For Quick Alerts
  ALLOW NOTIFICATIONS  
  For Daily Alerts

  'ಕಳ್ಬೆಟ್ಟದ ದರೋಡೆಕೋರರು' ಟ್ರೇಲರ್ ರಿಲೀಸ್ : ನೀವು ನೋಡಿ, ಎಲ್ಲರಿಗೂ ತೋರಿಸಿ

  By Naveen
  |

  ನಿರ್ದೇಶಕ ದೀಪಕ್ ಮಧುವನಹಳ್ಳಿ ನಿರ್ದೇಶನದ ಎರಡನೇ ಚಿತ್ರ 'ಕಳ್ಬೆಟ್ಟದ ದರೋಡೆಕೋರರು' ಸಿನಿಮಾದ ಟ್ರೇಲರ್ ನಿನ್ನೆ ಬಿಡುಗಡೆಯಾಗಿದೆ. ಇನ್ನು ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ಚಿತ್ರತಂಡದ ಜೊತೆಗೆ ನಟ ಲೂಸ್ ಮಾದ ಯೋಗಿ, ಗುರುನಂದನ್, ನಟಿ ಸುಮನ್ ನಗರ್ಕರ್, ರಾಧಿಕಾ ಚೇತನ್ ಭಾಗಿಯಾಗಿದ್ದರು.

  'ಕಳ್ಬೆಟ್ಟದ ದರೋಡೆಕೋರರು' ಟ್ರೇಲರ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಿನ್ನೆ ಸಂಜೆ 7 ಗಂಟೆಗೆ ರಿಲೀಸ್ ಆದ ಈ ಟ್ರೇಲರ್ ಗೆ ಯೂಟ್ಯೂಬ್ ನಲ್ಲಿ 17 ಸಾವಿರಕ್ಕೂ ಹೆಚ್ಚು ಹಿಟ್ಸ್ ಸಿಕ್ಕಿದೆ. ಈ ಬಗ್ಗೆ ತಮ್ಮ ಸಂತಸವನ್ನು ನಿರ್ದೇಶಕ ದೀಪಕ್ ಮಧುವನಹಳ್ಳಿ ಫಿಲ್ಮಿ ಬೀಟ್ ಕನ್ನಡ ಜೊತೆಗೆ ಹಂಚಿಕೊಂಡಿದ್ದಾರೆ.

  'ಕಳ್ಬೆಟ್ಟದ ದರೋಡೆಕೋರರು' ಸಿನಿಮಾದ ಫಸ್ಟ್ ಲುಕ್ ಬಿಡುಗಡೆ 'ಕಳ್ಬೆಟ್ಟದ ದರೋಡೆಕೋರರು' ಸಿನಿಮಾದ ಫಸ್ಟ್ ಲುಕ್ ಬಿಡುಗಡೆ

  '' ನಮ್ಮ ಸಿನಿಮಾ ಏನು ಅನ್ನುವುದನ್ನು ಟ್ರೇಲರ್ ನಲ್ಲಿ ಹೇಳಿದ್ದೇವೆ. ಈ ಸಿನಿಮಾ ಓಟ್ ಅಂಡ್ ಓಟ್ ಸಸ್ಪೆನ್ಸ್ ಅಲ್ಲ, ಓಟ್ ಅಂಡ್ ಓಟ್ ಥ್ರಿಲ್ಲರ್ ಅಲ್ಲ, ಓಟ್ ಅಂಡ್ ಓಟ್ ಮಿಸ್ಟರಿ ಕೂಡ ಅಲ್ಲ. ಇಲ್ಲಿ ಎಲ್ಲ ಅಂಶಗಳು ಇವೆ. ಒಂದು ಲವ್ ಸ್ಟೋರಿ, ಹುಡುಗರ ಕಚ್ಚಾಟ ಹೀಗೆ ಕಮರ್ಶಿಯಲ್ ನಿಂದ ಸಿನಿಮಾ ಕೂಡಿದೆ.'' ಎಂದಿದ್ದಾರೆ ದೀಪಕ್ ಮಧುವನಹಳ್ಳಿ.

  'ರಾಮಾ ರಾಮಾ ರೇ' ಖ್ಯಾತಿಯ ನಟ ನಟರಾಜ್ ಚಿತ್ರದ ನಾಯಕನಾಗಿದ್ದಾರೆ. ಅವರಿಗೆ 'ರಾಧಾ ರಾಮಣ' ಧಾರಾವಾಹಿಯ ನಟಿ ಶ್ವೇತಾ ಆರ್ ಪ್ರಸಾದ್ ಜೋಡಿಯಾಗಿದ್ದಾರೆ. ಸುಂದರ್ ಹಾಗೂ ಹೇಮಂತ್ ಸುಶೀಲ್ ಚಿತ್ರ ತಾರಾಬಳಗದಲ್ಲಿ ಇದ್ದಾರೆ. ಅನೂಪ್ ಸಿಳೀನ್ ಚಿತ್ರಕ್ಕೆ ಸಂಗೀತ ನೀಡಿದ್ದು, ಸದ್ಯದಲ್ಲಿಯೇ ಹಾಡುಗಳು ಬಿಡುಗಡೆಯಾಗಲಿವೆ.

  English summary
  Kannada actor Nataraj and actress Swetha prasad's 'Kalbettada Darodekoraru' kannada movie trailer released. The movie is directed by Deepak Madhuvanahalli.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X