ಏನು.. ಆನ್ ಲೈನ್ ನಲ್ಲಿ 'ಕೆ.ಜಿ.ಎಫ್' ಚಿತ್ರ ಲೀಕ್ ಆಗಿದ್ಯಂತೆ.! ಹೌದಾ.?
Recommended Video

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಈ ವರ್ಷದ ಬಹು ನಿರೀಕ್ಷಿತ ಸಿನಿಮಾ 'ಕೆ.ಜಿ.ಎಫ್' ಬಿಡುಗಡೆ ಆಗಲು ಕೇವಲ ನಾಲ್ಕು ದಿನಗಳಷ್ಟೇ ಬಾಕಿ ಉಳಿದಿವೆ. ಪ್ರತಿ ನಿತ್ಯ ಒಂದಲ್ಲಾ ಒಂದು ವಿಶೇಷತೆಯಿಂದ ದೇಶದಾದ್ಯಂತ ಸದ್ದು ಮಾಡುತ್ತಿರುವ 'ಕೆ.ಜಿ.ಎಫ್' ಚಿತ್ರಕ್ಕೆ ಪೈರಸಿ ಭೂತ ಕಾಟ ಕೊಡ್ತಿದ್ಯಾ.?
ಇಂತಹ ಒಂದು ಪ್ರಶ್ನೆ ಮೂಡಲು ಕಾರಣ ನಿನ್ನೆ ಇದ್ದಕ್ಕಿದ್ದ ಹಾಗೆ ಹರಿದಾಡಿದ ಕೆಲ ಫಾರ್ವರ್ಡ್ ಸಂದೇಶಗಳು.
''ಕೆ.ಜಿ.ಎಫ್' ಚಿತ್ರದ ಸೆನ್ಸಾರ್ ಕಾಪಿ ಇಲ್ಲಿದೆ. ಡೌನ್ ಲೋಡ್ ಗಾಗಿ ಇಲ್ಲಿ ಕ್ಲಿಕ್ ಮಾಡಿ'' ಎಂಬ ಸಂದೇಶದೊಂದಿಗೆ 'ಕೆ.ಜಿ.ಎಫ್' ಚಿತ್ರದ ಕೆಲ ಸ್ಕ್ರೀನ್ ಶಾಟ್ ಗಳು ಕೂಡ ಬಹುತೇಕರ ಫೋನ್ ಗಳಲ್ಲಿ ಹರಿದಾಡತೊಡಗಿದವು.
ಇದನ್ನ ನೋಡಿ ಬಿಡುಗಡೆಗೂ ಮೊದಲೇ 'ಕೆ.ಜಿ.ಎಫ್' ಚಿತ್ರ ಆನ್ ಲೈನ್ ನಲ್ಲಿ ಲೀಕ್ ಆಗಿದೆ ಅಂತಲೇ ಹಲವರು ಭಾವಿಸಿದರು. ಆದ್ರೆ, ಇದು 'ಫೇಕ್' ಎಂಬುದನ್ನ ಚಿತ್ರತಂಡ ಸ್ಪಷ್ಟ ಪಡಿಸಿದೆ. ಮುಂದೆ ಓದಿರಿ...

ಆನ್ ಲೈನ್ ನಲ್ಲಿ ಲೀಕ್ ಆಗಿದ್ಯಾ.?
''ಕೆ.ಜಿ.ಎಫ್' ಚಿತ್ರ ಆನ್ ಲೈನ್ ನಲ್ಲಿ ಲೀಕ್ ಆಗಿದೆ ಎಂಬ ಫಾರ್ವರ್ಡ್ ಸಂದೇಶ ಬಂದಿದೆ. ಇದು ನಿಜವೇ ಆಗಿದ್ದರೆ ದುರಾದೃಷ್ಟಕರ. ಇದು ಚಿತ್ರತಂಡದ ಗಮನಕ್ಕೆ ಬಂದಿದ್ಯಾ.?'' ಎಂದು ಹಿರಿಯ ಪತ್ರಕರ್ತ ಎಸ್.ಶ್ಯಾಮ್ ಪ್ರಸಾದ್ ನಿನ್ನೆ ಟ್ವೀಟ್ ಮಾಡಿದ್ದರು.

