'ಕೆಜಿಎಫ್' ಸೆಟ್ ವಿಳಾಸ ಬೇಕಾ? ಗೂಗಲ್ ಮ್ಯಾಪ್ ಕರೆದುಕೊಂಡು ಹೋಗುತ್ತೆ!
ಕನ್ನಡದ ಬಹುನಿರೀಕ್ಷೆಯ ಚಿತ್ರ 'ಕೆಜಿಎಫ್ ಚಾಪ್ಟರ್ 2' ಇದೇ ವರ್ಷ ಏಪ್ರಿಲ್ 14 ರಂದು ತೆರೆಗೆ ಬರಲಿದೆ. ಈ ಸಿನಿಮಾ ನೋಡಲು ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ. ಅದಕ್ಕೆ ತಕ್ಕಹಾಗೆ ಸಿನಿಮಾ ಪ್ರತೀ ಹಂತದಲ್ಲೂ ಕೂಡ ನಿರೀಕ್ಷೆ ಹುಟ್ಟುಹಾಕಿದೆ. ಅಷ್ಟೇ ಅಲ್ಲಾ ಕೆಜಿಎಫ್ 2 ರಿಲೀಸ್‌ಗೂ ಮುನ್ನವೇ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ.
ಕೆಜಿಎಫ್ 2 ಚಿತ್ರದ ಮೊದಲ ಟೀಸರ್ ದೊಡ್ಡ ಮಟ್ಟದ ದಾಖಲೆ ಮಾಡಿತು. ಮೊದಲೆ ಟೀಸರ್ ಲೀಕ್ ಆದರು ಕೂಡ, ರಿಲೀಸ್ ಆದ ಟೀಸರ್ ಕಡಿಮೆ ಸಮಯದಲ್ಲೇ ಹೆಚ್ಚಿನ ವೀವ್ಸ್ ಪಡೆದು, ವಿಶ್ವಮಟ್ಟದಲ್ಲಿ ದಾಖಲೆ ಮಾಡಿತು. ಇನ್ನು 'ಕೆಜಿಎಫ್' ಭಾಗ ಒಂದರ ಕ್ಲೈಮ್ಯಾಕ್ಸ್ ಈ ಚಿತ್ರಕ್ಕಾಗಿ ಕಾಯುವಂತೆ ಮಾಡಿದೆ.
'ಕೆಜಿಎಫ್' ದಾಖಲೆಗೆ ಈಗ ಮತ್ತೊಂದು ವಿಚಾರ ಸೇರಿಕೊಂಡಿದೆ. ಈ ಮೂಲಕ ಅಚ್ಚರಿ ಮೂಡಿಸಿದೆ. ಯಾವುದೇ ಸಿನಿಮಾ ಆದರು ತಾತ್ಕಾಲಿಕವಾಗಿ ಸೆಟ್‌ಗಳನ್ನು ನಿರ್ಮಾಣ ಮಾಡಿದ್ದರೆ, ಅದನ್ನು ನಿಗದಿತ ಸಮಯದ ಬಳಿಕ ತೆರವು ಮಾಡಲಾಗುತ್ತದೆ. ಆದರೆ ಕೆಜಿಎಫ್ ಸೆಟ್ ತೆರವಾದರೂ, ಆ ಜಾಗ ಮಾತ್ರ ಕೆಜಿಎಫ್ ಖ್ಯಾತಿಯಿಂದಲೇ ಪ್ರಸಿದ್ಧಿ ಹೊಂದಿದೆ.

ಗೂಗಲ್ ಮ್ಯಾಪ್‌ನಲ್ಲಿ 'KGF' ಸೆಟ್ ಲೊಕೇಶನ್!
ಕೆಜಿಎಫ್ ಸಿನಿಮಾ ಈಗ ವಿಶೇಷವಾದ ಕಾರಣಕ್ಕೆ ಸುದ್ದಿ ಆಗಿದೆ. ಗೂಗಲ್ ಮ್ಯಾಪ್‌ನಲ್ಲಿ 'ಕೆಜಿಎಫ್' ಸೆಟ್‌ನ ವಿಳಾಸ ಸೃಷ್ಟಿಯಾಗಿದೆ. 'ಕೆಜಿಎಫ್' ಸಿನಿಮಾ ಶೂಟಿಂಗ್ ಮಾಡಿದ ಸ್ಥಳ ಗೂಗಲ್ನಲ್ಲಿ 'ಕೆಜಿಎಫ್ ಫಿಲ್ಮ್ ಸೆಟ್' ಎಂದು ಮರುನಾಮಕರಣಗೊಂಡಿದೆ. ಇದನ್ನು ಕಂಡು ಅಭಿಮಾನಿಗಳು ಖುಷಿಯಾಗಿದ್ದಾರೆ. ಇದು ಕನ್ನಡ ಸಿನಿಮಾಗಳಿಗೆ ಇರುವ ತಾಕತ್ತು ಎಂದು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ. ಇದು ಈ ಹಿಂದೆ ಯಾರು ಮಾಡಿರದ ಹೊಸ ದಾಖಲೆಯಾಗಿದೆ.

'ಕೆಜಿಎಫ್' ಸೆಟ್ ಎಂದು ಟೈಪ್ ಮಾಡಿದ್ರೆ ಸಾಕು, ಲೊಕೇಶನ್ ಬರುತ್ತೆ!
'ಕೆಜಿಎಫ್' ಸಿನಿಮಾವನ್ನು ಕರ್ನಾಟಕದ 'ಕೆಜಿಎಫ್' ಸೇರಿದಂತೆ, ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಅಲ್ಲೇ 'ಕೆಜಿಎಫ್' ಗಣಿಯಿಂದ ಸ್ವಲ್ಪ ದೂರದಲ್ಲಿ ಚಿತ್ರದ ಸೆಟ್ಟನ್ನು ನಿರ್ಮಾಣ ಮಾಡಲಾಗಿತ್ತು. ಆ ಸೆಟ್‌ನಲ್ಲಿ 'ಕೆಜಿಎಫ್' ಭಾಗ ಒಂದು ಮತ್ತು ಎರಡರ ಚಿತ್ರೀಕರಣ ಮಾಡಲಾಗಿದೆ. ಹಾಗಾಗಿ ಹಲವು ವರ್ಷಗಳ ಕಾಲ ಚಿತ್ರತಂಡ ಅಲ್ಲಿ ಸೆಟ್ ಉಳಿಸಿಕೊಂಡಿತು. ಈಗ ಆ ಜಾಗ 'ಕೆಜಿಎಫ್ ಫಿಲ್ಮ್ ಸೆಟ್ಟ' ಎಂದು ಗೂಗಲ್ ಮ್ಯಾಪ್‌ನಲ್ಲಿ ರಿಜಿಸ್ಟರ್ ಆಗಿದೆ. ನೀವೂ ಒಮ್ಮೆ ಗೂಗಲ್ ಮ್ಯಾಪ್ ತೆಗೆದು 'ಕೆಜಿಎಫ್' ಸೆಟ್ ಅಂತ ಟೈಪ್ ಮಾಡಿದ್ರೆ ಸಾಕು, ಚಿತ್ರದ ಸೆಟ್ ಇದ್ದ ಲೊಕೇಶನ್ ಓಪನ್ ಆಗುತ್ತೆ. ಅದನ್ನು ಫಾಲೋ ಮಾಡಿದ್ರೆ. 'ಕೆಜಿಎಫ್' ಸೆಟ್ ಇದ್ದ ಜಾಗಕ್ಕೆ ನೀವೂ ಹೋಗಬಹುದು.

ಮಾರ್ಚ್ 27ಕ್ಕೆ 'kGF 2' ಟ್ರೇಲರ್ ರಿಲೀಸ್!
ರಿಲೀಸ್‌ಗೂ ಮುನ್ನ 'ಕೆಜಿಎಫ್ 2' ಚಿತ್ರ ಟ್ರೇಲರ್ ಮೂಲಕ ಕಮಾಲ್ ಮಾಡಲಿದೆ. ಈ ಹಿಂದೆ ಬಂದ 'ಕೆಜಿಎಫ್' ಟೀಸರ್ ಸೂಪರ್ ಹಿಟ್ ಆಗತ್ತು. ಈಗ ಟ್ರೇಲರ್‌ಗಾಗಿ ಕಾಯುತ್ತಾ ಇರುವವರು ಮಾರ್ಚ್ 27ರಂದು ಟ್ರೇಲರ್ ಕಣ್ತುಂಬಿಕೊಳ್ಳಬಹುದಾಗಿದೆ. ಮಾರ್ಚ್ 27 ಸಂಜೆ 6:40ಕ್ಕೆ 'ಕೆಜಿಎಫ್' 2 ಟ್ರೈಲರ್ ರಿಲೀಸ್ ಆಗಲಿದೆ. ಇನ್ನು ಟ್ರೇಲರ್ ರಿಲೀಸ್ ಬಳಿಕ ಚಿತ್ರದ ಮೇಲಿನ ನಿರೀಕ್ಷೆಗಳು ಮಿಸ್ಸಿಲ್ಲದೇ ದುಪ್ಪಟ್ಟು ಆಗುವುದಂತೂ ಪಕ್ಕಾ.

ಏಪ್ರಿಲ್ 14ಕ್ಕೇ ರಾಖಿ ಭಾಯ್ ಖಡಕ್ ಎಂಟ್ರಿ!
ಎಲ್ಲರೂ ಕಾತರದಿಂದ ಕಾಯುತ್ತಿರುವ 'ಕೆಜಿಎಫ್ 2' ನೋಡಲು ಹೆಚ್ಚು ದಿನ ಕಾಯಬೇಕಾಗಿಲ್ಲ. ಏಪ್ರಿಲ್ 14ಕ್ಕೆ ತೆರೆಗೆ ಎಂಟ್ರಿ ಕೊಡಲಿದ್ದಾನೆ ರಾಖಿ ಭಾಯ್. ಈ ವರ್ಷ ಕನ್ನಡದಲ್ಲಿ ಬಹುದೊಡ್ಡ ದಾಖಲೆ ಮಾಡಲಿದೆ 'ಕೆಜಿಎಫ್ 2'. ಆದರೆ ಚಿತ್ರದ ಮೇಲೆ ಹೆಚ್ಚಿನ ನಿರೀಕ್ಷೆ ಇರುವುದರಿಂದ ಚಿತ್ರತಂಡದ ಮೇಲೆ ಅಷ್ಟೇ ಜವಾಬ್ದಾರಿ ಇದೆ. ರಾಕಿ ಸಾಮ್ಯಾಜ್ಯ ಈ ಚಿತ್ರದಲ್ಲಿ ಹೇಗೆ ಇರಲಿದೆ ಎನ್ನುವುದು ಏಪ್ರಿಲ್ 14ಕ್ಕೆ ಗೊತ್ತಾಗಲಿದೆ.


Click it and Unblock the Notifications











