ಬಿರುಗಾಳಿ ಎಬ್ಬಿಸಿದ ಮದಗಜ ಹಾಡಿನ ಅಬ್ಬರ

ಕನ್ನಡ ಸಿನಿಮಾ ರಂಗ ಕೊರೊನಾ ಬಳಿಕ ಮತ್ತೆ ಸಹಜ ಸ್ಥಿತಿಯತ್ತ ಮರಳುತ್ತಿದೆ. ಸದ್ಯ ಸ್ಯಾಂಡಲ್‌ವುಡ್ ಮದಗಜ ಮೈಕೊಡವಿ ನಿಂತಿದ್ದಾನೆ. ನಟ ಶ್ರೀಮುರಳಿ ಅಭಿನಯದ ಮದಗಜ ಸಿನಿಮಾ ಹಾಡಿನಿಂದ ಸಖತ್ ಸದ್ದು ಮಾಡುತ್ತಾ ಇದೆ. ಈ ಹಿಂದೆ ಮದಗಜ ಮೆಲೋಡಿ ಹಾಡಿನ ಮೂಲಕ ಗಮನ ಸೆಳೆದಿತ್ತು. ನಟಿ ಶ್ರೀಮುರಳಿ ಮತ್ತು ಆಶಿಕಾ ರಂಗನಾಥ್ ಕಾಣಿಸಿಕೊಂಡು ಮೆಲೋಡಿ ಲವ್‌ ಟ್ರ್ಯಾಕ್ ಸಿನಿಪ್ರಿಯರ ಮನ ಗೆದ್ದಿದೆ. ಗೆಳೆಯ ನನ್ನ ಗೆಳೆಯ ಅನ್ನೊ ಹಾಡಿನ ಬಳಿಕ ಈಗ ಮಸ್ತ್ ಮಾಸ್‌ ಹಾಡು ರಿಲೀಸ್ ಮಾಡಿದೆ ಚಿತ್ರತಂಡ.

ಮದಗಜ ಚಿತ್ರದ ಟೈಟಲ್‌ ಹಾಡು ರಿಲೀಸ್‌ ಆಗಿದೆ. ಈ ಹಾಡು ನಟ ಶ್ರೀಮುರಳಿಯ ಇಂಟ್ರಡಕ್ಷನ್ ಹಾಡು. ಚಿತ್ರದ ನಾಯಕನ ಗುಣಗಾನ ಹಾಡಿನಲ್ಲಿದೆ. ಮದಗಜನ ಅವತಾರ ತಾಳಿರುವ ಶ್ರೀಮುರಳಿ ಸಿನಿಮಾದಲ್ಲಿ ಹೇಗೆ ಇರಲಿದ್ದಾರೆ ಎನ್ನುವುರದ ಸೂಚನೆ ಕೊಟ್ಟಿದೆ ಈ ಹಾಡು. ಯುದ್ಧ ಸಾರಿದ.. ಚಂಡ ಮಾರುತ. ಎನ್ನುವ ಸಾಲುಗಳಿಂದ ಹಾಡು ಆರಂಭ ಆಗುತ್ತಾ. ಇಡೀ ಹಾಡು ಹೀಗೆ ನಾಯಕ ನಟನ ಗುಣಗಾನ ಮಾಡುತ್ತಾ ಸಾಗುತ್ತದೆ. ಸಾಹಿತ್ಯದ ಜೊತೆಗೆ ಸಂಗೀತ ಮತ್ತು ಛಾಯಾಗ್ರಹಣ ಹೆಚ್ಚಾಗಿ ಸೆಳೆಯುತ್ತದೆ. ಹಾಡಿನ ವಿಶುವಲ್ ಬ್ಯೂಟಿ ಮನಸ್ಸಿಗೆ ನಾಟುವಂತೆ ಇದೆ. ಶ್ರೀ ಮುರಳಿ ಲುಕ್ ಕಾಸ್ಟ್ಯೂಂ ಎಲ್ಲವೂ ಹೊಸದು ಎನಿಸುತ್ತದೆ. ಇನ್ನುಳಿದಂತೆ ಹಾಡಿನ ಮತ್ತೊಂದು ಪ್ರಮುಖ ಸ್ಥಾನದಲ್ಲಿ ಸಹ ನೃತ್ಯ ಕಲಾವಿದರು ಇದ್ದಾರೆ. ಶ್ರೀಮುರಳಿ ಜೊತೆಗೆ ಹೆಜ್ಜೆ ಹಾಕುವ ನೂರಾರು ಕಲಾವಿದರು ಹಾಡಿನ ಮೆರುಗನ್ನು ಹೆಚ್ಚಿಸಿದ್ದಾರೆ.

 Kannada Movie Madagaja Title Track Release

ಸಂಗೀತ ನಿರ್ದೇಶಕ ರವಿ ಬಸ್ರೂರು ಈ ಹಾಡಿಗೆ ಭಿನ್ನ ಸಂಗೀತ ನೀಡಿದ್ದಾರೆ. ಮದಗಜ ಎನ್ನುವ ಸಿಗ್ನೇಚರ್ ಟ್ಯೂನ್ ಹೆಚ್ಚು ಗಮನ ಸೆಳೆಯುತ್ತದೆ. ಹಾಡಿನ ಸಂಗೀತಕ್ಕೆ ತಕ್ಕಂತೆ ಮೂಡಿ ಬಂದಿದೆ ನೃತ್ಯ ನಿರ್ದೇಶನ ಮತ್ತು ಕ್ಯಾಮೆರಾ ವರ್ಕ್. ಇನ್ನೂ ಹಾಡಿನ ಆರಂಭದಲ್ಲಿ ನಟ ಶ್ರೀಮುರಳಿ ಬೈಕ್‌ ಏರಿ ಬರುವ ದೃಶ್ಯ ಅಭಿಮಾನಿಗಳ ಹಾರ್ಟ್‌ ಫೇವರಿಟ್ ಆಗಿದೆ.

 Kannada Movie Madagaja Title Track Release

ಇನ್ನು ಮದಗಜ ಚಿತ್ರದ ಬಗ್ಗೆ ಹೇಳ ಬೇಕು ಅಂದರೆ, ಮದಗಜ ರಿಲೀಸ್‌ಗೆ ಸಿದ್ಧವಿದೆ. ಸಿನಿಮಾ ಕೆಲಸಗಳು ಸಂಪೂರ್ಣವಾಗಿ ಮುಗಿದಿವೆ. ಹಾಗಾಗಿ ಇದೇ ವರ್ಷ ಡಿಸೆಂಬರ್ 3ರ ರಂದು ದೇಶಾದ್ಯಂತ ಮದಗಜ ರಿಲೀಸ್‌ ಆಗುತ್ತಿದೆ. ಈಗಾಗಲೇ ಚಿತ್ರ ತಂಡ ಥಿಯೇಟರ್ ಸೆಟಪ್ ಮಾಡಲು ಆರಂಭಿಸಿದೆ. ಭಾರತದಾದ್ಯಂತ ಮದಗಜ 3 ಭಾಷೆಗಳಲ್ಲಿ 1500ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ರಿಲೀಸ್‌ ಆಗಲಿದೆ. ಕನ್ನಡ ಸೇರಿದಂತೆ ಸಿನಿಮಾ ತಮಿಳು ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ರಿಲೀಸ್‌ ಆಗಲಿದೆ. ಮೂರು ಭಾಷೆಗಳಲ್ಲೂ ಒಟ್ಟಿಗೆ ಸಿನಿಮಾ ರಿಲೀಸ್‌ ಮಾಡಲಾಗುತ್ತದೆ. ಸದ್ಯ ಕನ್ನಡದಲ್ಲಿ ರಿಲೀಸ್‌ ಆಗಿರೋ ಟೀಸರ್, ಟ್ರೇಲರ್‌ ಮತ್ತು ಹಾಡುಗಳು ನಿರೀಕ್ಷೆ ಹುಟ್ಟು ಹಾಕಿವೆ. ಮದಗಜ ಚಿತ್ರದ ಟೀಸರ್ ತಮಿಳು ಮತ್ತು ತೆಲುಗಿನಲ್ಲೂ ರಿಲೀಸ್‌ ಆಗಿತ್ತಿದೆ. ಈಗ ಕನ್ನಡದಲ್ಲಿ ರಿಲೀಸ್ ಆಗಿರುವ ಟೈಟಲ್‌ ಹಾಡನ್ನು ತಮಿಳು ಮತ್ತು ತೆಲುಗಿನಲ್ಲಿ ರಿಲೀಸ್‌ ಮಾಡಲಾಗುತ್ತದೆ.

