ಬೆಳ್ಳಂಬೆಳಗ್ಗೆ 'ಕೆ.ಜಿ.ಎಫ್' ವೀಕ್ಷಿಸಿದ ಅಭಿಮಾನಿಗಳಿಗೆ ಅಭಿಮಾನಿಗಳಿಂದ ಅನ್ನದಾನ.!

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆ.ಜಿ.ಎಫ್' ಚಿತ್ರ ದೇಶದಾದ್ಯಂತ ರಾಕ್ ಮಾಡಲು ಶುರು ಮಾಡಿದೆ. 'ಕೆ.ಜಿ.ಎಫ್' ಚಿತ್ರಕ್ಕೆ ಮಧ್ಯರಾತ್ರಿಯಿಂದಲೇ ಭರ್ಜರಿ ಓಪನಿಂಗ್ ಸಿಕ್ಕಿದ್ದು, ಎಲ್ಲೆಡೆ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

ಬೆಂಗಳೂರಿನ ಕೆ.ಜಿ.ರಸ್ತೆಯಲ್ಲಿ ಇರುವ ನರ್ತಕಿ ಚಿತ್ರಮಂದಿರದಲ್ಲಿ ಬೆಳಗ್ಗೆ ಆರು ಗಂಟೆಯಿಂದ 'ಕೆ.ಜಿ.ಎಫ್' ಪ್ರದರ್ಶನ ಆರಂಭವಾಯಿತು. ಅತ್ತ 'ಕೆ.ಜಿ.ಎಫ್' ಚಿತ್ರವನ್ನ ಕಣ್ತುಂಬಿಕೊಳ್ಳಲು ನರ್ತಕಿ ಚಿತ್ರಮಂದಿರಕ್ಕೆ ಅಭಿಮಾನಿಗಳು ಮುಗಿಬೀಳುತ್ತಿದ್ದರೆ, ಇತ್ತ ಅಭಿಮಾನಿಗಳಿಗಾಗಿ ನರ್ತಕಿ ಥಿಯೇಟರ್ ಮುಂದೆ ಅನ್ನದಾನ ನಡೆಯುತ್ತಿದೆ.

ಬೆಳ್ಳಂಬೆಳಗ್ಗೆ ತಿಂಡಿ ತಿನ್ನದೆ, 'ಕೆ.ಜಿ.ಎಫ್' ನೋಡಲು ಬಂದ ಸಿನಿ ಪ್ರಿಯರಿಗೆ ಗಾಂಧಿನಗರದ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಂಘ ಪಲಾವ್ ನೀಡುತ್ತಿದೆ.

Kannada Movie KGF grand opening: Annadana in Narthaki Theatre

ಒಂದ್ಕಡೆ, ತೆರೆಮೇಲೆ 'ಕೆ.ಜಿ.ಎಫ್' ರಸದೌತಣ ಉಂಡು ಸಂತಸರಾಗಿದ್ದ ಪ್ರೇಕ್ಷಕರು ರುಚಿ ರುಚಿಯಾದ, ಬಿಸಿ ಬಿಸಿಯಾದ ಪಲಾವ್ ಸೇವಿಸಿ ಖುಷಿ ಪಟ್ಟಿದ್ದಾರೆ.

''ಬ್ಯಾನರ್ ಹಾಕುವುದು, ಪಟಾಕಿ ಸಿಡಿಸುವುದಲ್ಲ ಸಂಭ್ರಮ. 'ಕೆ.ಜಿ.ಎಫ್' ನೋಡಿದವರಿಗೆ ಅನ್ನದಾನ ಮಾಡುವ ಮೂಲಕ ನಾವು 'ಕೆ.ಜಿ.ಎಫ್' ಹಬ್ಬವನ್ನ ಅದ್ಧೂರಿಯಾಗಿ ಸಡಗರದಿಂದ ಆಚರಿಸುತ್ತಿದ್ದೇವೆ'' ಅಂತಾರೆ ಯಶ್ ಅಭಿಮಾನಿಯೊಬ್ಬರು.

ಒಟ್ನಲ್ಲಿ, ಕರ್ನಾಟಕದ ಮೂಲೆ ಮೂಲೆಯಲ್ಲೂ 'ಕೆ.ಜಿ.ಎಫ್' ಹವಾ ಜೋರಾಗಿದೆ. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ. ಐದು ಭಾಷೆಗಳಲ್ಲಿ ತೆರೆಕಂಡಿರುವ 'ಕೆ.ಜಿ.ಎಫ್' ಇನ್ಮೇಲೆ ದಾಖಲೆಗಳನ್ನು ಪುಡಿ ಪುಡಿ ಮಾಡುವುದಷ್ಟೇ ಬಾಕಿ.

More from Filmibeat

English summary
Rocking Star Yash starrer Kannada Movie KGF gets grand opening all over Karnataka. Annadana from Yash fans in Narthaki Theatre.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X