ಡಿಜಿಟಲ್ ಮತ್ತು ಸ್ಯಾಟೆಲೈಟ್ ಹಕ್ಕು ಮಾರಾಟದಲ್ಲಿ 'ಕೆ.ಜಿ.ಎಫ್' ಹೊಸ ಮೈಲಿಗಲ್ಲು.!
Recommended Video

ಯಾರ ಬಾಯಲ್ಲಿ ಕೇಳಿದರೂ, ಈಗ 'ಕೆ.ಜಿ.ಎಫ್' ಚಿತ್ರದ್ದೇ ಗುಣಗಾನ. ಅಷ್ಟರಮಟ್ಟಿಗೆ, ಇಡೀ ದೇಶದಲ್ಲಿ 'ಕೆ.ಜಿ.ಎಫ್' ಮೇನಿಯಾ, ಮಾಸ್ ಹಿಸ್ಟೀರಿಯಾ ಸೃಷ್ಟಿಯಾಗಿದೆ.
ಕಲೆಕ್ಷನ್ ವಿಚಾರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆ.ಜಿ.ಎಫ್' ದಿನಕ್ಕೊಂದು ರೆಕಾರ್ಡ್ ಬ್ರೇಕ್ ಮಾಡುತ್ತಿದೆ. ಬರೋಬ್ಬರಿ ನೂರು ಕೋಟಿ ಕ್ಲಬ್ ಸೇರಿದ ಪ್ರಪ್ರಥಮ ಸ್ಯಾಂಡಲ್ ವುಡ್ ಚಿತ್ರ ಎಂಬ ಹೆಗ್ಗಳಿಕೆಗೆ 'ಕೆ.ಜಿ.ಎಫ್' ಪಾತ್ರವಾಗಿದೆ.
ದೇಶದಾದ್ಯಂತ 'ಕೆ.ಜಿ.ಎಫ್'ಗೆ ಜೈಕಾರ ಜೋರಾಗಿರುವಾಗಲೇ, ಸಿನಿಮಾದ ಡಿಜಿಟಲ್ ಮತ್ತು ಸ್ಯಾಟೆಲೈಟ್ ರೈಟ್ಸ್ ದಾಖಲೆ ಮೊತ್ತಕ್ಕೆ ಸೇಲ್ ಆಗಿದೆ. ಈ ಕುರಿತ ಕಂಪ್ಲೀಟ್ ಡೀಟೇಲ್ಸ್ ಫೋಟೋ ಸ್ಲೈಡ್ ಗಳಲ್ಲಿದೆ, ಓದಿರಿ...

ಕೆ.ಜಿ.ಎಫ್ ಡಿಜಿಟಲ್ ರೈಟ್ಸ್ ಸೇಲ್
'ಕೆ.ಜಿ.ಎಫ್' ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಲಭ್ಯವಾದ ಮೇಲೆ ಡಿಜಿಟಲ್ ರೈಟ್ಸ್ ಸೇಲ್ ಆಗಿದೆ. ಮೂಲಗಳ ಪ್ರಕಾರ, 18 ಕೋಟಿ ರೂಪಾಯಿ ಕೊಟ್ಟು ಅಮೇಜಾನ್ ಪ್ರೈಮ್ ಸಂಸ್ಥೆ 'ಕೆ.ಜಿ.ಎಫ್' ಡಿಜಿಟಲ್ ಹಕ್ಕನ್ನು ಖರೀದಿ ಮಾಡಿದೆ.

ಸ್ಯಾಟೆಲೈಟ್ ಹಕ್ಕು ಮಾರಾಟ
ಮೂಲಗಳ ಪ್ರಕಾರ, ದಾಖಲೆ ಮೊತ್ತವನ್ನು ನೀಡಿ ಕಲರ್ಸ್ ಕನ್ನಡ ವಾಹಿನಿ 'ಕೆ.ಜಿ.ಎಫ್' ಚಿತ್ರದ ಸ್ಯಾಟೆಲೈಟ್ ರೈಟ್ಸ್ ಖರೀದಿಸಿದೆ. ಕಲರ್ಸ್ ಕನ್ನಡ ನೀಡಿರುವ ಮೊತ್ತ ಎಷ್ಟು ಎಂಬುದು ಬಹಿರಂಗ ಆಗಿಲ್ಲ.

ಎಲ್ಲಾ ಭಾಷೆಗಳ ರೈಟ್ಸ್ ಸೇಲ್
'ಕೆ.ಜಿ.ಎಫ್' ಹಿಂದಿ ಚಿತ್ರದ ಸ್ಯಾಟೆಲೈಟ್ ರೈಟ್ಸ್ ನ ಸೋನಿ ವಾಹಿನಿ ಖರೀದಿ ಮಾಡಿದೆ. ಇನ್ನೂ ತೆಲುಗು, ತಮಿಳು ಮತ್ತು ಮಲಯಾಳಂ ವರ್ಷನ್ ಗಳ ರೈಟ್ಸ್ ಗಳು ಕೂಡ ಬೇರೆ ಬೇರೆ ವಾಹಿನಿಯ ಪಾಲಾಗಿವೆ.

ಲಾಭದಲ್ಲಿ ನಿರ್ಮಾಪಕರು.!
ಮೂಲಗಳ ಪ್ರಕಾರ, ಈಗಾಗಲೇ 'ಕೆ.ಜಿ.ಎಫ್'ಗೆ ಹಾಕಲಾಗಿದ್ದ ಬಂಡವಾಳ ನಿರ್ಮಾಪಕರಿಗೆ ವಾಪಸ್ ಬಂದಿದೆ. ಇನ್ಮೇಲಾಗುವ ಕಲೆಕ್ಷನ್ ಏನಿದ್ದರೂ ಪ್ರೊಡ್ಯೂಸರ್ ಜೇಬಿಗೆ ಲಾಭ. ಕನ್ನಡ ಚಿತ್ರಗಳಿಗೆ ಮಾರುಕಟ್ಟೆ ಇಲ್ಲ ಅಂತಿದ್ದವರ ಬಾಯಿಗೆ 'ಕೆ.ಜಿ.ಎಫ್' ಬೀಗ ಜಡಿದಿದೆ.


Click it and Unblock the Notifications











