For Quick Alerts
  ALLOW NOTIFICATIONS  
  For Daily Alerts

  ಫಸ್ಟ್ ಶೋ ಮುಗೀತು, ಫಸ್ಟ್ ರಿವ್ಯೂ ಹೊರಬಿತ್ತು: ರಾಕಿ ಭಾಯ್ ಗೆ ಪ್ರೇಕ್ಷಕರ ಸಲಾಂ.!

  |
  KGF Kannada Movie : ಟ್ವಿಟ್ಟರ್ ನಲ್ಲಿ ಕೆಜಿಎಫ್ ಮೊದಲ ಶೋ, ಮೊದಲ ರಿವ್ಯೂ

  ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಕೆ.ಜಿ.ಎಫ್' ದೇಶದಾದ್ಯಂತ ತೆರೆಗೆ ಅಪ್ಪಳಿಸಿದೆ. ಮಧ್ಯರಾತ್ರಿ ಒಂದು ಗಂಟೆಯಿಂದಲೇ 'ಕೆ.ಜಿ.ಎಫ್' ಪ್ರದರ್ಶನ ಆರಂಭಗೊಂಡಿದ್ದು, ಚಿತ್ರವನ್ನು ಕಣ್ತುಂಬಿಕೊಂಡ ಪ್ರೇಕ್ಷಕರು ರಾಕಿ ಭಾಯ್ ಗೆ ಸಲಾಂ ಹೊಡೆದಿದ್ದಾರೆ.

  ಈಗಾಗಲೇ 'ಕೆ.ಜಿ.ಎಫ್' ಚಿತ್ರದ ಫಸ್ಟ್ ಶೋ ಮುಗಿದಿದ್ದು, ಫಸ್ಟ್ ರಿವ್ಯೂ ಪ್ರೇಕ್ಷಕ ಮಹಾಪ್ರಭುಗಳಿಂದ ಲಭ್ಯವಾಗಿದೆ. ಮಧ್ಯರಾತ್ರಿ ನಿದ್ದೆಗೆಟ್ಟು 'ಕೆ.ಜಿ.ಎಫ್' ಚಿತ್ರವನ್ನ ವೀಕ್ಷಿಸಿದ ಫ್ಯಾನ್ಸ್ ಟ್ವಿಟ್ಟರ್ ನಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

  'ಕೆ.ಜಿ.ಎಫ್' ಔಟ್ ಅಂಡ್ ಔಟ್ ಆಕ್ಷನ್ ಎಂಟರ್ ಟೇನರ್ ಆಗಿದ್ದು, ಮಾಸ್ ಅಭಿಮಾನಿಗಳಿಗೆ ಹೇಳಿ ಮಾಡಿಸಿದ ಚಿತ್ರವಾಗಿದೆ. ಅಲ್ಲದೇ, ಈ ಚಿತ್ರದಲ್ಲಿ ತಾಯಿ ಸೆಂಟಿಮೆಂಟ್ ಕೂಡ ಇದ್ದು, ಕ್ಲಾಸ್ ವೀಕ್ಷಕರಿಗೆ ಇಷ್ಟವಾಗಲಿದೆ.

  ಬನ್ನಿ ಹಾಗಾದ್ರೆ, 'ಕೆ.ಜಿ.ಎಫ್' ಫಸ್ಟ್ ಶೋ ನೋಡಿದವರು, ಟ್ವಿಟ್ಟರ್ ನಲ್ಲಿ ಹಾಕಿರುವ ಫಸ್ಟ್ ರಿವ್ಯೂಗಳತ್ತ ಒಮ್ಮೆ ಕಣ್ಣಾಡಿಸೋಣ.

  ಮೊದಲ ವಿಮರ್ಶೆ ಇಲ್ಲಿದೆ ನೋಡಿ...

  ಮೊದಲ ವಿಮರ್ಶೆ ಇಲ್ಲಿದೆ ನೋಡಿ...

  'ಕೆ.ಜಿ.ಎಫ್' ಚಿತ್ರವನ್ನ ನೋಡಿದ ವೀಕ್ಷಕರೊಬ್ಬರು ನೀಡಿರುವ ಮೊದಲ ವಿಮರ್ಶೆ ಇಲ್ಲಿದೆ ನೋಡಿ.. ''ಕೆ.ಜಿ.ಎಫ್ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ನಿರ್ಮಿಸೋದು ಪಕ್ಕ ಆಯ್ತು'' ಅಂತ ಹೆಮ್ಮೆಯಿಂದ ಹೇಳುತ್ತಿದ್ದಾರೆ ವೀಕ್ಷಕರು.

