»   » 'ಕೋಲಾರ' ಚಿನ್ನದ ನೆಲದಲ್ಲಿ ರಕ್ತದೋಕುಳಿ ಆಟ

'ಕೋಲಾರ' ಚಿನ್ನದ ನೆಲದಲ್ಲಿ ರಕ್ತದೋಕುಳಿ ಆಟ

By: ಜೀವನರಸಿಕ
Subscribe to Filmibeat Kannada

ಲೂಸ್ ಮಾದ ಯೋಗಿ ಅಭಿನಯದ 'ಕೋಲಾರ' ಸಿನಿಮಾ ಇಂದು (ಜು.28) ಫೋಟೋಶೂಟ್ ನಡೆಸ್ತಾ ಇದೆ. ಚಿತ್ರದಲ್ಲಿ ರೌಡಿ ತಂಗಂ ಕಥೆ ಇರಲಿದ್ದು. ತಂಗಂ ಸಿನಿಮಾ ಅಂತ ಸಿನಿಮಾ ಶುರುವಾದಾಗಲೇ ತಂಗಂ ತಾಯಿ ಸಿನಿಮಾದ ವಿರುದ್ಧ ದನಿ ಎತ್ತಿದ್ರು.

ಈ ಹಿಂದೆ ಸ್ಲಮ್ ಸಿನಿಮಾವನ್ನ ಡೈರೆಕ್ಟ್ ಮಾಡಿದ್ದ ಮಹೇಶ್ ಕುಮಾರ್ 'ಕೋಲಾರ' ಸಿನಿಮಾವನ್ನ ಡೈರೆಕ್ಟ್ ಮಾಡ್ತಿದ್ದು ಚಿತ್ರದುದ್ದಕ್ಕೂ ನೆಗೇಟೀವ್ ಶೇಡ್ ನ ದೊಡ್ಡ ತಾರಾಗಣವೇ ಇರಲಿದೆ. ತಮಿಳು ನಟ ಸಂಪತ್ ಕುಮಾರ್, ಕನ್ನಡದ ಖಳನಟ ಶೋಭರಾಜ್, ಮತ್ತೊಬ್ಬ ಖಳ ನಟ ತಿಲಕ್ ವಿಲನ್ ಶೇಡ್ ನ ನಟರಾಗಿದ್ದಾರೆ.

ಚಿತ್ರ ಕುತೂಹಲ ಕೆರಳಿಸೋಕೆ ಮತ್ತೆ ಒಂದಷ್ಟು ಪಾತ್ರಗಳಿವೆ. ಸಿಲ್ಕ್ ಸಖತ್ ಹಾಟ್ ಖ್ಯಾತಿಯ ಸ್ಟಾರ್ ಅಕ್ಷಯ್, ಜಟಾಯು, ಸಂಚಾರಿ ಸಿನಿಮಾಗಳ ನಾಯಕ ರಾಜ್ ಕೂಡ ಕೋಲಾರ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ. "ಚಿನ್ನದ ನೆಲದಲ್ಲಿ ರಕ್ತದೋಕುಳಿ" ಅನ್ನೋ ಅನ್ನೋ ಟ್ಯಾಗ್ ಲೈನ್ ಇಟ್ಕೊಂಡಿದೆ.

Kannada movie Kolar photoshoot begins

ನೈಜ ಕಥೆ ಆಧಾರಿತ ಈ ಚಿತ್ರದ ಮತ್ತೊಂದು ಟ್ಯಾಗ್ ಲೈನ್ ಬೇಸ್ಡ್ ಆನ್ ರಿಯಲ್ ಸ್ಟೋರೀಸ್ ಅನ್ನೋ ಟ್ಯಾಗ್ಲೈನ್ ಇದೆ. ಯೋಗಿ ಮುಖ್ಯಪಾತ್ರದಲ್ಲಿರುವ ಚಿತ್ರದ ನಾಯಕಿಯಾಗಿ ಯಾರು ಕಾಣಿಸಿಕೊಳ್ತಾರೆ ಅನ್ನೋದು ಗೊತ್ತಾಗದಿದ್ರೂ 'ಕೋಲಾರ' ಸಿನಿಮಾ ವಿಭಿನ್ನ ಪಾತ್ರಗಳಿಂದ ಗಮನ ಸೆಳೀತಾ ಇದೆ.

English summary
Loose Mada Yogesh upcoming movie 'Kolara' photoshoot starts on 28th July. Yogesh plays a role of notorious rowdy Thangam, who was allegedly involved in 37 cases of murder, dacoity, rape, robbery and theft cases in and around KGF, Tamil Nadu and Andhra Pradesh.
Please Wait while comments are loading...