twitter
    For Quick Alerts
    ALLOW NOTIFICATIONS  
    For Daily Alerts

    ಮೂವಿಲ್ಯಾಂಡ್ ನಲ್ಲಿ ಸರಸಕೆ ಬಾರೇ ಸರಳ ಕ್ಯಾನ್ಸಲ್

    By Rajendra
    |

    "ಸರಸಕೆ ಬಾರೇ ಸರಳ, ಸನಿಹಕೆ ಬಾರೇ ಸರಳ, ನಿನ್ನ ಬ್ಯೂಟಿ ಅತಿ ವಿರಳ...ಆ ಲುಕ್ಕು ಕಾಡಿತು ಬಹಳ..." ಎಂಬ ಹಾಡನ್ನು ಮನಸ್ಸಿನಲ್ಲೇ ನೆನೆಪಿಸಿಕೊಂಡು 'ಕರೋಡ್ ಪತಿ' ಚಿತ್ರ ನೋಡಲು ಬೆಂಗಳೂರಿನ ಪ್ರಮುಖ ಚಿತ್ರಮಂದಿರ ಮೂವಿಲ್ಯಾಂಡ್ ಗೆ ಬಂದ ಪ್ರೇಕ್ಷಕರಿಗೆ ಶುಕ್ರವಾರ (ಮಾ.14) ಬಹಳ ನಿರಾಸೆ ಕಾದಿತ್ತು. ಏಕೆಂದರೆ 10.20 ಆದರೂ ಟಿಕೆಟ್ ಕೊಡಲಿಲ್ಲ.

    ಬೆಳಗಿನ ಆಟ 10.30ಕ್ಕೆ ಶುರುವಾಗುತ್ತಿದ್ದರೂ ಇನ್ನೂ ಟಿಕೆಟ್ ಕೊಡುತ್ತಿಲ್ಲವಲ್ಲಾ ಎಂದು ಚಿತ್ರಪ್ರೇಮಿಗಳು ಚಡಪಡಿಸುತ್ತಿದ್ದರು. ಏನಾಗುತ್ತಿದೆ ಎಂದು ವಿಚಾರಿಸಿದರೆ "ಏನೋ ಒಂಚೂರು ಪ್ರಾಬ್ಲಂ ಆಗಿದೆ, ಅರ್ಧಗಂಟೆಯಲ್ಲಿ ಸರಿಹೋಗುತ್ತೆ" ಎಂಬ ಉತ್ತರ ಬಂತು. [ಸಾಫ್ಟ್ ವೇರು ಹಾರ್ಡ್ ವೇರು ನಿದ್ದೆಗೆಡಿಸಿರುವ ಸರಳಾ!]

    ಕಡೆಗೆ 11.30 ಆದರೂ ಟಿಕೆಟ್ ಗಳನ್ನು ವಿತರಿಸಲಿಲ್ಲ. ಅಷ್ಟೊತ್ತಿಗೆ ಕನ್ನಡ ಚಿತ್ರರಸಿಕರ ಆಕ್ರೋಶ ಕಟ್ಟೆಯೊಡೆಯಿತು. ಇನ್ನೇನು ಅವರು ರೊಚ್ಚಿಗೇಳುತ್ತಾರೆ ಎಂಬ ಹೊತ್ತಿಗೆ ಥಿಯೇಟರ್ ಆಡಳಿತ ಮಂಡಳಿ ಮಾರ್ನಿಂಗ್ ಶೋ ಕ್ಯಾನ್ಸಲ್ ಎಂದು ಪ್ರಕಟಿಸಿತು. ಇಷ್ಟಕ್ಕೂ ಅಲ್ಲೇನಾಯಿತು?

    ಕರೋಡ್ ಪತಿಗೆ ತಾಂತ್ರಿಕ ಸಮಸ್ಯೆ ಶಾಕ್

    ಕರೋಡ್ ಪತಿಗೆ ತಾಂತ್ರಿಕ ಸಮಸ್ಯೆ ಶಾಕ್

    ಸಾಮಾನ್ಯವಾಗಿ ಮೂವಿಲ್ಯಾಂಡ್ ಥಿಯೇಟರ್ ನಲ್ಲಿ ಹೆಚ್ಚಾಗಿ ತೆರೆಕಾಣುವುದು ತೆಲುಗಿನ ಭಾರಿ ಬಜೆಟ್ ಚಿತ್ರಗಳು. 'ಕರೋಡ್ ಪತಿ'ಯಂತಹ ಮೀಡಿಯಂ ಬಜೆಟ್ ಚಿತ್ರಗಳು ಅಪರೂಪಕ್ಕೆ ತೆರೆಕಾಣುತ್ತವೆ. ಈ ರೀತಿಯ ಘಟನೆಗಳೂ ಅಪರೂಪಕ್ಕೆ ನಡೆಯುತ್ತವೆ.

