ಗಟ್ಟಿ ಗುಂಡಿಗೆ ಇದ್ರೆ ಈ ವಾರ 'ಕರ್ವ' ಚಿತ್ರ ನೋಡಿರಿ.!
ಪ್ರೀತಿಯಿಂದ ಪ್ರೀತಿಸುವ ಪ್ರೇಮಿಗಳಿಗಾಗಿ ಈ ವಾರ 'ಪ್ರೇಮಲೋಕ' ಸೃಷ್ಟಿಸಿದ ದೇವರು 'ಅಪೂರ್ವ' ಚಿತ್ರವನ್ನು ಹೊತ್ತು ತರ್ತಿದ್ರೆ, ಕುತೂಹಲ-ರೋಚಕ ಕಥೆಗಳನ್ನು ಇಷ್ಟಪಡುವವರಿಗಂತಲೇ 'ಕರ್ವ' ಸಿನಿಮಾ ಈ ಶುಕ್ರವಾರ ತೆರೆಗೆ ಬರುತ್ತಿದೆ.
ಹೌದು, ಸ್ಯಾಂಡಲ್ ವುಡ್ ನಲ್ಲಿ ಹೊಸ ಸೆನ್ಸೇಷನ್ ಹುಟ್ಟುಹಾಕಿದ '6-5=2' ಚಿತ್ರದ ನಿರ್ಮಾಪಕ ಕೃಷ್ಣ ಚೈತನ್ಯ ಬಂಡವಾಳ ಹಾಕಿರುವ 'ಕರ್ವ' ಚಿತ್ರ ಈ ವಾರ ಬೆಂಗಳೂರಿನ ಅಭಿನಯ್ ಚಿತ್ರಮಂದಿರ ಸೇರಿದಂತೆ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. [ಹೀಗೂ ಉಂಟು.! 'ಕರ್ವ' ಟ್ರೈಲರ್ ನೋಡಿ, ಬೆಚ್ಚಿಬೀಳುವುದು ಖಾತ್ರಿ.!]

ಈಗಾಗಲೇ ಬಿಡುಗಡೆ ಆಗಿರುವ 'ಕರ್ವ' ಚಿತ್ರದ ಟ್ರೈಲರ್ ಸಿನಿ ಪ್ರಿಯರನ್ನು ಬೆಚ್ಚಿ ಬೀಳಿಸಿದೆ. ಟಿವಿ9 ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಹೀಗೂ ಉಂಟೇ.!' ಕಾರ್ಯಕ್ರಮಕ್ಕೂ 'ಕರ್ವ' ಚಿತ್ರಕ್ಕೂ ಲಿಂಕ್ ಇರುವುದರಿಂದ, ಸಿನಿಮಾದ ಬಗ್ಗೆ ನಿರೀಕ್ಷೆ ಕೂಡ ಹೆಚ್ಚಾಗಿದೆ. [ಬ್ರೇಕಿಂಗ್ ನ್ಯೂಸ್; 'ಕರ್ವ' ಚಿತ್ರದಲ್ಲಿ 'ಹೀಗೂ ಉಂಟೇ.!']
ಡೈನಾಮಿಕ್ ಸ್ಟಾರ್ ದೇವರಾಜ್, ಆರ್.ಜೆ ರೋಹಿತ್, ತಿಲಕ್, ಅನು ಪೂವಮ್ಮ, ವಿಜಯ್ ಚೆಂಡೂರ್, ಅನಿಶಾ 'ಕರ್ವ' ಚಿತ್ರದ ಪ್ರಮುಖ ಪಾತ್ರಧಾರಿಗಳು.
ನವ ನಿರ್ದೇಶಕ ನವನೀತ್ ಆಕ್ಷನ್ ಕಟ್ ಹೇಳುತ್ತಿರುವ 'ಕರ್ವ' ಚಿತ್ರ ನಾಳೆ (ಮೇ 27) ನಿಮ್ಮ ಮುಂದೆ ಬರಲಿದೆ. ಥಿಯೇಟರ್ ನಲ್ಲಿ ನೀವು 'ಕರ್ವ' ನೋಡುವ ಮುನ್ನ ಒಮ್ಮೆ ಟ್ರೈಲರ್ ನೋಡಿಬಿಡಿ....


Click it and Unblock the Notifications











