For Quick Alerts
  ALLOW NOTIFICATIONS  
  For Daily Alerts

  ಭಯದ ವಿರುದ್ಧ ಹೋರಾಟ ಆರಂಭಿಸಿದ ದುನಿಯಾ ರಶ್ಮಿ

  By Pavithra
  |

  ದುನಿಯಾ ರಶ್ಮಿ ಭಯದ ವಿರುದ್ದ ಸಮರ ಸಾರಿದ್ದಾರೆ. ಹೆದರಿಕೊಳ್ಳುವವರೆಗೂ ಹೆದರುಸುತ್ತಲೇ ಇರುತ್ತಾರೆ ಎನ್ನುವುದನ್ನು ನಂಬಿಕೊಂಡಿರುವ ದುನಿಯಾ ರಶ್ಮಿ ಇನ್ನು ಮುಂದೆ ಯಾವುದಕ್ಕೂ ಹೆದರುವುದಿಲ್ಲ ಎನ್ನುವುದನ್ನು ತಿಳಿಸಿದ್ದಾರೆ. ಅಷ್ಟಕ್ಕೂ ರಶ್ಮಿ ಯಾರಿಗೆ ಯಾಕೆ ಹೆದರಿಕೊಳ್ಳಬೇಕು ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಿದರೆ, ಅದಕ್ಕೆ ಉತ್ತರ 'ಕಾರ್ನಿ' ಸಿನಿಮಾ ಟ್ರೇಲರ್ .

  'ಕಾರ್ನಿ' ದುನಿಯಾ ರಶ್ಮಿ ಅಭಿನಯದ ಹೊಸ ಸಿನಿಮಾ. ಕಮರ್ಷಿಯಲ್ ಚಿತ್ರಗಳಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದ ರಶ್ಮಿ ಇದೇ ಮೊದಲ ಬಾರಿಗೆ ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯಾವುದೇ ಮಾಹಿತಿ ಬಿಟ್ಟುಕೊಡದೆ ಸದ್ದಿಲ್ಲದೆ ಚಿತ್ರೀಕರಣ ಮುಗಿಸಿರುವ 'ಕಾರ್ನಿ' ಸಿನಿಮಾತಂಡ ಇತ್ತೀಚಿಗಷ್ಟೆ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದೆ.

  ಸದ್ದಿಲ್ಲದೇ ಶೂಟಿಂಗ್ ಮುಗಿಸಿದ ದುನಿಯಾ ರಶ್ಮಿಯ 'ಕಾರ್ನಿ'ಸದ್ದಿಲ್ಲದೇ ಶೂಟಿಂಗ್ ಮುಗಿಸಿದ ದುನಿಯಾ ರಶ್ಮಿಯ 'ಕಾರ್ನಿ'

  ಸೈಕಲಾಜಿಕಲ್ ಥ್ರಿಲ್ಲರ್ ಹಾಗೂ ಮರ್ಡರ್ ಮಿಸ್ಟ್ರಿ ಕಥೆ ಹೊಂದಿರುವ ಕಾರ್ನಿ ಸಿನಿಮಾ. ಸದ್ಯ ಬಿಡುಗಡೆ ಆಗಿರುವ ಟ್ರೇಲರ್ ಕುತೂಹಲ ಮೂಡಿಸುವಂತಿದೆ. ರಶ್ಮಿ ಮೇಲೆಯೇ ಸಿನಿಮಾ ಕಥೆ ನಡೆಯುತ್ತೆ ಎನ್ನುವ ಸೂಚನೆ ಕೊಡುತ್ತಿದೆ. ಈ ಹಿಂದೆ 'ಲೈಫ್ ಸೂಪರ್' ಎಂಬ ಸಿನಿಮಾವನ್ನ ನಿರ್ದೇಶನ ಮಾಡಿದ್ದ ವಿನೋದ್ ಕುಮಾರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

  Kannada movie Kaarni movie trailer released

  ಶಿವಮೊಗ್ಗ, ಬೆಂಗಳೂರು, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಚಿತ್ರದ ಶೂಟಿಂಗ್ ಮಾಡಲಾಗಿದೆ. ಸೂರ್ಯೋದಯ ಅವರು ಛಾಯಾಗ್ರಹಣವಿದ್ದು, ಅರಿಂದಮ್ ಗೋಸ್ವಾಮಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಗೋವಿಂದರಾಜು ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ದುನಿಯಾ ರಶ್ಮಿ, ನಿರಂತ್, ರಾಜೇಶ್ ರಾಮಕೃಷ್ಣ ಸೇರಿದಂತೆ ಹಲವು ಹೊಸ ಪ್ರತಿಭೆಗಳು ಚಿತ್ರದಲ್ಲಿ ನಟಿಸಿದ್ದಾರೆ. ಅವೀಸ್ ಆಡಿಯೋನಲ್ಲಿ ಸಿನಿಮಾ ಹಾಡುಗಳು ಬಿಡುಗಡೆ ಆಗಲಿದೆ.

  English summary
  Kannada movie Kaarni movie trailer released. Duniya Rashmi is acting as a heroin in Kaarni cinema, Vinod Kumar directedthe film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X