For Quick Alerts
  ALLOW NOTIFICATIONS  
  For Daily Alerts

  ಅಬ್ಬರದಿಂದ ತೆರೆಗೆ ಬಂತು ಕೆ.ಜಿ.ಎಫ್: ಯಶ್ ಚಿತ್ರಕ್ಕೆ ಭರ್ಜರಿ ಓಪನಿಂಗ್.!

  |
  KGF Kannada Movie : First Day First Show | FILMIBEAT KANNADA

  ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಕೆ.ಜಿ.ಎಫ್' ತೆರೆಗೆ ಬಂದಿದೆ. ಅಡಿ-ತಡೆ, ಅಡ್ಡಿ-ಆತಂಕ ಇದ್ದರೂ.. 'ಕೆ.ಜಿ.ಎಫ್' ಸರಾಗವಾಗಿ ಬಿಡುಗಡೆ ಆಗಿದೆ. ವಿಶ್ವದಾದ್ಯಂತ 2000 ಸ್ಕ್ರೀನ್ ಗಳಲ್ಲಿ 'ಕೆ.ಜಿ.ಎಫ್' ತೆರೆಗೆ ಅಪ್ಪಳಿಸಿದೆ.

  'ಕೆ.ಜಿ.ಎಫ್' ಚಿತ್ರದ ರಿಲೀಸ್ ಗೆ ನಿನ್ನೆ ಸಂಜೆ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಮಧ್ಯಂತರ ತಡೆ ನೀಡಿತ್ತು. ಆದ್ರೆ, ನಿರ್ಮಾಪಕರ ಕೈಗೆ ಕೋರ್ಟ್ ನಿಂದ ತಡೆಯಾಜ್ಞೆಯ ಆದೇಶ ತಲುಪಿಲ್ಲ. ಹೀಗಾಗಿ, 'ಕೆ.ಜಿ.ಎಫ್' ಪ್ರದರ್ಶನ ಕಂಡಿದೆ.

  ಮಧ್ಯರಾತ್ರಿಯಿಂದಲೇ 'ಕೆ.ಜಿ.ಎಫ್' ಪ್ರದರ್ಶನ ಆರಂಭಗೊಂಡಿದ್ದು, ಚಿತ್ರವನ್ನು ಕಣ್ತುಂಬಿಕೊಂಡ 'ಅಣ್ತಮ್ಮ' ಯಶ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ರಾಜ್ಯದ ಮೂಲೆ ಮೂಲೆಯಲ್ಲೂ 'ಕೆ.ಜಿ.ಎಫ್' ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಮುಂದೆ ಓದಿರಿ...

  ಮೈಸೂರಿನಲ್ಲಿ ಮಧ್ಯರಾತ್ರಿ ಆರಂಭಗೊಂಡ ಶೋ

  ಮೈಸೂರಿನಲ್ಲಿ ಮಧ್ಯರಾತ್ರಿ ಆರಂಭಗೊಂಡ ಶೋ

  ಮೈಸೂರಿನ ಡಿ.ಆರ್.ಸಿ ಚಿತ್ರಮಂದಿರದಲ್ಲಿ ಮಧ್ಯರಾತ್ರಿ ಒಂದು ಗಂಟೆಗೆ 'ಕೆ.ಜಿ.ಎಫ್' ಪ್ರದರ್ಶನ ಆರಂಭಗೊಂಡಿತ್ತು. ತೆರೆಮೇಲೆ 'ರಾಕಿ ಭಾಯ್'ನ ಆರ್ಭಟ ನೋಡಿದ ಅಭಿಮಾನಿಗಳು ಹರ್ಷಗೊಂಡಿದ್ದಾರೆ.

  ಫಸ್ಟ್ ಶೋ ರೆಸ್ಪಾನ್ಸ್ ಸೂಪರ್ ಗುರು.!

  ಫಸ್ಟ್ ಶೋ ರೆಸ್ಪಾನ್ಸ್ ಸೂಪರ್ ಗುರು.!