  ಅಬ್ಬರದಿಂದ ತೆರೆಗೆ ಬಂತು ಕೆ.ಜಿ.ಎಫ್: ಯಶ್ ಚಿತ್ರಕ್ಕೆ ಭರ್ಜರಿ ಓಪನಿಂಗ್.!

  ಫಸ್ಟ್ ಹಾಫ್ ಹೇಗಿದೆ.?

  ಫಸ್ಟ್ ಹಾಫ್ ಹೇಗಿದೆ.?

  ''ಕೆ.ಜಿ.ಎಫ್' ಚಿತ್ರದ ಮೊದಲಾರ್ಧ ಮೈನವಿರೇಳಿಸುವಂತಿದೆ. ಮಾಸ್ ಡೈಲಾಗ್ ಗಳಂತೂ ಸೂಪರ್. ಯಶ್ ಪರ್ಫಾಮೆನ್ಸ್ ಬೊಂಬಾಟ್ ಆಗಿದೆ. ಶ್ರೀನಿಧಿ ಶೆಟ್ಟಿ ಚೆನ್ನಾಗಿ ಕಾಣ್ತಾರೆ'' ಅಂತಿದ್ದಾರೆ ಅಭಿಮಾನಿಗಳು.

  ಯಶ್ ಎಕ್ಸ್ ಕ್ಲೂಸಿವ್ ಸಂದರ್ಶನ: ಇದುವರೆಗೂ ಒಂದು ಲೆಕ್ಕ, ಇನ್ಮುಂದೆ ಒಂದು ಲೆಕ್ಕ

  ಅಭಿಮಾನಿಗಳು ಫುಲ್ ಖುಷ್

  ಅಭಿಮಾನಿಗಳು ಫುಲ್ ಖುಷ್

  'ಕೆ.ಜಿ.ಎಫ್' ಚಿತ್ರವನ್ನ ಪೂರ್ತಿ ನೋಡಿದ್ಮೇಲೆ, ವೀಕ್ಷಕರು ಹೇಳಿರುವ ಮಾತಿದು. ಅಲ್ಲಿಗೆ, 'ಕೆ.ಜಿ.ಎಫ್' ಚೆನ್ನಾಗಿದೆ ಅಂತ ತಾನೇ ಅರ್ಥ.!

  'ಕೆಜಿಎಫ್' ಚಿತ್ರದಲ್ಲಿ ಯಶ್ ತಾಯಿ ಪಾತ್ರ ಮಾಡಿದ್ದು ಈಕೆಯೇ

  ಸಲಾಂ ರಾಕಿ ಭಾಯ್

  ಸಲಾಂ ರಾಕಿ ಭಾಯ್

  'ಕೆ.ಜಿ.ಎಫ್ ಚಿತ್ರವನ್ನ ನೋಡಿದ ಪ್ರೇಕ್ಷಕರು. ಐದಕ್ಕೆ 4.5 ಸ್ಟಾರ್ಸ್ ಕೊಟ್ಟಿದ್ದಾರೆ. ರವಿ ಬಸ್ರೂರ್ ರವರ ಬ್ಯಾಕ್ ಗ್ರೌಂಡ್ ನ ವೀಕ್ಷಕರು ಕೊಂಡಾಡುತ್ತಿದ್ದಾರೆ.

  ಕೂಡಲೇ ವೀಕ್ಷಿಸಿ..

  ಕೂಡಲೇ ವೀಕ್ಷಿಸಿ..

  ''ಫಸ್ಟ್ ಹಾಫ್ ತುಂಬಾ ಚೆನ್ನಾಗಿದೆ. ಛಾಯಾಗ್ರಹಣ ಬೊಂಬಾಟ್ ಆಗಿದೆ. ಪೊಲೀಸ್ ಸ್ಟೇಷನ್ ನಲ್ಲಿ ರಾಕಿ ಸೀನ್, ಮೈನಿಂಗ್ ಫೈಟ್, ಕ್ಲೈಮ್ಯಾಕ್ಸ್ ಸೂಪರ್ ಆಗಿದೆ'' ಅಂತಿದ್ದಾರೆ ಅಭಿಮಾನಿಗಳು.

  ಸದಾ ಕೋಪವೇಕೆ.?

  ಸದಾ ಕೋಪವೇಕೆ.?

  ''ಕೆ.ಜಿ.ಎಫ್' ಚಿತ್ರದ ಆಕ್ಷನ್ ಸೀಕ್ವೆನ್ಸ್ ಸೂಪರ್ ಆಗಿದೆ. ಆದ್ರೆ, ಹಾಡು, ರೋಮ್ಯಾನ್ಸ್, ಐಟಂ ಸಾಂಗ್.. ಎಲ್ಲದರಲ್ಲೂ ಯಶ್ ಆಂಗ್ರಿ ಎಕ್ಸ್ ಪ್ರೆಶನ್ ಕ್ಯಾರಿ ಆಗಿರೋದು ಯಾಕೆ.?'' ಅನ್ನೋದು ವೀಕ್ಷಕರ ಪ್ರಶ್ನೆ.

  ಆಂಗ್ರಿ ಯಂಗ್ ಮ್ಯಾನ್

  ಆಂಗ್ರಿ ಯಂಗ್ ಮ್ಯಾನ್

  ''ರಾಕಿಂಗ್ ಸ್ಟಾರ್ ಯಶ್ ನ ನಿರ್ದೇಶಕ ಪ್ರಶಾಂತ್ ನೀಲ್ ಆಂಗ್ರಿ ಯಂಗ್ ಮ್ಯಾನ್ ಆಗಿ ಪರಿಚಯ ಮಾಡಿದ್ದಾರೆ. ಚಿತ್ರಕಥೆ, ಛಾಯಾಗ್ರಹಣ ಮತ್ತು ಬ್ಯಾಕ್ ಗ್ರೌಂಡ್ ಸ್ಕೋರ್ ಚೆನ್ನಾಗಿದೆ'' - ಸಿನಿಲೋಕ.

  ಬೆಂಕಿ ಕಣ್ಲಾ...

  ಬೆಂಕಿ ಕಣ್ಲಾ...

  ''ಕೆ.ಜಿ.ಎಫ್' ಚಿತ್ರಕಥೆ ಎಲ್ಲರನ್ನು ಹಿಡಿದು ಕೂರಿಸುತ್ತದೆ. ರಾಕಿಂಗ್ ಸ್ಟಾರ್ ರಾಕ್ ಮಾಡಿದ್ದಾರೆ. ಬೆಂಕಿ'' - ಶಶಾಂಕ್ ಗೌಡ

  ಬಾಹುಬಲಿ ಬಿಟ್ಟರೆ ಇದೇ.!

  ಬಾಹುಬಲಿ ಬಿಟ್ಟರೆ ಇದೇ.!

  ''ಬಾಹುಬಲಿ' ಬಳಿಕ ಬಂದಿರುವ ಉತ್ತಮ ಚಿತ್ರ ಅಂದ್ರೆ ಇದೇ. ಕೆ.ಜಿ.ಎಫ್ ಅಂದ್ರೆ ಕನ್ನಡ ಗೋಲ್ಡ್ ಫಿಲ್ಮ್. ಇಡೀ ಕುಟುಂಬದ ಜೊತೆ ಕೂತು ಚಿತ್ರ ವೀಕ್ಷಿಸಿದ್ವಿ'' - ನಿತಿನ್

  ಪ್ರತಿ ಸೀನ್ ನಲ್ಲೂ ರೋಮಾಂಚನ

  ಪ್ರತಿ ಸೀನ್ ನಲ್ಲೂ ರೋಮಾಂಚನ

  ''ಕೆ.ಜಿ.ಎಫ್' ಚಿತ್ರದ ಪ್ರತಿ ಸೀನ್ ನಲ್ಲೂ ರೋಮಾಂಚನ ಆಗುತ್ತದೆ'' ಎನ್ನುತ್ತಿದ್ದಾರೆ ವೀಕ್ಷಕರು. ಒಟ್ನಲ್ಲಿ 'ಕೆ.ಜಿ.ಎಫ್' ಚಿತ್ರಕ್ಕೆ ಎಲ್ಲೆಡೆ ಪಾಸಿಟೀವ್ ಪ್ರತಿಕ್ರಿಯೆ ವ್ಯಕ್ತವಾಗಿದೆ.

  English summary
  Rocking Star Yash starrer Kannada Movie KGF gets good opening all over Karnataka. Here is the First response from Audience in Twitter. Have a look.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X