»   » ವಿಡಿಯೋ: ಆ 'ಕರಿಯ'ನಂತಲ್ಲ ಈ ಹೊಸ 'ಕರಿಯ'

ವಿಡಿಯೋ: ಆ 'ಕರಿಯ'ನಂತಲ್ಲ ಈ ಹೊಸ 'ಕರಿಯ'

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕರಿಯ' ಕನ್ನಡದ ಆಲ್ ಟೈಮ್ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದು. ಇದೇ ಹೆಸರಿನಲ್ಲಿ ಮತ್ತೊಂದು ಸಿನಿಮಾ ಬರುತ್ತಿರುವುದು ಗೊತ್ತಿದೆ. ಈಗ ಹೊಸ 'ಕರಿಯ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಸಖತ್ ಸೌಂಡ್ ಮಾಡ್ತಿದೆ.

ಹೆಸರಿಗೆ ತಕ್ಕ ಹಾಗೆ, ಇದೊಂದು ರೌಡಿಸಂ ಸಿನಿಮಾ. ಟ್ರೈಲರ್ ನಲ್ಲಿ ಮಚ್ಚು ಲಾಂಗ್ ಗಳ ಅಬ್ಬರ ಹೆಚ್ಚಾಗಿವೆ. ಹೀಗಾಗಿ, ಮತ್ತೊಮ್ಮೆ ದರ್ಶನ್ 'ಕರಿಯ' ಚಿತ್ರವನ್ನ ನೆನಪು ಮಾಡುತ್ತಿದೆ.

Kannada Movie Kariya 2 Trailer Released

ಅಂದ್ಹಾಗೆ, 'ಕರಿಯ-2' ಚಿತ್ರದಲ್ಲಿ 'ಗಣಪ' ಖ್ಯಾತಿಯ ಸಂತೋಷ್ ನಾಯಕನಾಗಿ ಅಭಿನಯಿಸಿದ್ದಾರೆ. ನಟಿ ಮಯೂರಿ ನಾಯಕಿ ಸಂತೋಷ್ ಗೆ ಜೋಡಿ ಆಗಿದ್ದಾರೆ.

ಪ್ರಭು ಶ್ರೀನಿವಾಸ್ ಪ್ರಭು ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಕರಣ್ ಬಿ ಕೃಪಾ ಸಂಗೀತ ನೀಡಿದ್ದಾರೆ. ಇನ್ನು ದರ್ಶನ್ 'ಕರಿಯ' ಚಿತ್ರವನ್ನ ನಿರ್ಮಾಣ ಮಾಡಿದ್ದ ಆನೇಕಲ್ ಬಾಲರಾಜ್ ಅವರೇ ಈಗ 'ಕರಿಯ-2' ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

'ಕರಿಯ-2' ಚಿತ್ರದ ಟ್ರೈಲರ್ ಮುಂದಿದೆ ನೋಡಿ

English summary
Kannada Actor Santhosh Starrer Kannada Movie Kariya 2 Trailer Released. The Movie Directed By Prabhu Srinivas
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada