For Quick Alerts
  ALLOW NOTIFICATIONS  
  For Daily Alerts

  ಕನ್ನಡಕ್ಕೆ ಒಬ್ಬರೇ 'ಸೂಪರ್ ಸ್ಟಾರ್'.., 'ದುನಿಯಾ' ವಿಜಿಗಿಲ್ಲ 'ಆ' ಸ್ಟಾರ್.!

  By Harshitha
  |

  ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಅನಿಲ್ ಮತ್ತು ಉದಯ್ ಎಂಬ ಇಬ್ಬರು ಖಳನಟರ ದುರಂತ ಸಾವಿಗೆ ಕಾರಣವಾಗಿದ್ದ 'ಮಾಸ್ತಿ ಗುಡಿ' ಸಿನಿಮಾ ಈಗ ನಟ ದುನಿಯಾ ವಿಜಯ್ ಮತ್ತು 'ಸೂಪರ್ ಸ್ಟಾರ್' ಬಿರುದು ಮೂಲಕ ಸದ್ದು ಮಾಡುತ್ತಿದೆ.

  ನಟ ದುನಿಯಾ ವಿಜಯ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆ ಮಾಡಲಾದ 'ಮಾಸ್ತಿ ಗುಡಿ' ಟ್ರೈಲರ್ ನಲ್ಲಿ ದುನಿಯಾ ವಿಜಯ್ ರವರಿಗೆ 'ಸೂಪರ್ ಸ್ಟಾರ್' ಎಂಬ ಬಿರುದು ನೀಡಿರುವುದು ಉಪೇಂದ್ರ ಅಭಿಮಾನಿಗಳನ್ನ ಕೆರಳಿಸಿತ್ತು.[ದುನಿಯಾ ವಿಜಯ್ ಹುಟ್ಟುಹಬ್ಬ, 'ಮಾಸ್ತಿಗುಡಿ' ಟ್ರೈಲರ್ ರಿಲೀಸ್!]

  ಇದೇ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಯುದ್ಧ ನಡೆದು ಈಗ ದುನಿಯಾ ವಿಜಯ್ ಗೆ 'ಸೂಪರ್ ಸ್ಟಾರ್' ಅಂತ ಕರೆಯದಿರಲು 'ಮಾಸ್ತಿ ಗುಡಿ' ತಂಡ ನಿರ್ಧರಿಸಿದೆ.

  ಅಲ್ಲಿ ರಜನಿಕಾಂತ್, ಇಲ್ಲಿ ಉಪೇಂದ್ರ.!

  ಅಲ್ಲಿ ರಜನಿಕಾಂತ್, ಇಲ್ಲಿ ಉಪೇಂದ್ರ.!

  ಕಾಲಿವುಡ್ ನಲ್ಲಿ ರಜನಿಕಾಂತ್ 'ಸೂಪರ್ ಸ್ಟಾರ್' ಅಂತ ಫೇಮಸ್ ಆಗಿದ್ರೆ, ಕರ್ನಾಟಕದಲ್ಲಿ ನಿಜವಾದ 'ಸೂಪರ್ ಸ್ಟಾರ್' ಉಪೇಂದ್ರ ಎಂಬುದು ಉಪ್ಪಿ ಅಭಿಮಾನಿಗಳ ಅಭಿಪ್ರಾಯ.!

  'ಸೂಪರ್ ಸ್ಟಾರ್' ದುನಿಯಾ ವಿಜಯ್

  'ಸೂಪರ್ ಸ್ಟಾರ್' ದುನಿಯಾ ವಿಜಯ್

  'ಮಾಸ್ತಿ ಗುಡಿ' ಟ್ರೈಲರ್ ನಲ್ಲಿ 'ಸೂಪರ್ ಸ್ಟಾರ್ ದುನಿಯಾ ವಿಜಯ್' ಕಂಗೊಳಿಸಿರುವುದು ಹೀಗೆ....

  ತಗಾದೆ ತೆಗೆದ ಉಪ್ಪಿ ಅಭಿಮಾನಿಗಳು..

  ತಗಾದೆ ತೆಗೆದ ಉಪ್ಪಿ ಅಭಿಮಾನಿಗಳು..