    ತಾಂತ್ರಿಕ ಸಮಸ್ಯೆ ಎಂದ ಆಡಳಿತ ವರ್ಗ

    ತಾಂತ್ರಿಕ ಸಮಸ್ಯೆ ಎಂದ ಆಡಳಿತ ವರ್ಗ

    ಇಷ್ಟಕ್ಕೂ ಮಾರ್ನಿಂಗ್ ಶೋ ಕ್ಯಾನ್ಸಲ್ ಆಗಲು ಸೂಕ್ತ ಕಾರಣ ಏನು ಎಂಬುದು ಗೊತ್ತಾಗಲಿಲ್ಲ. ಆದರೂ ಥಿಯೇಟರ್ ಆಡಳಿತ ವರ್ಗ ತಾಂತ್ರಿಕ ದೋಷದಿಂದ ಶೋ ಕ್ಯಾನ್ಸಲ್ ಮಾಡಲಾಗಿದೆ. ಯಾವುದೇ ಥಿಯೇಟರ್ ನಲ್ಲೂ ಮಾರ್ನಿಂಗ್ ಶೋ ಇಲ್ಲ ಎಂಬ ವಿವರಣೆ ನೀಡಿತು.

    ಸಹನೆ ಕಳೆದುಕೊಂಡ ಪ್ರೇಕ್ಷಕರು

    ಸಹನೆ ಕಳೆದುಕೊಂಡ ಪ್ರೇಕ್ಷಕರು

    ಆದರೆ ಟಿಕೆಟ್ ವಿತರಿಸದೆ ಇದ್ದ ಕಾರಣ ಪ್ರೇಕ್ಷಕರು ಕೊಂಚ ಸಮಾಧಾನದಿಂದಲೇ ಇದ್ದರು. ತೆಲುಗು ಚಿತ್ರಗಳನ್ನು ಬಿಡುಗಡೆ ಮಾಡಬೇಕಾದರೆ ಆಗದ ತಾಂತ್ರಿಕ ಸಮಸ್ಯೆ ಕನ್ನಡ ಚಿತ್ರಕ್ಕೆ ಯಾಕಾಯಿತು. ಕನ್ನಡ ಚಿತ್ರಗಳು ಯಾಕೆ ಓಡಲ್ಲ ಎಂದರೆ ಈ ತರಹ ಕೆಲಸ ಮಾಡ್ತೀರಾ ಅದಕ್ಕೆ ಎಂದು ಪ್ರೇಕ್ಷಕರು ತಮ್ಮ ಸಿಟ್ಟನ್ನು ಮಾಧ್ಯಮಗಳ ಮುಂದೆ ತೋಡಿಕೊಂಡರು.

    ಸ್ಥಳಕ್ಕೆ ಆಗಮಿಸಿದ ಪೊಲೀಸರು ಕೊಟ್ಟ ವಿವರಣೆ

    ಸ್ಥಳಕ್ಕೆ ಆಗಮಿಸಿದ ಪೊಲೀಸರು ಕೊಟ್ಟ ವಿವರಣೆ

    ತೆಲುಗು ಚಿತ್ರ ಆದರೆ ಬೆಳಗ್ಗೆ 6 ಗಂಟೆಗೆ ಶೋ ಶುರು ಮಾಡ್ತೀರಾ. ಕನ್ನಡ ಚಿತ್ರಗಳಿಗೇಕೆ ಈ ರೀತಿ ಅನ್ಯಾಯ ಎಂದು ಕೆಲವರು ಪ್ರಶ್ನಿಸಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ತಾಂತ್ರಿಕ ಸಮಸ್ಯೆಯಿಂದ ಶೋ ಕ್ಯಾನ್ಸಲ್ ಮಾಡಲಾಗಿದೆ. ಮಧ್ಯಾಹ್ನದ ಆಟದಿಂದ ಶೋ ಆರಂಭವಾಗಲಿದೆ. ದಯವಿಟ್ಟು ಎಲ್ಲರೂ ಇಲ್ಲಿಂದ ಜಾಗ ಖಾಲಿ ಮಾಡಿ ಎಂದರು.

    ನಿಜಕ್ಕೂ ತಾಂತ್ರಿಕ ದೋಷವೇ ಅಥವಾ ಗಿಮ್ಮಿಕ್ಕಾ

    ನಿಜಕ್ಕೂ ತಾಂತ್ರಿಕ ದೋಷವೇ ಅಥವಾ ಗಿಮ್ಮಿಕ್ಕಾ

    ಬಂದ ದಾರಿಗೆ ಸುಂಕವಿಲ್ಲ ಎಂದುಕೊಂಡು ಪ್ರೇಕ್ಷಕರು ಅಲ್ಲಿಂದ ಜಾಗ ಖಾಲಿ ಮಾಡಿದರು. ಕೊನೆಗೂ ಕಾಡಿದ ಪ್ರಶ್ನೆ ಎಂದರೆ ಇದು ತಾಂತ್ರಿಕ ಸಮಸ್ಯೆಯ ಕಾರಣ ಹೀಗಾಯಿತಾ ಅಥವಾ ಇದೂ ಒಂದು ಗಿಮ್ಮಿಕ್ಕಾ ಎಂಬ ಡೌಟು ಪ್ರೇಕ್ಷಕರನ್ನು 'ಹೀಗೂ ಉಂಟೇ' ತರಹ ಕಾಡುತ್ತಿತ್ತು.

    English summary
    Friday morning show of Komal Kumar's much expected Kannada movie 'Karodpathi' cancelled in Movieland theatre, Bangalore. It was due to some technical issues. But, the noon show is on. Happy watching!
    Friday, March 14, 2014, 14:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X