 Kannada Movie Madagaja Title Track Release

ಈ ಚಿತ್ರ ಬಹುಕೋಟಿ ವೆಚ್ಚದಲ್ಲಿ ತಯಾರಾಗಿದ್ದು, ನಿರ್ಮಾಪಕ ಉಮಾಪತಿ ಬಂಡವಾಳ ಹೂಡಿದ್ದಾರೆ. ಚಿತ್ರದ ಮೇಕಿಂಗ್‌ ಅದ್ಬುತ ಅನ್ನೋದನ್ನ ಈಗಾಗಲೇ ರಿಲೀಸ್‌ ಆಗಿರೋ ಚಿತ್ರದ ತುಣುಕುಗಳು ಹೇಳುತ್ತಿವೆ. ಅದರಲ್ಲೂ ಟೀಸರ್ ನಲ್ಲಿ ಇರುವಂತಹ ಡೈಲಾಗ್‌ಗಳು ವಿಶೇಷವಾಗಿ ಗಮನ ಸೆಳೆದಿವೆ. ಶ್ರೀಮುರಳಿ ಖಡಕ್‌ ಧ್ವಯಲ್ಲಿ ಕೇಳುವ ಸಂಭಾಷಣೆ ಪಾತ್ರದ ಮೇಲೆ ಭರವಸೆ ಮೂಡಿಸುತ್ತದೆ. ನಟ ಶ್ರೀಮುರುಳಿ ಕೂಡ ವಿಭಿನ್ನ ಪಕ್ಕಾ ಮಾಸ್‌ ಅಂಡ್‌ ಕ್ಲಾಸ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರಗಡ್‌ ರೋರಿಂಗ್‌ ಸ್ಟಾರ್‌ಗೆ ನಟಿ ಆಶಿಕಾ ರಂಗನಾಥ್ ಜೊತೆಯಾಗಿದ್ದಾರೆ. ಜಗಪತಿ ಬಾಬು, ದೇವಯಾನಿಯಂತಹ ಕಲಾವಿದರು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಆಶಿಕಾ ರಂಗನಾಥ್ ಪಕ್ಕ ಹಳ್ಳಿ ಹುಡುಗಿಯ ಲುಕ್‌ನಲ್ಲಿ ಕಿಕ್‌ ಕೊಡ್ತಾರೆ. ನಿರ್ದೇಶಕ ಮಹೇಶ್ ಕುಮಾರ್ ಮದಗಜ ಸಿನಿಮಾದ ಮೂಲಕ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. ಈ ಹಿಂದಿ ಅಯೋಗ್ಯ ಸಿನಿಮಾ ಮಾಡಿ ಗೆದ್ದಂತಹ ಮಹೇಶ್, ಈ ಚಿತ್ರದ ಮೂಲಕ ತಮಿಳು, ತೆಲುಗಿಗೂ ಎಂಟ್ರಿ ಕೊಡ್ತಿದ್ದಾರೆ. ಸದ್ಯ ರಿಲೀಸ್ ಆಗಿರುವ ಹಾಡು ಸಿನಿಮಾದ ಬಗ್ಗೆ ಮಾತನಾಡುವಂತೆ ಮಾಡಿದೆ.

More from Filmibeat

English summary
Sri Murali Starrer Madagaja Movie Title Track Release
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X