For Quick Alerts
  ALLOW NOTIFICATIONS  
  For Daily Alerts

  ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್ ಏನದು.?

  By Suneetha
  |

  ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಅಭಿಮಾನಿಗಳು ಈಗಿನಿಂದಲೇ ತಮ್ಮ ನೆಚ್ಚಿನ ಹೀರೋ ಹುಟ್ಟುಹಬ್ಬದ ಆಚರಣೆಗೆ ಎಲ್ಲಾ ರೀತಿಯ ತಯಾರಿ ನಡೆಸುತ್ತಿದ್ದಾರೆ.

  ಸೆಪ್ಟೆಂಬರ್ 2, ಬಂತೆಂದ್ರೆ ಅಂದು ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಹಬ್ಬದ ವಾತಾವರಣವೇ ಸರಿ. ಆ ದಿನ ಸುದೀಪ್ ಮನೆ ಮುಂದೆ ಜನಜಂಗುಳಿ, ಸಡಗರ-ಸಂಭ್ರಮದ ಗದ್ದಲ.[ಕಿಚ್ಚ ಸುದೀಪ್ ಗೆ 'ದೊಡ್ಡ ಪಾಠ' ಕಲಿಸಿದ 'ಆ' ಸತ್ಯ ಘಟನೆ ಯಾವುದು?]

  ಕಳೆದ ವರ್ಷ ಅಭಿಮಾನಿಗಳು, ಸುದೀಪ್ ಅವರ ಹುಟ್ಟುಹಬ್ಬದ ದಿನದಂದು 'ಕಿಚ್ಚೋತ್ಸವ-2015' ಅಂತ ಸ್ಪೆಷಲ್ ಕಾರ್ಯಕ್ರಮ ಮಾಡಿದ್ದರು. ಅಲ್ಲದೇ ಸುದೀಪ್ ಅವರ ಮನೆಯನ್ನು ಖುದ್ದು ಅಭಿಮಾನಿಗಳೇ ಸೇರಿಕೊಂಡು ಮದುಮಗಳಂತೆ ಸಿಂಗರಿಸಿದ್ದರು.

  ಅದರಂತೆ ಈ ಬಾರಿ ಕೂಡ ಅಭಿಮಾನಿಗಳು ಹುಟ್ಟುಹಬ್ಬದ ಆಚರಣೆಗೆ ವಿಶೇಷ ಯೋಜನೆ ಹಾಕಿಕೊಂಡಿದ್ದಾರೆ. ಇದೆಲ್ಲಾ ಓಕೆ, ಅಭಿಮಾನಿಗಳು ಇಷ್ಟೆಲ್ಲಾ ಮಾಡುವಾಗ ಸುದೀಪ್ ಅವರು ಅಭಿಮಾನಿ ದೇವರುಗಳಿಗೆ ಏನಾದ್ರೂ ಉಡುಗೊರೆ ನೀಡಬೇಕಲ್ವಾ?.['ಕೋಟಿಗೊಬ್ಬ 2' ಚಿತ್ರದಿಂದ ಅಭಿಮಾನಿಗಳಿಗೆ ಬಿಸಿಬಿಸಿ ಸುದ್ದಿ]

  ಆದ್ದರಿಂದ ಈ ಬಾರಿ ಸುದೀಪ್ ಅವರು ತಮ್ಮ ಅಭಿಮಾನಿಗಳಿಗೋಸ್ಕರ, ಹುಟ್ಟುಹಬ್ಬದ ಸ್ಪೆಷಲ್ ಅಂತ ಒಂದಲ್ಲಾ, ಎರಡು ವಿಶೇಷ ಉಡುಗೊರೆ ನೀಡುತ್ತಿದ್ದಾರೆ. ಏನಪ್ಪಾ ಅಂತಹ ವಿಶೇಷ ಉಡುಗೊರೆ ಅಂತ ಕುತೂಹಲ ಇದ್ಯಾ, ಹಾಗಿದ್ರೆ ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

