»   » ಬೆಂಗಳೂರು ಚಿತ್ರೋತ್ಸವಕ್ಕೆ ಎಂಟ್ರಿ ಪಡೆದ ಶಿವಣ್ಣನ 'ಕಬೀರ'!

ಬೆಂಗಳೂರು ಚಿತ್ರೋತ್ಸವಕ್ಕೆ ಎಂಟ್ರಿ ಪಡೆದ ಶಿವಣ್ಣನ 'ಕಬೀರ'!

Posted By:
Subscribe to Filmibeat Kannada

ಫೆಬ್ರವರಿ 2ರಿಂದ ಆರಂಭವಾಗಲಿರುವ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಶಿವರಾಜ್ ಕುಮಾರ್ ಅಭಿನಯದ 'ಕಬೀರ' ಚಿತ್ರವನ್ನ ಕೈ ಬಿಡಲಾಗಿತ್ತು. ಇದಕ್ಕೆ ಶಿವರಾಜ್ ಕುಮಾರ್ ಅಭಿಮಾನಿಗಳು ಖಂಡನೆ ವ್ಯಕ್ತಪಡಿಸಿದ್ದರು.

ಇದೀಗ, ಹ್ಯಾಟ್ರಿಕ್ ಹೀರೋ ಶಿವಣ್ಣನ 'ಕಬೀರ' ಮತ್ತೆ ಬೆಂಗಳೂರು ಚಿತ್ರೋತ್ಸವಕ್ಕೆ ಎಂಟ್ರಿ ಕೊಟ್ಟಿದೆ. ಒಮ್ಮೆ ಕೈಬಿಟ್ಟ ಚಿತ್ರವನ್ನ ಮತ್ತೆ ಹೇಗೆ ಸೇರಿಸಲಾಯಿತು ಎಂಬ ಅನುಮಾನ ಕಾಡಬಹುದು. ಆದ್ರೆ, 'ಕಬೀರ' ಚಿತ್ರ ಆಯ್ಕೆಯಾಗಿರುವುದು ಸ್ವರ್ಧಾ ವಿಭಾಗಕ್ಕಲ್ಲ. ಸಾಮಾನ್ಯ ಪ್ರದರ್ಶನಕ್ಕೆ ಮಾತ್ರ.[ಈ 3 ಚಿತ್ರಗಳು 'ಬೆಂಗಳೂರು ಚಿತ್ರೋತ್ಸವ'ಕ್ಕೆ ಯಾಕೆ ಆಯ್ಕೆಯಾಗಿಲ್ಲ?]

Kannada Movie Kabira Screening on Bangalore Film Festival

ಹೌದು, ಬೆಂಗಳೂರು ಚಿತ್ರೋತ್ಸವದಲ್ಲಿ ಕನ್ನಡ ಸಿನಿಮಾ ವಿಭಾಗ, ಭಾರತೀಯ ಸಿನಿಮಾ ವಿಭಾಗ ಮತ್ತು ಏಷ್ಯಾ ಸಿನಿಮಾ ವಿಭಾಗಗಳಲ್ಲಿ ಸ್ವರ್ಧೆ ನಡೆಯುತ್ತಿದೆ. ಈಗಾಗಲೇ ಈ ಎಲ್ಲ ವಿಭಾಗಗಳಿಗೆ ಕನ್ನಡದ ಇತರೆ ಚಿತ್ರಗಳು ಆಯ್ಕೆಯಾಗಿದೆ. ಈ ಮೇಲಿನ ಯಾವುದೇ ಸೆಕ್ಷನ್ ನಲ್ಲಿ 'ಕಬೀರ' ಆಯ್ಕೆಯಾಗಿಲ್ಲ.[9ನೇ ಬೆಂಗಳೂರು ಚಿತ್ರೋತ್ಸವದಲ್ಲಿ 12 ಕನ್ನಡ ಚಿತ್ರಗಳು: ಯಾವುವು?]

Kannada Movie Kabira Screening on Bangalore Film Festival

ಹೀಗಾಗಿ ಅಭಿಮಾನಿಗಳ ಒತ್ತಾಯದ ಮೆರೆಗೆ, ಮತ್ತು ಚಿತ್ರೋತ್ಸವದ ನೀತಿ-ನಿಯಮಗಳ ಅನ್ವಯ 'ಕಬೀರ' ಚಿತ್ರಕ್ಕೆ ಎರಡು ಪ್ರದರ್ಶನಗಳನ್ನ ನೀಡಲಾಗಿದೆ. ಮೈಸೂರು ಮತ್ತು ಬೆಂಗಳೂರಿನಲ್ಲಿ ತಲಾ ಒಂದು ಶೋ ಪ್ರದರ್ಶನವಾಗಲಿದೆ.

ಈ ವಿಚಾರವನ್ನ ನಿನ್ನೆ (ಜನವರಿ 28) ನಡೆದ ಬೆಂಗಳೂರು ಚಿತ್ರೋತ್ಸವಕ್ಕೆ ಸಂಬಂಧಿಸಿದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಚಲನಚಿತ್ರ ಅಕಾಡಮಿ ಅಧ್ಯಕ್ಷರಾದ ಎಸ್.ವಿ.ರಾಜೇಂದ್ರಸಿಂಗ್ ಬಾಬು ಅವರು ಸ್ವಷ್ಟಪಡಿಸಿದರು.

English summary
Shivarajkumar Starring Kabira Movie Screening in Bangalore International Film Festival. Film Festival Held on February 2nd to February 9th In Bangalore and mysore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada