ಹಾಟ್ ಪೂನಂ ಪಾಂಡೆ ಕನ್ನಡ ಚಿತ್ರ ಬಿಡುಗಡೆಗೆ ರೆಡಿ
ಇಷ್ಟಕ್ಕೂ 'ಲವ್ ಈಸ್ ಪಾಯಿಸನ್' ಚಿತ್ರದ ಕಥೆ ಏನಾಯ್ತು? ಚಿತ್ರ ಬಿಡುಗಡೆ ಆಯ್ತಾ ಇಲ್ಲವೇ ಎಂಬುದನ್ನೇ ಜನ ಮರೆತುಹೋಗಿದ್ದಾರೆ. ಇದೀಗ ಆ ಚಿತ್ರ ಬಿಡುಗಡೆಗೆ ಸಿದ್ಧವಾಗಿರುವ ಸುದ್ದಿ ಬಂದಿದೆ.
ಆಕಾಶ್ ಎಂಟರ್ ಪ್ರೈಸಸ್ ಲಾಂಛನದಡಿಯಲ್ಲಿ ಕೆ.ಸೋಮಶೇಖರ್ ಹಾಗೂ ಕೇಶವ ಮೂರ್ತಿ ನಿರ್ಮಿಸುತ್ತಿರುವ ಚೊಚ್ಚಲ ಕಾಣಿಕೆ "ಲವ್ ಈಸ್ ಪಾಯಿಸನ್" ಚಿತ್ರವು ಜೂನ್ 6 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಈ ಚಿತ್ರದ ಹಲವು ಆಕರ್ಷಣೆಗಳಲ್ಲಿ ಪೂನಂ ಪಾಂಡೆ ಅವರ ಸ್ಪೆಷಲ್ ಸಾಂಗ್ ಸಹ ಒಂದು. ['ಜಂಗಲ್ ಜಾಕಿ' ರಾಜೇಶನಿಗೆ ಮೋಸ ಮಾಡಿದ್ರಾ?]
ಮೈಸೂರಿನ ಶ್ರೀರಾಮಪುರದ ಬಳಿ ಪರಸಯ್ಯನಹುಂಡಿಯಲ್ಲಿರುವ ತಮ್ಮ ನಿವಾಸದ ಮೂರನೇ ಮಹಡಿಯಿಂದ ಕೆಳಗೆ ಬಿದ್ದು ರಾಜೇಶ್ ದುರಂತ ಸಾವಿಪ್ಪಿದ್ದ. ಇನ್ನೂ ಚಿತ್ರೀಕರಣ ಹಂತದಲ್ಲಿದ್ದ 'ಲವ್ ಈಸ್ ಪಾಯಿಸನ್' ಚಿತ್ರದ ಕಥೆಯೂ ಅಲ್ಲಿಗೆ ಮುಗಿಯಿತು ಎಂದೇ ಎಲ್ಲರೂ ಭಾವಿಸಿದ್ದರು. ಈಗ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.ಇತ್ತೀಚೆಗೆ ಈ ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ ಚಿತ್ರಕ್ಕೆ U/A ಸರ್ಟಿಫಿಕೇಟ್ ನೀಡಿದೆ. ಚಿತ್ರಕ್ಕೆ ರವಿಶಂಕರನಾಗ್ ಸಾಹಿತ್ಯ ಸಂಭಾಷಣೆ, ವೀನಸ್ ಮೂರ್ತಿ ಛಾಯಾಗ್ರಹಣ, ಸಾಯಿಕಿರಣ್ ಸಂಗೀತ, ಸಂಕರ್, ಸಧಾ, ರಘು ನೃತ್ಯ, ಈಶ್ವರ್ ಸಂಕಲನ, ಥ್ರಿಲ್ಲರ್ ಮಂಜು - ವಿಕ್ರಂ, ಸಾಹಸವಿರುವ ಚಿತ್ರಕ್ಕೆ ಚಿತ್ರಕಥೆ ಮತ್ತು ನಿರ್ದೇಶನ ನಂದನ ಪ್ರಭು.
ರಾಜೇಶ್ ಅಭಿನಯದ ಕೊನೆಯ ಚಿತ್ರ ಇದಾದ ಕಾರಣ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿಗಿಂತಲೂ ಹೆಚ್ಚಾಗಿ ಅನುಕಂಪವಿದೆ. ಈ ಅನುಕಂಪದ ಅಲೆ ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿದರೆ ರಾಜೇಶ್ ಆತ್ಮಕ್ಕೆ ಶಾಂತಿ ಸಿಕ್ಕಂತಾಗುತ್ತದೆ. ಇದಿಷ್ಟೇ ಅಲ್ಲದೆ ಅವರ ತಂದೆತಾಯಿಗೂ ಒಂದಷ್ಟು ಸಹಾಯವಾಗಬಹುದು.
ತಾರಾಗಣದಲ್ಲಿ ರಾಜೇಶ್, ಖುಷಿ, ದೂಹಿ, ಚಂದ್ರು, ಸಾಧುಕೋಕಿಲ, ಬುಲೆಟ್ ಪ್ರಕಾಶ್, ಹೊನ್ನವಳ್ಳಿ ಕೃಷ್ಣ, ಬಿರಾದಾರ್, ಪದ್ಮಾವಾಸಂತಿ, ನಾಗಮಂಗಲ ಜಯರಾಂ ಮುಂತಾದವರಿದ್ದಾರೆ. ಚಿತ್ರದ ಸ್ಪೆಷಲ್ ಹಾಡಿನಲ್ಲಿ ಪೂನಂಪಾಂಡೆ ಸೊಂಟ ಬಳುಕಿಸಿದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications












