ಸೆಪ್ಟೆಂಬರ್ ನಲ್ಲಿ 'ಲವ್ ಯು ಆಲಿಯ' ರಿಲೀಸ್ ಫಿಕ್ಸ್
ಸ್ಟೈಲಿಶ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ನಿರ್ದೇಶನದ 'ಲವ್ ಯು ಆಲಿಯ' ಸಿನಿಮಾ ಸೆಪ್ಟೆಂಬರ್ 17 ರಂದು ರಿಲೀಸ್ ಆಗಲಿದೆ. ನಿನ್ನೆಯಷ್ಟೇ ಸೆನ್ಸಾರ್ ಅಂಗಳದಲ್ಲಿ ಕ್ಲೀನ್ ಚಿಟ್ ಪಡೆದಿರುವ 'ಲವ್ ಯು ಆಲಿಯ' ಚಿತ್ರತಂಡ, ರಿಲೀಸ್ ಡೇಟ್ ನ ಫಿಕ್ಸ್ ಮಾಡಿದೆ.
'ಲವ್ ಯು ಆಲಿಯ' ಚಿತ್ರವನ್ನ ವೀಕ್ಷಿಸಿದ ಸೆನ್ಸಾರ್ ಮಂಡಳಿ U/A ಸರ್ಟಿಫಿಕೇಟ್ ನೀಡಿದೆ. ಜೊತೆಗೆ 'ಲವ್ ಯು ಆಲಿಯ' ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದೆ. ['ಲವ್ ಯು ಆಲಿಯ' ಚಿತ್ರದಲ್ಲಿ ಸನ್ನಿ ವಯ್ಯಾರ ನೋಡಿದ್ದೀರಾ?]

ಪತ್ರಕರ್ತ, ನಿರ್ಮಾಪಕ ಕಮ್ ನಿರ್ದೇಶಕ ಇಂದ್ರಜಿತ್ ಲಂಕೇಶ್ ನಿರ್ದೇಶಿಸಿರುವ ಸಿನಿಮಾ 'ಲವ್ ಯು ಆಲಿಯ'. ಸ್ತ್ರೀ ರೋಗ ತಜ್ಞ ಪಾತ್ರದಲ್ಲಿ ಮೊಟ್ಟ ಮೊದಲ ಬಾರಿಗೆ ರವಿಚಂದ್ರನ್ ಅಭಿನಯಿಸಿರುವ ಸಿನಿಮಾ ಇದು. ರವಿಚಂದ್ರನ್ ಗೆ ಜೋಡಿಯಾಗಿ ಬಹುಭಾಷಾ ನಟಿ ಭೂಮಿಕಾ ಚಾವ್ಲಾ ನಟಿಸಿದ್ದಾರೆ.
ಕಿರುತೆರೆ ಸ್ಟಾರ್ ಚಂದನ್, ಸುಧಾರಾಣಿ, ಶಕೀಲಾ ಸೇರಿದಂತೆ ಸೆಲೆಬ್ರಿಟಿಗಳ ದೊಡ್ಡ ಪಟ್ಟಿ ಚಿತ್ರದಲ್ಲಿದೆ. 'ಲವ್ ಯು ಆಲಿಯ' ಚಿತ್ರದ ಸ್ಪೆಷಲ್ ಸಾಂಗ್ ನಲ್ಲಿ ನೀಲಿ ಚಿತ್ರಗಳ ರಾಣಿ ಸನ್ನಿ ಲಿಯೋನ್ ಸೊಂಟ ಬಳುಕಿಸಿದ್ದಾರೆ. ಸನ್ನಿ ಜೊತೆ ಮಜಾ ಸ್ಟಾರ್ ಸೃಜನ್ ಲೋಕೇಶ್ ಹೆಜ್ಜೆ ಹಾಕಿದ್ದಾರೆ. [ಕ್ರೇಜಿಸ್ಟಾರ್ ಜನ್ಮದಿನಕ್ಕೆ ಇಂದ್ರಜಿತ್ ಲಂಕೇಶ್ ಕೊಟ್ಟ ಕಾಣಿಕೆ]
ಹಲವು ವಿಶೇಷತೆಗಳ ಆಗರವಾಗಿರುವ 'ಲವ್ ಯು ಆಲಿಯ' ಚಿತ್ರ ಸೆಪ್ಟೆಂಬರ್ 17 ರಂದು ರಿಲೀಸ್ ಆಗಲಿದೆ. ಚಿತ್ರವನ್ನ ನೋಡಿ ನೀವು ಮೆಚ್ಚಿಕೊಳ್ಳೋದು ಬಾಕಿ ಅಷ್ಟೆ.


Click it and Unblock the Notifications