  'ಮಾಸ್ತಿ ಗುಡಿ' ಟ್ರೈಲರ್ ನಲ್ಲಿ 'ಸೂಪರ್ ಸ್ಟಾರ್' ದುನಿಯಾ ವಿಜಯ್ ಅಂತ ಬರೆದಿರುವುದನ್ನ ನೋಡಿದ ಉಪೇಂದ್ರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಯುದ್ಧ ಆರಂಭಿಸಿದರು.

  ಕೂಡಲೆ ಟೈಟಲ್ ಹಿಂಪಡೆಯಬೇಕು.!

  ಕೂಡಲೆ ಟೈಟಲ್ ಹಿಂಪಡೆಯಬೇಕು.!

  ದುನಿಯಾ ವಿಜಯ್ ರವರಿಗೆ ನೀಡಿರುವ 'ಸೂಪರ್ ಸ್ಟಾರ್' ಎಂಬ ಟೈಟಲ್ ನ ದಯವಿಟ್ಟು ಹಿಂಪಡೆಯಬೇಕು ಅಂತ ಉಪೇಂದ್ರ ಅಭಿಮಾನಿಗಳು 'ಮಾಸ್ತಿ ಗುಡಿ' ಚಿತ್ರತಂಡವನ್ನ ಮನವಿ ಮಾಡಿತ್ತು. ಸಾಲದಕ್ಕೆ ಫಿಲ್ಮ್ ಚೇಂಬರ್ ಮೆಟ್ಟಿಲು ತುಳಿದರು.

  'ಮಾಸ್ತಿ ಗುಡಿ' ಚಿತ್ರತಂಡ ಹೀಗೆ ಮಾಡಿದ್ಯಾಕೆ?

  'ಮಾಸ್ತಿ ಗುಡಿ' ಚಿತ್ರತಂಡ ಹೀಗೆ ಮಾಡಿದ್ಯಾಕೆ?

  ''ವಿಜಿ ಅಭಿಮಾನಿಗಳ ಇಚ್ಛೆಯಂತೆ ಸೂಪರ್ ಸ್ಟಾರ್ ಅಂತ ಬಿರುದು ನೀಡಿದ್ವಿ ಅಷ್ಟೆ. ಅದರ ಹೊರತಾಗಿ ನಾನು ಅಥವಾ ನಿರ್ದೇಶಕ ನಾಗಶೇಖರ್ ಈ ನಿರ್ಧಾರ ಮಾಡಲಿಲ್ಲ'' ಎನ್ನುತ್ತಾರೆ 'ಮಾಸ್ತಿ ಗುಡಿ' ನಿರ್ಮಾಪಕ ಸುಂದರ್.ಪಿ.ಗೌಡ್ರು.

  'ಸೂಪರ್ ಸ್ಟಾರ್' ಟೈಟಲ್ ಹಿಂಪಡೆಯಲಾಗಿದೆ

  'ಸೂಪರ್ ಸ್ಟಾರ್' ಟೈಟಲ್ ಹಿಂಪಡೆಯಲಾಗಿದೆ

  ನಟ ದುನಿಯಾ ವಿಜಯ್ ಜೊತೆ ನಿರ್ಮಾಪಕ ಸುಂದರ್.ಪಿ.ಗೌಡ್ರು ಮತ್ತು ನಾಗಶೇಖರ್ ಚರ್ಚೆ ಮಾಡಿ, 'ಸೂಪರ್ ಸ್ಟಾರ್' ಎಂಬ ಟೈಟಲ್ ನ ಹಿಂಪಡೆದಿದ್ದಾರಂತೆ.

  ಉಪೇಂದ್ರ ಅಭಿಮಾನಿಗಳು ಫುಲ್ ಖುಷ್

  ಉಪೇಂದ್ರ ಅಭಿಮಾನಿಗಳು ಫುಲ್ ಖುಷ್

  'ಸೂಪರ್ ಸ್ಟಾರ್' ಎಂಬ ಟೈಟಲ್ ನ 'ಮಾಸ್ತಿ ಗುಡಿ' ತಂಡ ವಾಪಸ್ ಪಡೆದಿರುವುದು ಉಪೇಂದ್ರ ಅಭಿಮಾನಿಗಳಲ್ಲಿ ಸಂತಸ ತಂದಿದೆ.

  English summary
  Kannada Movie 'Maasthi Gudi' team has decided to take off 'Super Star' tag from Duniya Vijay.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X