ಫೇಕ್ ಸಂದೇಶ
''ಈ ಶಾಟ್ ಗಳು ಟೀಸರ್ ಮತ್ತು ಟ್ರೈಲರ್ ನಲ್ಲಿವೆ. ಬಹುಶಃ ಇದು ಸುಳ್ಳು ಸಂದೇಶ ಆಗಿರಬಹುದು'' ಎಂದೂ ಕೂಡ ಎಸ್.ಶ್ಯಾಮ್ ಪ್ರಸಾದ್ ಟ್ವೀಟ್ ಮಾಡಿದ್ದರು.

ಸ್ಪಷ್ಟ ಪಡಿಸಿದ ಕಾರ್ತಿಕ್ ಗೌಡ
''ಅದು ಫೇಕ್ ಫಾರ್ವರ್ಡ್. ಪೈರಸಿ ವಿರುದ್ಧ ಹೋರಾಡಲು ಆಂಟಿ-ಪೈರಸಿ ತಂಡ ನಮ್ಮೊಂದಿಗೆ ಪ್ರತಿನಿತ್ಯ ಕೆಲಸ ಮಾಡುತ್ತಿದ್ದಾರೆ. ಸಹಾಯವಾಣಿ ನಂಬರ್ ಇಲ್ಲಿದೆ. ಏನಾದರೂ ಪೈರಸಿ ಕಂಡುಬಂದರೆ, ಈ ನಂಬರ್ ಅಥವಾ ಈಮೇಲ್ ಗೆ ತಿಳಿಸಬಹುದು'' ಎಂದು 'ಕೆ.ಜಿ.ಎಫ್' ಚಿತ್ರತಂಡದಿಂದ ಕಾರ್ತಿಕ್ ಗೌಡ ಸ್ಪಷ್ಪ ಪಡಿಸಿದರು.

ನಿರ್ಮಾಪಕರ ಮನವಿ
''ಯಶ್ ಅಭಿಮಾನಿಗಳೇ.. ಇದು ನಾಲ್ಕು ವರ್ಷಗಳ ಪ್ರಯತ್ನ. 'ಕೆ.ಜಿ.ಎಫ್' ತಂಡಕ್ಕೆ ನಿಮ್ಮ ಸಹಕಾರ ಅತ್ಯಗತ್ಯ. ಎಲ್ಲಾದರೂ ಪೈರಸಿ ಕಂಡು ಬಂದರೆ, ಕೂಡಲೆ ಈ ನಂಬರ್ ಗೆ ತಿಳಿಸಿ'' ಎಂದು ನಿರ್ಮಾಪಕ ವಿಜಯ್ ಕಿರಗಂದೂರು ಕೂಡ ಟ್ವೀಟ್ ಮಾಡಿದ್ದಾರೆ.

ಪೈರಸಿ ವಿರುದ್ಧ 'ಕೆ.ಜಿ.ಎಫ್' ಹೋರಾಟ
ಅಲ್ಲಿಗೆ, 'ಕೆ.ಜಿ.ಎಫ್' ಚಿತ್ರ ಆನ್ ಲೈನ್ ನಲ್ಲಿ ಲೀಕ್ ಆಗಿಲ್ಲ ಎಂಬುದು ಸ್ಪಷ್ಟವಾಗಿದೆ. ಕಿಡಿಗೇಡಿಗಳು ಮಾತ್ರ ಫೇಕ್ ಫಾರ್ವರ್ಡ್ ಗಳನ್ನು ಮಾಡಿ 'ಕೆ.ಜಿ.ಎಫ್' ಚಿತ್ರತಂಡಕ್ಕೆ ತಲೆ ನೋವು ನೀಡುತ್ತಿದ್ದಾರೆ. ಪೈರಸಿ ವಿರುದ್ಧ ಹೋರಾಡಲು 'ಕೆ.ಜಿ.ಎಫ್' ಚಿತ್ರತಂಡ ಸರ್ವ ಸನ್ನದ್ಧವಾಗಿದೆ. ಅದಕ್ಕೆ ನಿಮ್ಮೆಲ್ಲರ ಸಹಕಾರ ಅವಶ್ಯಕ.


Click it and Unblock the Notifications











