»   » 'ಕೆ.ಜಿ.ಎಫ್' ಚಿತ್ರದಲ್ಲಿ ಯಶ್ ರೆಟ್ರೋ ಸ್ಟೈಲ್ ಬಹಿರಂಗ

'ಕೆ.ಜಿ.ಎಫ್' ಚಿತ್ರದಲ್ಲಿ ಯಶ್ ರೆಟ್ರೋ ಸ್ಟೈಲ್ ಬಹಿರಂಗ

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಅಭಿನಯಿಸುತ್ತಿರುವ 'ಕೆ.ಜಿ.ಎಫ್' ಚಿತ್ರ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ. ಸ್ಯಾಂಡಲ್ ವುಡ್ ನ ದೊಡ್ಡ ಬಜೆಟ್ ಸಿನಿಮಾ ಎಂದು ಗುರುತಿಸಿಕೊಳ್ಳುತ್ತಿರುವ 'ಕೆ.ಜಿ.ಎಫ್' ಯಶ್ ಅವರ ವೃತ್ತಿ ಜೀವನದಲ್ಲೂ ಮೈಲಿಗಲ್ಲು.

ಈ ಚಿತ್ರಕ್ಕಾಗಿ ಯಶ್ ಸಾಕಷ್ಟು ತಯಾರಿ ಮಾಡಿಕೊಂಡಿದ್ದು, ಸ್ಕ್ರಿಪ್ಟ್ ಗೆ ತಕ್ಕಂತೆ ಮೇಕ್ ಓವರ್ ಮಾಡಿಕೊಂಡಿದ್ದಾರೆ. ಈಗಾಗಲೇ 'ಕೆ.ಜಿ.ಎಫ್' ಚಿತ್ರದಲ್ಲಿ ಯಶ್ ಅವರ ಫಸ್ಟ್ ಲುಕ್ ರಿಲೀಸ್ ಆಗಿದ್ದು ಕುತೂಹಲ ಹೆಚ್ಚಿಸಿತ್ತು. ಈಗ ಮೇಕಿಂಗ್ ಚಿತ್ರಗಳು ಬಿಡುಗಡೆಯಾಗಿದ್ದು, ರಾಕಿಂಗ್ ಫ್ಯಾನ್ಸ್ ಮತ್ತಷ್ಟು ಕಾತುರರಾಗಿದ್ದಾರೆ.

ಹೊಸ ಮನೆ ಖರೀದಿಸಿದ ಯಶ್ - ರಾಧಿಕಾ ಪಂಡಿತ್ ಜೋಡಿ

Kannada Movie kgf Shooting stills leak

ಸದ್ಯ, ಮೈಸೂರಿನಲ್ಲಿ ಕೆ.ಜಿ.ಎಫ್ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಯಶ್ ಅವರ ಗೆಪಟ್ ನ ಕೆಲವು ಫೋಟೋಗಳು ರಿವಿಲ್ ಆಗಿದೆ. ಈ ದೃಶ್ಯಗಳಲ್ಲಿ ಯಶ್ ಅವರು ಸುಮಾರು 80, 90ರ ದಶಕದ ನಾಯಕನಾಗಿ ಕಾಣಿಸಿಕೊಂಡಿರುವುದು ಗಮನ ಸೆಳೆಯುತ್ತಿದೆ.

Kannada Movie kgf Shooting stills leak

ಈ ಚಿತ್ರದಲ್ಲಿ ಯಶ್ ರೆಟ್ರೋ ಸ್ಟೈಲ್ ನಲ್ಲಿ ಅಭಿನಯಿಸುತ್ತಿದ್ದಾರೆ ಎನ್ನಲಾಗಿದೆ. ಬಹುಶಃ ಈ ದೃಶ್ಯಗಳನ್ನ ನೋಡುತ್ತಿದ್ದರೇ, ಇದು ರೆಟ್ರೋ ಸ್ಟೈಲ್ ಎನ್ನಿಸುತ್ತಿದೆ.

ಅಣ್ಣ ಯಶ್ ಬಗ್ಗೆ ತಂಗಿ ದೀಪಿಕಾ ದಾಸ್ ಕೊಟ್ಟ ಹೇಳಿಕೆ ಏನ್ಗೊತ್ತಾ.?

Kannada Movie kgf Shooting stills leak

ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಶ್ರೀನಿಧಿ ಶೆಟ್ಟಿ ನಾಯಕಿ ಆಗಿ ಅಭಿನಯಿಸುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ.

'ಯಶ್ ಜೊತೆ ಮದುವೆ ಆಗ್ಲಾ' ಎಂದ ಯುವತಿಗೆ ರಾಧಿಕಾ ಕೊಟ್ಟ ಉತ್ತರ

English summary
rocking star yash Starrer Kannada Movie kgf Shooting stills Revealed
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada