For Quick Alerts
  ALLOW NOTIFICATIONS  
  For Daily Alerts

  ಜೂನ್ 15ಕ್ಕೆ 'ಕಟ್ಟುಕಥೆ', ಮಾತಿನ ಮನೆಯಲ್ಲಿ 'ಗರ'

  By Bharath Kumar
  |

  ಮಹದೇವ ಮೈಸೂರು ಅವರು ನಿರ್ಮಿಸಿರುವ 'ಕಟ್ಟುಕಥೆ' ಚಿತ್ರ ಜೂನ್ 15ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರದ ಆಡಿಯೋ ಬಿಡುಗಡೆಯಾಗಿದ್ದು, ಕೇಳುಗರ ಮನಗೆದ್ದಿದೆ.

  ರಾಜ್ ಪ್ರವೀಣ್ ನಿರ್ದೇಶನದ ಈ ಚಿತ್ರಕ್ಕೆ ವಿಕ್ರಂ ಸುಬ್ರಮಣ್ಯ ಸಂಗೀತ ನೀಡಿದ್ದಾರೆ. ಮನು ಬಿ.ಕೆ ಛಾಯಾಗ್ರಹಣ ಹಾಗೂ ಗುರುಮೂರ್ತಿ ಹೆಗ್ಗಡೆ ಅವರ ಸಂಕಲನವಿರುವ ಈ ಚಿತ್ರಕ್ಕೆ 'ಟಗರು' ಚಿತ್ರದ ಖ್ಯಾತಿಯ ಮಾಸ್ತಿ ಸಂಭಾಷಣೆ ಬರೆದಿದ್ದಾರೆ.

  ಸೂರ್ಯ, ಸ್ವಾತಿ ಕೊಂಡೆ, ರಾಜೇಶ್ ನಟರಂಗ, ಮಿತ್ರ, ಕೆಂಪೇಗೌಡ, ಬೃನಾಲಿ ಶೆಟ್ಟಿ, ರಿಹಾಂಸಿ ಗೌಡ, ಸೂರ್ಯ ಕುಂದಾಪುರ, ಮೋಹನ್ ಜುನೇಜ, ನಟನ ಪ್ರಶಾಂತ್, ರಜನಿಕಾಂತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

  ಮಾತಿನ ಮನೆಯಲ್ಲಿ 'ಗರ'

  'ಗರ' ಚಿತ್ರಕ್ಕೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ನಡೆಯುತ್ತಿದೆ. ಚಿತ್ರಕ್ಕೆ ಬೆಂಗಳೂರು, ಕಾಶ್ಮೀರ, ಮೈಸೂರು, ಕೊಪ್ಪ, ಮೇಲುಕೋಟೆ ಮುಂತಾದ ಕಡೆ 55 ದಿನಗಳ ಚಿತ್ರೀಕರಣ ನಡೆದಿದೆ.

  ಕೆ.ಆರ್.ಮುರಳಿಕೃಷ್ಣ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಸಾಗರ್ ಗುರುರಾಜ್ ಸಂಗೀತ ನೀಡಿದ್ದಾರೆ. ಹೆಚ್.ಸಿ.ವೇಣು ಛಾಯಾಗ್ರಹಣ, ಉಮಾಶಂಕರ್ ಬಾಬು ಸಂಕಲನ, ದಿನೇಶ್ ಕಲಾ ನಿರ್ದೇಶನ ಹಾಗೂ ಬಾಲಿವುಡ್ ಖ್ಯಾತಿಯ ಸರೋಜ್ ಖಾನ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

  ಬಿಗ್ ಬಾಸ್, ಟಿವಿ ನಿರೂಪಕ ರೆಹಮಾನ್, ಆವಂತಿಕ, ಆರ್ಯನ್, ಪ್ರಶಾಂತ್ ಸಿದ್ದಿ, ರಾಮಕೃಷ್ಣ, ರೂಪಾದೇವಿ, ಮನದೀಪ್ ರಾಯ್, ತಬಲ ನಾಣಿ, ರೋಹಿತ್, ಸುನೇತ್ರ ಪಂಡಿತ್, ಸುಚಿತ್ರ, ನಿರಂಜನ್, ರಾಜೇಶ್ ರಾವ್, ಸೋನು, ದಯಾನಂದ್, ಗುರುರಾಜ್ ಕಲಾಲ್ ಬಂಡಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ವಿಶೇಷ ಜೋಡಿಯಾಗಿ ಖ್ಯಾತ ನಟರಾದ ಜಾನೀಲೀವರ್ ಹಾಗೂ ಸಾಧುಕೋಕಿಲ ಅಭಿನಯಿಸಿದ್ದಾರೆ.

  English summary
  Kannada movie kattu kathe will releasing on june 5th. the movie directed by raj praveen and also starrer surya, swathi konde, rajesh nataranga and others.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X