  ಹೊರ ರಾಜ್ಯದಲ್ಲೂ 'ಕೋಟಿಗೊಬ್ಬ 2' ದರ್ಬಾರ್

  ಹೊರ ರಾಜ್ಯದಲ್ಲೂ 'ಕೋಟಿಗೊಬ್ಬ 2' ದರ್ಬಾರ್

  ಆಗಸ್ಟ್ 12 ಕ್ಕೆ ತೆರೆಕಂಡ 'ಕೋಟಿಗೊಬ್ಬ 2' ಎಲ್ಲರ ಮನಗೆದ್ದು ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ. ಇದೀಗ ಸುದೀಪ್ ಅವರ ಹುಟ್ಟುಹಬ್ಬದ ಅಂಗವಾಗಿ 'ಕೋಟಿಗೊಬ್ಬ 2' ಚಿತ್ರವನ್ನು ಹೊರ ರಾಜ್ಯಗಳಲ್ಲೂ ಬಿಡುಗಡೆ ಮಾಡಲು ವಿತರಕ ಜ್ಯಾಕ್ ಮಂಜು ನಿರ್ಧರಿಸಿದ್ದಾರೆ. 'ಕೋಟಿಗೊಬ್ಬ'ನ ದರ್ಬಾರ್ ಹೊರರಾಜ್ಯಗಳಲ್ಲೂ ಆರಂಭವಾಗುತ್ತಿರೋದು, ಅಭಿಮಾನಿಗಳಿಗೆ ಪಾಯಸ ತಿಂದಷ್ಟೇ ಖುಷಿಯಾಗಿದೆ.[ಸುದೀಪ್ ಗೆ ಬಹಿರಂಗ ಕ್ಷಮೆ ಕೇಳಿದ ಸೂರಪ್ಪ ಬಾಬು! ಏನಿದು ವಿವಾದ?]

  ಎಲ್ಲೆಲ್ಲಿ ಬಿಡುಗಡೆ.?

  ಎಲ್ಲೆಲ್ಲಿ ಬಿಡುಗಡೆ.?

  ಕನ್ನಡ ಮತ್ತು ತಮಿಳು ವರ್ಷನ್ ಎರಡು ಕೂಡ, ಹೊರರಾಜ್ಯಗಳಲ್ಲಿ ಸುಮಾರು 11 ಸೆಂಟರ್ ಗಳಲ್ಲಿ ತೆರೆ ಕಾಣಲಿದೆ. ಆಂಧ್ರಪ್ರದೇಶ/ತೆಲಂಗಾಣ, ಹೈದರಾಬಾದ್ ಸೇರಿದಂತೆ ಮಹಾರಾಷ್ಟ್ರದ ಕೆಲವು ಚಿತ್ರಮಂದಿರಗಳಲ್ಲಿ ಈ ಸಿನಿಮಾ ತೆರೆ ಕಾಣಲಿದೆ. ಬಹುತೇಕ ಎಲ್ಲಾ ಕಡೆ ಮಲ್ಟಿಪ್ಲೆಕ್ಸ್ ನಲ್ಲಿ ತೆರೆ ಕಾಣುತ್ತಿದೆ. ಇನ್ನು ಕೊಲ್ಕತ್ತಾದಲ್ಲಿ ಸಿಂಗಲ್ ಸ್ಕ್ರೀನ್ ನಲ್ಲೂ ತೆರೆ ಕಾಣಲಿದೆ.[ಕನ್ನಡ ಚಿತ್ರರಂಗದ ಇತಿಹಾಸದಲ್ಲೇ 'ಕೋಟಿ ಕಿಚ್ಚ'ನ ಹೊಸ ದಾಖಲೆ]

  ತೆಲುಗು ಹಕ್ಕು ಸೋಲ್ಡ್ ಔಟ್

  ತೆಲುಗು ಹಕ್ಕು ಸೋಲ್ಡ್ ಔಟ್

  ಅಂದಹಾಗೆ ಈ ಸಿನಿಮಾವನ್ನು ಮಲಯಾಳಂ, ತೆಲುಗು ಮತ್ತು ಭೋಜ್ ಪುರಿ ಭಾಷೆಯಲ್ಲಿ ರಿಲೀಸ್ ಮಾಡಲು ಭಾರಿ ಬೇಡಿಕೆ ಹೆಚ್ಚಿದೆ. ತೆಲುಗಿನ ರಿಲೀಸ್ ಹಕ್ಕು ಈಗಾಗಲೇ ಸೋಲ್ಡ್ ಔಟ್ ಆಗಿದೆ ಅಂತ ಮೂಲಗಳು ಮಾಹಿತಿ ನೀಡಿದ್ದು, ಮಲಯಾಳಂ ಮತ್ತು ಭೋಜ್ ಪುರಿಯಲ್ಲಿ ರಿಲೀಸ್ ಮಾಡಲು ಮಾತು-ಕತೆಗಳು ನಡೆದಿವೆ ಎನ್ನಲಾಗುತ್ತಿದೆ.[ವಿಮರ್ಶೆ: ಆ 'ಕೋಟಿಗೊಬ್ಬ'ನಂತಲ್ಲ ಈ 'ಕೋಟಿಗೊಬ್ಬ'.!]

  'ಹೆಬ್ಬುಲಿ' ಟೀಸರ್

  'ಹೆಬ್ಬುಲಿ' ಟೀಸರ್

  'ಹೆಬ್ಬುಲಿ' ಚಿತ್ರದ ಫಸ್ಟ್ ಶೆಡ್ಯೂಲ್ ಶೂಟಿಂಗ್ ಮುಕ್ತಾಯ ಆಗಿದೆ. ಹಾಗಾಗಿ ಸುದೀಪ್ ಅವರ ಹುಟ್ಟುಹಬ್ಬದ ಸ್ಪೆಷಲ್ ಅಂತ 'ಹೆಬ್ಬುಲಿ' ಚಿತ್ರದ ಟೀಸರ್ ಬಿಡುಗಡೆ ಆಗಲಿದೆ. ಇದು ಕೂಡ ಅಭಿಮಾನಿಗಳಿಗೆ ಹುಟ್ಟುಹಬ್ಬದ ವಿಶೇಷ ಉಡುಗೊರೆ ಆಗಲಿದೆ.

  'ಕಿಚ್ಚೋತ್ಸವ-2016'

  'ಕಿಚ್ಚೋತ್ಸವ-2016'

  'ಕಿಚ್ಚೋತ್ಸವ-2016' ಹಬ್ಬ ಈಗಿನಿಂದಲೇ ಶುರುವಾಗಿದ್ದು, ಟ್ವಿಟ್ಟರ್ ನಾದ್ಯಂತ ಅಭಿಮಾನಿಗಳು ಟ್ರೆಂಡ್ ಮಾಡುತ್ತಿದ್ದಾರೆ. ಸುದೀಪ್ ಅವರ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿ ಬಳಗದವರು ಸಾಮಾಜಿಕ ಕಾರ್ಯಗಳನ್ನು ಮಾಡಲಿದ್ದಾರೆ. ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ ಇತ್ಯಾದಿ ಕಾರ್ಯಕ್ರಮಗಳನ್ನು ಸುದೀಪ್ ಅಭಿಮಾನಿಗಳು ಹಮ್ಮಿಕೊಂಡಿದ್ದಾರೆ.

  'ಕೋಟಿಗೊಬ್ಬ 2' ಕಲೆಕ್ಷನ್ ಎಷ್ಟು.?

  'ಕೋಟಿಗೊಬ್ಬ 2' ಕಲೆಕ್ಷನ್ ಎಷ್ಟು.?

  ಸಿನಿಮಾ ಬಿಡುಗಡೆ ಈಗಾಗಲೇ ಎರಡು ವಾರ ಕಳೆದಿದ್ದು, ಈ ಎರಡು ವಾರಗಳಲ್ಲಿ 'ಕೋಟಿಗೊಬ್ಬ 2' ಸುಮಾರು 25 ಕೋಟಿ (ಬರೀ ಕರ್ನಾಟಕದಲ್ಲಿ ಮಾತ್ರ) ರೂಪಾಯಿ ಕಲೆಕ್ಷನ್ ಮಾಡಿ ಬಾಕ್ಸಾಫೀಸ್ ಚಿಂದಿ ಉಡಾಯಿಸಿದೆ. ಚಿತ್ರದಲ್ಲಿ ಸುದೀಪ್ ಅವರಿಗೆ ನಾಯಕಿಯಾಗಿ ನಿತ್ಯಾ ಮೆನನ್ ಕಾಣಿಸಿಕೊಂಡಿದ್ದರು. ಖ್ಯಾತ ನಿರ್ದೇಶಕ ಕೆ.ಎಸ್ ರವಿಕುಮಾರ್ ಅವರು ಆಕ್ಷನ್-ಕಟ್ ಹೇಳಿದ್ದರು.

  English summary
  Two weeks after its mega opening in Karnataka, Kotigobba-2 will have release across the country on September 2, which happens to be lead actor Sudeep's birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X