಣ ಭಾರತ ಸಿನಿಮಾಗಳಿಗೆ ಹೋಲಿಸಿದರೆ ಕನ್ನಡ ಸಿನಿಮಾಗಳಿಗೆ ಬೇಡಿಕೆ ತುಸು ಕಡಿಮೆಯೇ. ಆದರೆ, ಇದೇ ಮೊದಲ ಬಾರಿಗೆ ಕನ್ನಡದ 'ಜೇಮ್ಸ್' ಸಿನಿಮಾ ಗಳಿಕೆಯಲ್ಲಿ ಟಾಪ್ ಎರಡರ ಸ್ಥಾನಕ್ಕೇ ಏರಿದ್ದು ಒಳ್ಳೆಯ ಸಂಖ್ಯೆಯ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಆಕರ್ಷಿಸುತ್ತಿದೆ.

'ಜೇಮ್ಸ್' ಸಿನಿಮಾ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿಯೂ ದೊಡ್ಡ ಸಂಖ್ಯೆಯಲ್ಲಿ ಬಿಡುಗಡೆ ಆಗಿತ್ತು. ಆಸ್ಟ್ರೇಲಿಯಾ, ಅಮೆರಿಕ, ಯುಎಇ, ಬ್ರಿಟನ್ ಇತರೆ ಯೂರೋಪ್ ದೇಶಗಳಲ್ಲಿಯೂ ಸಿನಿಮಾ ಬಿಡುಗಡೆ ಆಗಿತ್ತು.

ಬ್ರಿಟನ್‌ನಲ್ಲಿ 50 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಕನ್ನಡ ಟಾಕೀಸ್ ಬಳಗದವರು ಯೂರೋಪ್ ನ ಎಲ್ಲ ದೇಶಗಳಲ್ಲಿ ಸಿನಿಮಾವನ್ನು ಬಿಡುಗಡೆ ಮಾಡುತ್ತಿದ್ದಾರೆ. ಸಿಂಗಪೂರ್‌ನಲ್ಲಿ 'ಸ್ಯಾಂಡಲ್‌ವುಲ್ ಎಂಟರ್ಟೈನ್‌ಮೆಂಟ್ ಸಿಂಗಪುರ್' ಅವರು 'ಜೇಮ್ಸ್' ಅನ್ನು ಅಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಆಸ್ಟ್ರೇಲಿಯಾನಲ್ಲಿ ಸುಮಾರು 150 ಶೋಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಕನ್ನಡದ ನಟನೊಬ್ಬನ ಸಿನಿಮಾದ 150 ಶೋ ಆಸ್ಟ್ರೇಲಿಯಾದಲ್ಲಿ ಪ್ರದರ್ಶನವಾಗುತ್ತಿದೆ. ಈ ಬಗ್ಗೆ ಕೆನಡಾದಲ್ಲಿ ನೆಲೆಸಿರುವ ಅಪ್ಪು ಅಭಿಮಾನಿ ಹಾಗೂ ಅಲ್ಲಿ ಕನ್ನಡ ಸಿನಿಮಾಗಳ ವಿತರಕ ಕಿರಣ್ ಕೆಲವು ದಿನಗಳ ಹಿಂದಷ್ಟೆ ಮಾಹಿತಿ ನೀಡಿದ್ದರು.

ಕರ್ನಾಟಕದಲ್ಲಿಯೂ 'ಜೇಮ್ಸ್' ಸಿನಿಮಾ ಭಾರಿ ದೊಡ್ಡ ಕಲೆಕ್ಷನ್ ಅನ್ನು ಮಾಡಿದೆ. ಮೊದಲ ದಿನ 32.70 ಕೋಟಿ ಕಲೆಕ್ಷನ್ ಅನ್ನು ಕರ್ನಾಟಕ ಒಂದರಲ್ಲೆ ಮಾಡಿದ್ದ ಸಿನಿಮಾ, ಎರಡನೇ ದಿನ 18 ಕೋಟಿ ಹಾಗೂ ಮೂರನೇಯ ದಿನ 9 ಕೋಟಿ ಕಲೆಕ್ಷನ್ ಮಾಡಿತ್ತು.

More from Filmibeat

English summary
Puneeth Rajkumar starrer Kannada movie James dominating in UAE box office. Movie is in second place in collection. Many Hollywood, Bollywood movies were below James in the list.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X