  ಮೈಸೂರಿನಲ್ಲಿ ಮಧ್ಯರಾತ್ರಿ ಒಂದು ಗಂಟೆಗೆ 'ಕೆ.ಜಿ.ಎಫ್' ಮೊದಲ ಪ್ರದರ್ಶನ ಶುರುವಾಯ್ತು. ಸುಮಾರು ನಾಲ್ಕು ಗಂಟೆ ಹೊತ್ತಿಗೆ 'ಕೆ.ಜಿ.ಎಫ್' ಫಸ್ಟ್ ಶೋ ರೆಸ್ಪಾನ್ಸ್ ಹೊರಬಿತ್ತು. ಚಿತ್ರ ನೋಡಿ ಹೊರಬಂದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ''ಕೆ.ಜಿ.ಎಫ್' ಸಿನಿಮಾ ಸೂಪರ್ ಆಗಿದೆ, ಛಾಯಾಗ್ರಹಣ ಚೆನ್ನಾಗಿದೆ, ಸಖತ್ತಾಗಿದೆ'' ಅಂತೆಲ್ಲಾ ಅಭಿಮಾನಿಗಳು ಪ್ರತಿಕ್ರಿಯೆ ಕೊಟ್ಟಿದ್ದಾರೆ.

  ಬೆಂಗಳೂರಿನಲ್ಲಿ ನಾಲ್ಕು ಗಂಟೆಗೆ ಪ್ರದರ್ಶನ

  ಬೆಂಗಳೂರಿನ ಲಾಲ್ ಭಾಗ್ ಬಳಿಯಿರುವ ಊರ್ವಶಿ, ವಿದ್ಯಾಪೀಠ ಸರ್ಕಲ್ ನಲ್ಲಿ ಇರುವ ಚಂದ್ರೋದಯ ಚಿತ್ರಮಂದಿರ, ಮಾರತ್ ಹಳ್ಳಿಯ ತುಳಸಿ ಥಿಯೇಟರ್ ಮತ್ತು ವೈನಿಧಿ ಥಿಯೇಟರ್ ಗಳಲ್ಲಿ ಇಂದು ಬೆಳಗ್ಗೆ ನಾಲ್ಕು ಗಂಟೆಗೆ 'ಕೆ.ಜಿ.ಎಫ್' ಭರ್ಜರಿಯಾಗಿ ಓಪನಿಂಗ್ ಕಂಡಿದೆ.

  ಎಲ್ಲೆಲ್ಲೂ ಹೌಸ್ ಫುಲ್ ಪ್ರದರ್ಶನ

  ಬೆಳಗ್ಗೆ ಆರು ಗಂಟೆಯಿಂದ ಈಶ್ವರಿ, ಕಾಮಾಕ್ಯ, ನವರಂಗ್, ವೈಷ್ಣವಿ ಸೇರಿದಂತೆ ಹಲವು ಚಿತ್ರಮಂದಿರಗಳಲ್ಲಿ 'ಕೆ.ಜಿ.ಎಫ್' ಶೋ ಶುರುವಾಗಿದೆ. ಎಲ್ಲೆಲ್ಲೂ 'ಕೆ.ಜಿ.ಎಫ್' ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

  ಕೋಲಾರದಲ್ಲೂ 'ಕೆ.ಜಿ.ಎಫ್'

  ಕೋಲಾರದಲ್ಲೂ 'ಕೆ.ಜಿ.ಎಫ್'

  ಕೋಲಾರದಲ್ಲೂ 'ಕೆ.ಜಿ.ಎಫ್' ಫೀವರ್ ಜೋರಾಗಿದೆ. ಐದು ಗಂಟೆಯಿಂದಲೇ ಕೋಲಾರದಲ್ಲಿ 'ಕೆ.ಜಿ.ಎಫ್' ಪ್ರದರ್ಶನ ಆರಂಭಗೊಂಡಿದೆ. ಪಟಾಕಿ ಸಿಡಿಸಿ ರಾಕಿ ಭಾಯ್ ಗೆ ಸಲಾಂ ಎಂದಿದ್ದಾರೆ ಕೋಲಾರದ ಜನತೆ.

  English summary
  Rocking Star Yash starrer Kannada Movie KGF gets good opening all over Karnataka.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X