»   » ಕನ್ನಡದ 'ಲೀ' ಮುಂದಿನ ವಾರ ರಿಲೀಸ್!

ಕನ್ನಡದ 'ಲೀ' ಮುಂದಿನ ವಾರ ರಿಲೀಸ್!

Posted By:
Subscribe to Filmibeat Kannada

ಸುಮಂತ್ ಶೈಲೆಂದ್ರ ಅಭಿನಯದ 'ಲೀ', ಚಿತ್ರೀಕರಣವನ್ನ ಮುಗಿಸಿ ಬಿಡುಗಡೆಗೆ ಸಿದ್ದವಾಗಿದೆ. ಇತ್ತೀಚೆಗಷ್ಟೇ ಸೆನ್ಸಾರ್ ಮುಗಿಸಿದ 'ಲೀ' ಚಿತ್ರಕ್ಕೆ, ಯು/ಎ ಪ್ರಮಾಣ ಪತ್ರ ಸಿಕ್ಕಿದ್ದು, ಜನವರಿ 13 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.

'ಲೀ' ಇದೊಂದು ಆಕ್ಷನ್ ಸಿನಿಮಾವಾಗಿದ್ದು, ಚಿತ್ರದಲ್ಲಿ ಮಾರ್ಷಲ್ ಆರ್ಟ್ಸ್‌ ಸಾಹಸ ಪ್ರಮುಖವಾಗಿದೆಯಂತೆ. 'ಲೀ' ಚಿತ್ರದಲ್ಲಿ 'ಉಷ್' ಎಂಬ ಕಲೆಯನ್ನು ಪ್ರಧಾನವಾಗಿ ತೆಗೆದುಕೊಳ್ಳಲಾಗಿದ್ದು, ಕನ್ನಡದಲ್ಲಿ ಈವರೆಗೂ ಯಾರೂ ಮಾಡಿರದಂಥ ಒಂದು ವಿಶಿಷ್ಟ ಪ್ರಯತ್ನವನ್ನ 'ಲೀ' ಮಾಡಿದೆಯಂತೆ.

Kannada Movie Lee Has Releasing on January 13th

ಸುಮಂತ್ ಈ ಚಿತ್ರಕ್ಕಾಗಿ 'ಉಷ್' ಎಂಬ ಏಳು ಮಾರ್ಷಲ್ ಆರ್ಟ್ಸ್‌ ಕಲೆಯನ್ನೊಳಗೊಂಡ ವಿದ್ಯೆಯನ್ನು ಮೂರು ತಿಂಗಳಿಂದ ಕಲಿತು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇನ್ನೂ 'ವಜ್ರಕಾಯ' ಚಿತ್ರದಲ್ಲಿ ಶಿವರಾಜಕುಮಾರ್ ಗೆ ನಾಯಕಿಯಾಗಿದ್ದ ನಭಾ ನಟೇಶ್, ಈ ಚಿತ್ರದಲ್ಲಿ ಸುಮಂತ್ ಗೆ ನಾಯಕಿಯಾಗಿ ನಟಿಸಿದ್ದಾರೆ.

'ಅಗ್ರಜ' ಚಿತ್ರವನ್ನ ನಿರ್ದೇಶನ ಮಾಡಿದ್ದ, ಹೆಚ್.ಎಂ.ಶ್ರೀನಂದನ ಅವರು ಲೀ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಗುರುಕಿರಣ್, ಆನಂದರಾಜ್ ವಿಕ್ರಮ್ ಸಂಗೀತ ಒದಗಿಸಿದ್ದಾರೆ. ಎಂ.ಯು.ನಂದಕುಮಾರ್ ಅವರ ಛಾಯಾಗ್ರಹಣ, ಮಾಸ್ತಿ ಅವರ ಸಂಭಾಷಣೆ, ವಚನ ಶ್ರೀರಾಮ್ ಅವರ ಸಾಹಿತ್ಯವಿದೆ. ಇನ್ನೂ ರಮೇಶ್ ನೃತ್ಯ ನಿರ್ದೇಶನ ಜೊತೆಗೆ ವಿನೋದ್, ಕುಂಗ್ ಫೂ ಚಂದ್ರು ಅವರ ಸಾಹಸ 'ಲೀ' ಚಿತ್ರಕ್ಕಿದೆ. ವಿವಿಧ್ ಡ್ರೀಮ್ಸ್ ಎಂಟರ್ ಟೈನ್ ಮೆಂಟ್ ಅಡಿಯಲ್ಲಿ ಸಾರತಿ ಸತೀಶ್, ದರ್ಶನ್ ಕೃಷ್ಣ, ಎಸ್ ಬಿ ವಿನಯ್ ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ.

Kannada Movie Lee Has Releasing on January 13th

ಉಳಿದಂದತೆ ಸುಮಂತ್ ಶೈಲೇಂದ್ರ ಹಾಗೂ ನಭಾನಟೇಶ್ ಜೊತೆಯಲ್ಲಿ, ಸ್ನೇಹ, ನಮನಂದಿ, ಸಾಧುಕೋಕಿಲ, ರಂಗಾಯಣ ರಘು, ರಾಹುಲ್‍ದೇವ್, ಜಯಶಂಕರ್, ಅಚ್ಯುತ್ ಕುಮಾರ್, ಚಿಕ್ಕಣ್ಣ, ಸುಚೇಂದ್ರ ಪ್ರಸಾದ್, ತಬಲನಾಣಿ ಮುಂತಾದವರ ಲೀ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

English summary
Sumanth Shailendra starrer ''Lee" is releasing on January 13th. The film which has been written and directed by Srinandan of 'Agraja' fame has been in the making since long time. The film stars Sumanth, Nabha Natesh, Sneha, Sadhu Kokila, Achyuth Kumar, Rahul Dev and others.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada