For Quick Alerts
  ALLOW NOTIFICATIONS  
  For Daily Alerts

  ಸೆನ್ಸಾರ್ ಪರೀಕ್ಷೆಯಲ್ಲಿ ಪಾಸಾದ 'ಮಾದ ಮತ್ತು ಮಾನಸಿ'

  By Suneetha
  |

  ಡೈನಾಮಿಕ್ ಹೀರೋ ಪ್ರಜ್ವಲ್ ದೇವರಾಜ್ ಮತ್ತು 'ಲೂಸಿಯಾ' ಬೆಡಗಿ ಶ್ರುತಿ ಹರಿಹರನ್ ಮೊದಲ ಬಾರಿಗೆ ಒಂದಾಗಿ ಕಾಣಿಸಿಕೊಂಡಿರುವ, 'ಮಾದ ಮತ್ತು ಮಾನಸಿ' ಚಿತ್ರದ ಬಿಡುಗಡೆಗೆ ಸೆನ್ಸಾರ್ ಮಂಡಳಿಯಿಂದ ಗ್ರೀನ್ ಸಿಗ್ನಲ್ ದೊರೆತಿದೆ.

  'ಯು' ಪ್ರಮಾಣ ಪತ್ರ ಪಡೆದುಕೊಂಡಿರುವ 'ಮಾದ ಮತ್ತು ಮಾನಸಿ' ಇನ್ನೇನು ಸದ್ಯದಲ್ಲೇ ತೆರೆಯ ಮೇಲೆ ಬಂದು ಅಭಿಮಾನಿಗಳನ್ನು ರಂಜಿಸಲಿದ್ದಾರೆ. ರಾಜೇಶ್ ಮತ್ತು ದೇವಿ ಫಿಲಂಸ್ ಲಾಂಛನದಲ್ಲಿ, ಮನೋಮೂರ್ತಿ ಅವರು ಸಂಗೀತ ನೀಡುವುದರ ಜೊತೆಗೆ ಈ ಚಿತ್ರಕ್ಕೆ ಬಂಡವಾಳ ಕೂಡ ಹೂಡಿದ್ದಾರೆ.[ಮಾದ-ಮಾನಸಿ ಜೊತೆ 'ಬಿಗ್ ಬಾಸ್' ಅನುಶ್ರೀ ಟಪ್ಪಾಂಗುಚ್ಚಿ]

  ಇದೇ ತಿಂಗಳಲ್ಲಿ ಸಿನಿಮಾ ಬಿಡುಗಡೆಯಾಲಿದ್ದು, ಕೆಲವೇ ದಿನಗಳಲ್ಲಿ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಲಿದೆ. ಸತೀಶ್ ಪ್ರಧಾನ್ ನಿರ್ದೇಶನದ, ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ನರಸಿಂಹಮೂರ್ತಿ (ನರ್ಸಿ) ಅವರು.[ಮಾದನಿಗೆ ಮಾನಸಿಯಾಗಿ 'ರಾಟೆ' ರಾಣಿ ಶ್ರುತಿ ಹರಿಹರನ್]

  Kannada movie 'Maada-Manasi' gets 'U' certificate

  ಛಾಯಾಗ್ರಾಹಕ ಕೆ.ಎಸ್. ಚಂದ್ರಶೇಖರ್ ಅವರ ಕ್ಯಾಮೆರಾ ಕೈ ಚಳಕ ಈ ಚಿತ್ರಕ್ಕಿದ್ದು, ಇಮ್ರಾನ್ ಸರ್ದಾರಿಯಾ, ಕಲೈ, ಪ್ರಭು ಶ್ರೀನಿವಾಸ್ ನೃತ್ಯ ಸಂಯೋಜನೆ ಮಾಡಿದ್ದಾರೆ.

  ಪ್ರಜ್ವಲ್ ದೇವರಾಜ್, ಶೃತಿ ಹರಿಹರನ್, ಮುಖ್ಯ ಭೂಮಿಕೆಯಲ್ಲಿ ಮಿಂಚಿದ್ದು, ಇನ್ನುಳಿದಂತೆ ರಂಗಾಯಣ ರಘು, ಬುಲೆಟ್ ಪ್ರಕಾಶ್, ಶೋಭರಾಜ್, ಪವನ್, ವಾಣಿಶ್ರೀ, ಶೃತಿ ನಾಯಕ್, ನಿರಂಜನ್ ಯತಿರಾಜ್, ಮುಂತಾದವರು ಪ್ರಮುಖವಾಗಿ ತಾರಾಗಣದಲ್ಲಿ ಕಾಣಿಸಿಕೊಂಡಿದ್ದಾರೆ.[ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಬಗ್ಗೆ ಹಬ್ಬಿರುವ ಸುದ್ದಿ ನಿಜವೇ?]

  English summary
  Kannada movie 'Maada mattu Manasi' gets 'U' certificate from the Censor Board. Kannada actor Prajwal Devaraj, Kannada actress Sruthi hariharan in the lead role. The movie is directed by Satish Pradhan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X