'ಗ್ಯಾಂಗ್ ಸ್ಟರ್' ಜೊತೆ ನಗಿಸಲು ಬಂದ 'ಕುಷ್ಕ'

ಡೈರೆಕ್ಟರ್ ಸ್ಪೆಷಲ್, ಮಠ, ಎರಡನೇ ಸಲ ಎಂಬ ವಿಭಿನ್ನ ಸಿನಿಮಾಗಳನ್ನ ನಿರ್ದೇಶನ ಮಾಡಿದ್ದು ಗುರುಪ್ರಸಾದ್ ಹೀರೋ ಆಗ್ಬಿಟ್ಟಿದ್ದಾರೆ ಎಂಬ ಸುದ್ದಿ ಕಳೆದ ಕೆಲ ದಿನಗಳ ಹಿಂದೆ ಸದ್ದು ಮಾಡಿತ್ತು. ಆ ಚಿತ್ರದ ಹೆಸರು ಕುಷ್ಕ.

'ಕುಷ್ಕ' ಈಗ ತೆರೆಗೆ ಬರಲು ಸಜ್ಜಾಗಿದೆ. ಬಹುತೇಕ ಶೂಟಿಂಗ್ ಮುಗಿಸಿರುವ ಚಿತ್ರತಂಡ ಈಗ ಉಳಿದ ಪಾತ್ರಗಳನ್ನ ಬಹಿರಂಗಪಡಿಸಿದೆ. ಈ ಹಿಂದೆ ಹೇಳಿದಂತೆ ನಿರ್ದೇಶಕ ಗುರುಪ್ರಸಾದ್ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

kannada movie kushka ready to release

ಪ್ರಮುಖ ಪಾತ್ರ ಅಂದ್ರೆ, ಈ ಚಿತ್ರದಲ್ಲಿ ಗುರುಪ್ರಸಾದ್ ಗ್ಯಾಂಗ್ ಸ್ಟರ್. ಇವರು ಸಾಮಾನ್ಯವಾದ ಗ್ಯಾಂಗ್ ಸ್ಟರ್ ಅಲ್ಲ. ತುಂಬಾ ಮಾತಾಡೋ ಗ್ಯಾಂಗ್ ಸ್ಟರ್. ಚಿತ್ರದಲ್ಲಿ ಇವರ ಹೆಸರು ಗೇಮ್ಸ್ ಗೌಡ (games gowda) ಅಂತ.

ಶೋಭರಾಜ್ ಕೂಡ ಈ ಚಿತ್ರದಲ್ಲಿ ನಟಿಸಿದ್ದು, ಸಸ್ಪೆಂಡ್ ಆಗಿರುವ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ಡಾ|| ಪಾಲ್' ವೆಬ್ ಸೀರಿಸ್ ಮೂಲಕ ಜನಪ್ರಿಯತೆ ಗಳಿಸಿದ್ದ ಕೈಲಾಶ್ ಪಾಲ್ ಕೂಡ ಇದ್ದಾರೆ. ಇನ್ನು ಇಬ್ಬರು ನಟಿಯರಿದ್ದು, ಮಾಧುರಿ ಬ್ರಿಗಂಜಾ ಇನ್ನೊಬ್ಬರ ಹೆಸ್ರು ಗೌಪ್ಯವಾಗಿಡಲಾಗಿದೆ.

ಒಂದು ಬೆಲೆ ಬಾಳುವ ಕಲ್ಲಿನ ಸುತ್ತ ಈ ಕುಷ್ಕ ಕಥೆ ನಡೆಯಲಿದ್ದು, ಔಟ್ ಅಂಡ್ ಔಟ್ ಕಾಮಿಡಿಯಾಗಿರಲಿದೆ. ಈ ಹಿಂದೆ 'ಹೀಗೊಂದು ದಿನ' (Uncut movie) ಸಿನಿಮಾವನ್ನು ನಿರ್ದೇಶನ ಮಾಡಿದ್ದ ವಿಕ್ರಮ್ ಯೋಗಾನಂದ್ 'ಕುಷ್ಕ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಮತ್ತೊಂದು ಹೊಸ ಪ್ರಯತ್ನದೊಂದಿಗೆ ಬರ್ತಿದ್ದಾರೆ. ಸದ್ಯ, ರಿಲೀಸ್ ದಿನಾಂಕ ಘೋಷಿಸಿದ ಚಿತ್ರತಂಡ ಪೋಸ್ಟರ್ ಹಾಗೂ ಟೈಟಲ್ ನಿಂದಲೇ ಕುತೂಹಲ ಮೂಡಿಸಿದೆ.

More from Filmibeat

English summary
Director Guruprasad playing lead role in 'Kushka' kannada movie. now, kushka movie ready to release
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X