»   » 21 ವರ್ಷ ಹಳೆಯ ಶಿವಣ್ಣನ ಸಿನಿಮಾ ಈಗ ಚರ್ಚೆ ಆಗೋದಕ್ಕೆ ಕಾರಣವೇನು?

21 ವರ್ಷ ಹಳೆಯ ಶಿವಣ್ಣನ ಸಿನಿಮಾ ಈಗ ಚರ್ಚೆ ಆಗೋದಕ್ಕೆ ಕಾರಣವೇನು?

Posted By:
Subscribe to Filmibeat Kannada

'ಜನುಮದ ಜೋಡಿ' ಕನ್ನಡ ಸಿನಿಮಾರಂಗದಲ್ಲಿ ಬ್ಲಾಕ್ ಬಸ್ಟರ್ ಆಗಿ ಓಡಿದ ಸಿನಿಮಾ. ಪಕ್ಕ ನಮ್ಮ ನೆಟಿವಿಟಿಗೆ ತಕ್ಕಂತೆ ಚಿತ್ರೀಕರಿಸಿದ್ದ 'ಜನುಮದ ಜೋಡಿ' ಸಿನಿಮಾವನ್ನ ನೋಡದ ಕನ್ನಡ ಸಿನಿಮಾ ಪ್ರೇಕ್ಷಕರೇ ಇಲ್ಲ. ಅದೇ 'ಜನುಮದ ಜೋಡಿ' ಸಿನಿಮಾಗೆ ಈಗ ಇಪ್ಪತ್ತು ವರ್ಷದ ಸಂಭ್ರಮ.

ಈಗಿನ 'ರಾಜಕುಮಾರ' ಸಿನಿಮಾಗಾಗಿ ಮನೆಮಂದಿಯಲ್ಲೂ ಚಿತ್ರಮಂದಿರಕ್ಕೆ ಓಡಿ ಬಂದಿದ್ದರಲ್ಲ.... ಅದೇ ರೀತಿ 'ಜನುಮದ ಜೋಡಿ' ಸಿನಿಮಾವನ್ನೂ ಜನ ಮುಗಿಬಿದ್ದು ನೋಡಿದ್ರು. ಇಪ್ಪತ್ತು ವರ್ಷದ ಹಿಂದಿನ ಕತೆ ಇವ್ರಿಗೆ ಹೇಗೆ ಗೊತ್ತು ಎನ್ನುವ ಪ್ರಶ್ನೆ ಸಾಮಾನ್ಯವಾಗಿ ಎಲ್ಲರಿಗೂ ಮೂಡುತ್ತೆ. ಅಸಲಿಗೆ, ಈ ಕತೆಯನ್ನ ನಾವ್ ಹೇಳ್ತಿಲ್ಲ. ಬದಲಾಗಿ ಸ್ವತಃ ಅಭಿಮಾನಿಗಳೇ 'ಜನುಮದ ಜೋಡಿ' ಸಿನಿಮಾ ನೋಡಿದ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ. ಮುಂದೆ ಓದಿರಿ....

ಕನ್ನಡ ಸಿನಿಮಾ ಪ್ರೇಕ್ಷಕರ ಅಚ್ಚು-ಮೆಚ್ಚಿನ ಚಿತ್ರ

'ಜನುಮದ ಜೋಡಿ' ಸಿನಿಮಾ ತೆರೆಕಂಡು ಸುಮಾರು ಇಪ್ಪತ್ತು ವರ್ಷಗಳು ಕಳೆದಿವೆ. ಜನ ಇಂದಿಗೂ ಕೂಡ ಚಿತ್ರವನ್ನ ನೆನಪಿಸಿಕೊಳ್ಳುವುದರ ಜೊತೆಗೆ ಸಿನಿಮಾ ನೋಡಿದಾಗಿನ ನೆನಪುಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ತಿದ್ದಾರೆ.

ಆಗ ಟಿಕೆಟ್ ಗೂ ಇತ್ತು ಬರಗಾಲ

'ಜನುಮದ ಜೋಡಿ' ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದ ಚಿತ್ರ. ಜನರು ಕುಟುಂಬದ ಸಮೇತರಾಗಿ ಎತ್ತಿನಗಾಡಿ, ಟ್ರಾಕ್ಟರ್ ಹಾಗೂ ಬಸ್ ಗಳಲ್ಲಿ ಒಟ್ಟೊಟ್ಟಿಗೆ ಸಿನಿಮಾ ನೋಡಲು ಹೋಗ್ತಿದ್ದರಂತೆ. ಉತ್ತರ ಕರ್ನಾಟಕದ ಅದೆಷ್ಟೋ ಜನರು ಹಾವೇರಿ, ಬ್ಯಾಡಗಿ, ರಾಣೆಬೆನ್ನೂರು ಎಲ್ಲೆಡೆ ಸುತ್ತಾಡಿ ಶಿಗ್ಗಾಂವ್ ಗೆ ಹೋಗಿ ಸಿನಿಮಾ ನೋಡಿ ಬಂದಿದ್ದಾರೆ.

ಜಾತ್ರೆಯಂತೆ ಸಿನಿಮಾ ನೋಡಿದ ಜನರು

'ಜನುಮದ ಜೋಡಿ' ಸಿನಿಮಾ ಹಳ್ಳಿ ಸೂಗಡನ್ನ ಹೊಂದಿರುವ ಚಿತ್ರ. ಸಿನಿಮಾ ಪ್ರೇಕ್ಷಕರು ಈ ಚಿತ್ರವನ್ನ ಜಾತ್ರೆಯ ರೀತಿ ಪರಿಗಣಿಸಿದ್ರು. ಅದೇ ಕಾರಣದಿಂದ ಜಾತ್ರೆಗೆ ಬರುವ ರೀತಿಯಲ್ಲಿ ಬಂದು ಚಿತ್ರವನ್ನ ನೋಡಿಕೊಂಡು ಹೋಗ್ತಿದ್ರು.

ಜಿಲ್ಲೆಗಳಲ್ಲಿ ಸೂಪರ್ ಹಿಟ್

'ಜನುಮದ ಜೋಡಿ' ಸಿನಿಮಾ ಬೆಂಗಳೂರಿನಲ್ಲಿ ಮಾತ್ರವಲ್ಲದೆ ಜಿಲ್ಲಾ ಸೆಂಟರ್ ಗಳಲ್ಲಿ ಸಖತ್ ರೆಸ್ಪಾನ್ಸ್ ಸಿಕ್ಕಿದ ಸಿನಿಮಾ. ತುಮಕೂರು ಹಾಗೂ ಮೈಸೂರಿನಲ್ಲಿ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿತ್ತಂತೆ. 'ಜನುಮದ ಜೋಡಿ' ಸಿನಿಮಾ ಸೇರಿದಂತೆ ಶಿವಣ್ಣ ಅಭಿನಯಿಸಿದ ಬಹುತೇಕ ಚಿತ್ರಗಳಿಗೆ ಹೀಗೆ ರೆಸ್ಪಾನ್ಸ್ ಸಿಕ್ಕಿತ್ತು.

English summary
Kannada Movie Janumada Jodi is trending on Social Media.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada