»   » ಜುಲೈ 31ಕ್ಕೆ ಕೋಮಲ್ 'ಲೊಡ್ಡೆ' ಭರ್ಜರಿ ಓಪನಿಂಗ್

ಜುಲೈ 31ಕ್ಕೆ ಕೋಮಲ್ 'ಲೊಡ್ಡೆ' ಭರ್ಜರಿ ಓಪನಿಂಗ್

Posted By:
Subscribe to Filmibeat Kannada

ಬಾಲಿವುಡ್ ನಲ್ಲಿ ಸೂಪರ್ ಹಿಟ್ ಆಗಿದ್ದ 'ಸೌದಾಗರ್' ಸಿನಿಮಾದ ಸ್ಪೂರ್ತಿಯಲ್ಲಿ ಕೋಮಲ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ 'ಲೊಡ್ಡೆ' ಚಿತ್ರ ಈಗಾಗಲೇ ಸೆನ್ಸಾರ್ ನಿಂದ ಕ್ಲೀನ್ ಚಿಟ್ ಪಡೆದುಕೊಂಡಿದೆ ಅಂತ ಫಿಲ್ಮಿ ಬೀಟಲ್ಲಿ ನಾವೇ ನಿಮಗೆ ಹೇಳಿದ್ವಿ ತಾನೇ.

ಭಾರಿ ಬಜೆಟ್ ನ ಸೆಟ್ ಹಾಕಿ 'ಲೊಡ್ಡೆ' ಚಿತ್ರದ ಹಾಡೊಂದನ್ನು ಕನ್ನಡ ಚಿತ್ರರಂಗದ ಮೇರು ನಟ ಡಾ.ವಿಷ್ಣುವರ್ಧನ್ ಅವರಿಗೆ ಅರ್ಪಿಸಲಾಗಿದೆ. 'ಸೌದಾಗರ್' ಚಿತ್ರದ ಎಳೆ ನಮ್ಮ ಚಿತ್ರಕ್ಕೆ ಸ್ಪೂರ್ತಿ. ಅಂತ ಚಿತ್ರತಂಡ ಅಭಿಪ್ರಾಯಪಟ್ಟಿದೆ. [ಸೆನ್ಸಾರ್ ನಿಂದ ಕ್ಲೀನ್ ಚಿಟ್ ಪಡೆದ ಕೋಮಲ್ 'ಲೊಡ್ಡೆ']

Kannada Movie 'Lodde' releasing on July 31

ಹಾಗಂತ ಈ ಸಿನೆಮಾ 'ಸೌದಾಗರ್' ರಿಮೇಕ್ ಅಲ್ಲಾ. ಎರಡು ಹಿರಿಯ ಕುಟುಂಬಗಳ ನಡುವೆ ಮನೆ ಮಾಡಿರುವ ದ್ವೇಷವನ್ನು ಮರೆಸುವ ನಾಯಕನ ಕಥೆಯೇ ಕೋಮಲ್ 'ಲೊಡ್ಡೆ' ಎಂಬುದು ನಿರ್ದೇಶಕರ ಅಂಬೋಣ.

Kannada Movie 'Lodde' releasing on July 31

ಇದೀಗ ಜುಲೈ 31 ರಂದು ಕೋಮಲ್ ಆಕಾಂಕ್ಷ ಪುರಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ 'ಲೊಡ್ಡೆ' ಎಲ್ಲೆಡೆ ಭರ್ಜರಿಯಾಗಿ ತೆರೆ ಕಾಣುತ್ತಿದೆ. ನಿರ್ದೇಶಕ ಎಸ್.ವಿ ಸುರೇಶ್ ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದು, ಜಯಂತ್ ಕಾಯ್ಕಿಣಿ ಸಾಹಿತ್ಯಕ್ಕೆ ಚಿನ್ನಿ ಚರಣ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಅವಿನಾಶ್, ಸಯಾಜಿ ಶಿಂಧೆ ಮುಂತಾದವರ ತಾರಾಗಣ ಚಿತ್ರದಲ್ಲಿದೆ.

English summary
Kannada Movie 'Lodde', is all set to release on July 31st. The Movie features Komal Kumar, Akanksha puri. The movie is directed by SV Suresh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada