ಸೆನ್ಸಾರ್ ನಲ್ಲಿ 'ಕಲ್ಪನಾ' ಪಾಸ್, ಇನ್ನೇನಿದ್ರೂ ತೆರೆ ಮೇಲೆ ಅಬ್ಬರ

By Suneetha

ರಿಯಲ್ ಸ್ಟಾರ್ ಉಪೇಂದ್ರ ಅವರು ಮತ್ತೆ ದೆವ್ವವಾಗಿ ತಮ್ಮ ಅಭಿಮಾನಿಗಳನ್ನು ಕಾಡಲಿದ್ದಾರೆ. ಈ ಬಾರಿ ಕೂಡ ಕಾಮಿಡಿ ಜೊತೆ-ಜೊತೆಗೆ ಎಲ್ಲರನ್ನೂ ಭಯ ಪಡಿಸಲು ಉಪ್ಪಿ ಅವರು ತಯಾರಾಗಿದ್ದಾರೆ.

ಈಗಾಗಲೇ ಸೆನ್ಸಾರ್ ಅಂಗಳಕ್ಕೆ ಕಾಲಿಟ್ಟು 'ಎ' ಪ್ರಮಾಣ ಪತ್ರ ಗಳಿಸಿ ಸೆನ್ಸಾರ್ ಪರೀಕ್ಷೆ ಕೂಡ ಪಾಸ್ ಮಾಡಿ ತೆರೆಗೆ ಬರಲು 'ಕಲ್ಪನಾ 2' ಸಜ್ಜಾಗಿದೆ. ಇದೇ ಶುಕ್ರವಾರ (ಜುಲೈ 15) 'ಕಲ್ಪನಾ' ನಿಮ್ಮ ಮುಂದೆ ಭಯಂಕರವಾಗಿ ಗೋಚರಿಸಲಿದ್ದಾಳೆ.[ಜುಲೈ 2ನೇ ವಾರ ಉಪ್ಪಿ ಅಭಿಮಾನಿಗಳಿಗೆ ಥಿಯೇಟರ್ ನಲ್ಲಿ ಹಬ್ಬ]

Kannada Movie 'Kalpana 2' gets 'A' certificate

ತಮಿಳು 'ಕಾಂಚನಾ 2' ಚಿತ್ರ ರೀಮೇಕ್ ಆಗಿರುವ 'ಕಲ್ಪನಾ 2' ಚಿತ್ರದಲ್ಲಿ ನಟಿ ಪ್ರಿಯಾಮಣಿ ಮತ್ತು 'ರಂಗಿತರಂಗ' ಚಿತ್ರದ ಬೆಡಗಿ ಅವಂತಿಕಾ ಶೆಟ್ಟಿ ಅವರು ಅಧ್ಬುತವಾಗಿ ನಟಿಸಿದ್ದಾರೆ. ಉಪೇಂದ್ರ ಅವರು ದ್ವಿಪಾತ್ರದಲ್ಲಿ ನಟಿಸುವ ಮೂಲಕ ಅಭಿಮಾನಿಗಳಿಗೆ ಹಬ್ಬದೂಟ ಬಡಿಸಲಿದ್ದಾರೆ.

ನಿರ್ದೇಶಕ ಆರ್ ಅನಂತ ರಾಜು ನಿರ್ದೇಶನ ಮಾಡಿರುವ ಹಾರರ್-ಥ್ರಿಲ್ಲರ್ 'ಕಲ್ಪನಾ 2' ಚಿತ್ರಕ್ಕೆ ನಿರ್ಮಾಪಕ ರಾಜೇಂದ್ರ ಕೆ.ಎಂ ಅವರು ಬಂಡವಾಳ ಹೂಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಚಿತ್ರದ ಮೇಕಿಂಗ್ ವಿಡಿಯೋ ಕೂಡ ಬಹಳಷ್ಟು ಕುತೂಹಲ ಹುಟ್ಟಿಸುತ್ತಿದೆ.[ಜೂನ್ 9ಕ್ಕೆ ಉಪ್ಪಿ ಅಭಿಮಾನಿಗಳಿಗೆ ಕಾದಿದೆ ಸಂತಸದ ಸುದ್ದಿ]

Kannada Movie 'Kalpana 2' gets 'A' certificate

ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್‌ ಮಾಡಿರುವ ಚಿತ್ರದ ಹಾಡುಗಳು ಈಗಾಗಲೇ ಹಿಟ್ ಆಗಿದೆ. ಅಂತೂ ಕಳೆದ ವರ್ಷ ಸೆಟ್ಟೇರಿದ್ದ 'ಕಲ್ಪನಾ 2' ಕಡಿಮೆ ಅವಧಿಯಲ್ಲಿ ಶೂಟಿಂಗ್ ಮುಗಿಸಿ ತೆರೆ ಮೇಲೆ ಬರಲು ತಯಾರಾಗಿದೆ. ಇದೇ ಶುಕ್ರವಾರ ನೀವೂ ಹಾರರ್-ಥ್ರಿಲ್ಲರ್ ಚಿತ್ರವನ್ನು ಕಣ್ತುಂಬಿಕೊಳ್ಳಲು ಮರೆಯದಿರಿ.[ವಿಡಿಯೋ: 'H2O' ಕುಡಿದು ಸಖತ್ ಆಗಿ ಹಾಡಿ-ಕುಣಿದ ಉಪೇಂದ್ರ]

ರಿಯಲ್ ಸ್ಟಾರ್ ಉಪೇಂದ್ರ, ಪ್ರಿಯಾಮಣಿ ಮತ್ತು ಅವಂತಿಕಾ ಶೆಟ್ಟಿ ಒಂದಾಗಿ ಕಾಣಿಸಿಕೊಂಡಿರುವ 'ಕಲ್ಪನಾ 2' ಚಿತ್ರದ ಮೇಕಿಂಗ್ ವಿಡಿಯೋ ಇಲ್ಲಿದೆ ನೋಡಿ...

More from Filmibeat

English summary
Kannada Movie 'Kalpana 2' all set to releasing on July 15th. And now the movie gets 'A' certificate from the Censor Board. 'Kalpana 2' features Kannada Actor Upendra, Kannada Actress Priyamani, Actress Avanthika Shetty in the lead role. The movie is directed by R Anantharaju.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X