'ಕೆ.ಜಿ.ಎಫ್' ಹವಾ: ಎಲ್ಲೆಡೆ ರಾರಾಜಿಸುತ್ತಿದೆ ರಾಕಿ ಭಾಯ್ ಕಟೌಟ್ಸ್.!
ಪ್ರಶಾಂತ್ ನೀಲ್ ನಿರ್ದೇಶನದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಕೆ.ಜಿ.ಎಫ್' ಬಿಡುಗಡೆಗೆ ಇನ್ನೊಂದೇ ದಿನ ಬಾಕಿ ಉಳಿದಿದೆ. 'ಕೆ.ಜಿ.ಎಫ್' ಚಿತ್ರವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳಂತೂ ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ಹಲವು ಥಿಯೇಟರ್ ಗಳಲ್ಲಿ 'ಕೆ.ಜಿ.ಎಫ್' ಫಸ್ಟ್ ಡೇ ಟಿಕೆಟ್ಸ್ ಸೋಲ್ಡ್ ಔಟ್ ಆಗಿದೆ.
ಎಲ್ಲೆಲ್ಲೂ 'ಕೆ.ಜಿ.ಎಫ್' ಫೀವರ್ ಜೋರಾಗಿರುವುದರಿಂದ ಥಿಯೇಟರ್ ಗಳ ಮುಂದೆ ರಾಕಿ ಭಾಯ್ ಕಟೌಟ್ಸ್ ರಾರಾಜಿಸುತ್ತಿವೆ. ಬೆಂಗಳೂರಿನ ರಾಜ್ ಕಮಲ್ ಆರ್ಟ್ ಗ್ಯಾಲರಿಯಿಂದ 60 ಕ್ಕೂ ಹೆಚ್ಚು 'ರಾಕಿ ಭಾಯ್' ಕಟೌಟ್ ಗಳನ್ನ ರೆಡಿ ಮಾಡಲಾಗಿದೆ. ಅದೇ ಕಟೌಟ್ ಗಳು ಇದೀಗ ಥಿಯೇಟರ್ ಗಳ ಮುಂದೆ ನಿಂತು ಜನರನ್ನು ಕೈಬೀಸಿ ಕರೆಯುತ್ತಿದೆ.

ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಂತೂ 72 ಅಡಿ ಎತ್ತರದ ಯಶ್ ಕಟೌಟ್ ನಿಲ್ಲಿಸಲಾಗಿದೆ. ಕಲಾವಿದ ಕೆ.ಚಿನ್ನಪ್ಪ ಕುಂಚದಲ್ಲಿ ಅರಳಿರುವ ಕಟೌಟ್ ಅದಾಗಿದ್ದು ಇಡೀ ಕೆ.ಜಿ.ರೋಡ್ ನಲ್ಲಿ ಸದ್ಯ ಆಕರ್ಷಣೆಯ ಕೇಂದ್ರಬಿಂದುವಾಗಿದೆ.
ರಾಕಿ ಭಾಯ್ ನ ವೆಲ್ ಕಮ್ ಮಾಡೋಕೆ ಸಿನಿ ಪ್ರಿಯರು ತುದಿಗಾಲಲ್ಲಿ ನಿಂತಿದ್ದಾರೆ. ಡಿಸೆಂಬರ್ 21 ರಂದು ದೇಶದಾದ್ಯಂತ ಬಿಡುಗಡೆ ಆಗಲಿರುವ 'ಕೆ.ಜಿ.ಎಫ್' ಚಿತ್ರವನ್ನ ನೋಡಲು ನೀವು ರೆಡಿನಾ.?


Click it and Unblock the Notifications











